ಪ್ರಧಾನಿ ಮೋದಿ ಲಕ್ಷದ್ವೀಪ ಪ್ರವಾಸದ ವಿಚಾರವಾಗಿ ಮಾಲ್ಡೀವ್ಸ್ ಸಚಿವ ಅವಹೇಳನಕಾರಿ ಹೇಳಿಕೆ ನೀಡಿದ್ದರೂ ಈ ವಿಚಾರದಲ್ಲಿ ಮಾಲ್ಡೀವ್ಸ್ ಸರ್ಕಾರ ಅಂತರ ಕಾಯ್ದುಕೊಂಡಿದೆ. ಆದರೆ ಪ್ರಧಾನಿ ವಿರುದ್ಧದ ಹೇಳಿಕೆ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವೆ ಮರಿಯಮ್ ಶಿಯುನಾ ಅವರು ಮಾಡಿದ ಅವಹೇಳನಕಾರಿ ಹೇಳಿಕೆಗಳಿಂದ ಮಾಲ್ಡೀವ್ಸ್ ಸರ್ಕಾರ ಅಂತರ ಕಾಯ್ದುಕೊಂಡಿದೆ.
ಮಾಲ್ಡೀವ್ಸ್ ಸರ್ಕಾರ ಹೇಳಿಕೆಯಲ್ಲಿ ಸಚಿವರ ಅಭಿಪ್ರಾಯ ವೈಯಕ್ತಿಕ, ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳಲ್ಲ ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತದಲ್ಲಿ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪಗಳ ನಡುವಿನ ಹೋಲಿಕೆಗಳು ಪ್ರಾರಂಭವಾದವು.
ಈ ಹೇಳಿಕೆಯಿಂದಾಗಿ ಇದೀಗ ಎಕ್ಸ್ನಲ್ಲಿ Boycott Maldives ಹ್ಯಾಶ್ಟ್ಯಾಗ್ನಲ್ಲಿ ಅಭಿಯಾನ ಶುರುವಾಗಿದೆ. ಪ್ರವಾಸೋದ್ಯಮವನ್ನು ಅವಲಂಬಿಸಿರುವ ಮಾಲ್ಡೀವ್ಸ್‌ಗೆ ಭಾರತದ ಶಕ್ತಿಯ ಬಗ್ಗೆ ತಿಳಿದಿಲ್ಲ ಎಂದು ಭಾರತೀಯರು ಹೇಳುತ್ತಿದ್ದಾರೆ. ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿದ ನಂತರ ಲಕ್ಷದ್ವೀಪಕ್ಕೆ ಆದ್ಯತೆ ನೀಡುವವರು ಅನೇಕರಿದ್ದಾರೆ.
ಮತ್ತಷ್ಟು ಓದಿ: Boycott Maldives: ಪ್ರಧಾನಿ ಮೋದಿಯ ಲಕ್ಷದ್ವೀಪ ಭೇಟಿ ಲೇವಡಿ ಮಾಡಿದ ಮಾಲ್ಡೀವ್ಸ್ ಸಚಿವ, ಭಾರತೀಯರು ಮಾಡಿದ್ದೇನು?
ಮಾಲ್ಡೀವ್ಸ್ ಸಚಿವ ಅಬ್ದುಲ್ಲಾ ಮೊಹ್ಜುಮ್ ಮಜೀಸ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮಾಲ್ಡೀವ್ಸ್ ಹಾಗೂ ಭಾರತದ ಪ್ರವಾಸೋದ್ಯಮಕ್ಕೆ ಹೋಲಿಕೆ ಮಾಡಿದ್ದಾರೆ, ಭಾರತಕ್ಕಿಂತ ಅಲ್ಲಿ ರೆಸಾರ್ಟ್ನಿಂದ ಹಿಡಿದು ಎಲ್ಲಾ ಮೂಲಸೌಕರ್ಯಗಳು ಹೆಚ್ಚು ಎಂದು ಬರೆದುಕೊಂಡಿದ್ದಾರೆ.
ಮಾಲ್ಡೀವ್ಸ್ನ ಮತ್ತೊಬ್ಬ ನಾಯಕ ಜಾಹಿದ್ ರಮೀಜ್ ಪೋಸ್ಟ್ ಮಾಡಿದ್ದು, ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಬಗ್ಗೆ ಮಾತನಾಡಿದ್ದು, ಖಂಡಿತವಾಗಿಯೂ ಮೋದಿಯವರದ್ದು ಉತ್ತಮ ಹೆಜ್ಜೆ, ಆದರೆ ನಮ್ಮೊಂದಿಗೆ ಸ್ಪರ್ಧಿಸುವುದು ಭ್ರಮೆ. ನಮ್ಮಂತಹ ಸೇವೆಯನ್ನು ಒದಗಿಸುವುದು ಸಾಧ್ಯವೇ ಎಂದು ಬರೆದಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ