ಸುಡಾನ್: ಇಲ್ಲಿನ ಸೆರಾಮಿಕ್ ಫ್ಯಾಕ್ಟರಿಯಲ್ಲಿ ಎಲ್ಪಿಜಿ ಟ್ಯಾಂಕರ್ ಸ್ಫೋಟಗೊಂಡು ನಡೆದ ಭೀಕರ ದುರಂತದಲ್ಲಿ 18 ಭಾರತೀಯರು ಬಲಿಯಾಗಿದ್ದಾರೆ. ಹಲವು ಮಂದಿಗೆ ಗಂಭೀರ ಗಾಯಗಳಾಗಿವೆ. ಸುಡಾನ್ ರಾಜಧಾನಿ ಖರ್ತೌಮ್ನ ಬಹ್ರಿ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ.
ಟ್ಯಾಂಕರ್ ಸ್ಫೋಟಗೊಂಡು ಒಟ್ಟು 23 ಮಂದಿ ಬಲಿಯಾಗಿದ್ದಾರೆ. 18 ಮಂದಿ ಭಾರತೀಯರು ಮೃತಪಟ್ಟಿರುವ ಬಗ್ಗೆ ಸರ್ಕಾರ ಖಚಿತಪಡಿಸಿದೆ. ಘಟನೆ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಮೃತಪಟ್ಟವರ ಪೈಕಿ ಮೂವರು ತಮಿಳುನಾಡು ಮೂಲದವ್ರು, ಒಬ್ಬರು ಗುಜರಾತ್, ಇಬ್ಬರು ಉತ್ತರಪ್ರದೇಶ ಮೂಲದವರು ಎಂದು ಸದ್ಯಕ್ಕೆ ತಿಳಿದುಬಂದಿದೆ.
The Embassy representative has rushed to the site. A 24-hour emergency hotline +249-921917471 has been set up by @EoI_Khartoum.
Embassy is also putting out updates on social media.Our prayers are with the workers and their families.
— Dr. S. Jaishankar (@DrSJaishankar) December 4, 2019
Published On - 5:55 pm, Wed, 4 December 19