ಮಾಲ್ಡೀವ್ಸ್​​ ಪರಿಸರ ಸಚಿವ ಅಲಿ ಸೋಲಿಹ್​​ಗೆ ಇರಿತ ; ಹಲ್ಲೆಕೋರನ ಬಂಧನ

ರಾಜಧಾನಿ ಮಾಲೇಯಲ್ಲಿ ಈ ಘಟನೆ ನಡೆದಿದ್ದು, ಸಚಿವರ ಎಡ ಭುಜಕ್ಕೆ ಗಾಯವಾಗಿದೆ. ಹಲ್ಲೆಕೋರನನ್ನು ತಕ್ಷಣವೇ ಬಂಧಿಸಲಾಗಿದೆ.

ಮಾಲ್ಡೀವ್ಸ್​​ ಪರಿಸರ ಸಚಿವ ಅಲಿ ಸೋಲಿಹ್​​ಗೆ ಇರಿತ ; ಹಲ್ಲೆಕೋರನ ಬಂಧನ
ಸಚಿವರ ಮೇಲೆ ಹಲ್ಲೆ ನಡೆಸುತ್ತಿರುವ ದುಷ್ಕರ್ಮಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 24, 2022 | 12:46 PM

ಮಾಲೆ: ಮಾಲ್ಡೀವ್ಸ್​​ನ (Maldives) ಪರಿಸರ ಸಚಿವ ಅಲಿ ಸೋಲಿಹ್ (Ali Solih) ಮೇಲೆ ಸೋಮವಾರ ಮಧ್ಯಾಹ್ನ ಹಲ್ಲೆ ನಡೆದಿದ್ದು, ದುಷ್ಕರ್ಮಿಯೊಬ್ಬ ಸಚಿವರಿಗೆ ಕತ್ತಿಯಿಂದ ಇರಿದಿದ್ದಾನೆ. ರಾಜಧಾನಿ ಮಾಲೆೇಯಲ್ಲಿ ಈ ಘಟನೆ ನಡೆದಿದ್ದು, ಸಚಿವರ ಎಡ ಭುಜಕ್ಕೆ ಗಾಯವಾಗಿದೆ. ಹಲ್ಲೆಕೋರನನ್ನು ತಕ್ಷಣವೇ ಬಂಧಿಸಲಾಗಿದೆ. ಪರಿಸರ, ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನ ಸಚಿವರಾಗಿದ್ದಾರೆ ಸೋಲಿಹ್. ಜುಮ್ಹೂರಿ ಪಕ್ಷದ ವಕ್ತಾರರೂ ಆಗಿದ್ದಾರೆ ಇವರು. ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಸೋಲಿಹ್ ನೇತೃತ್ವದ ಆಡಳಿತಾರೂಡ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿಯೊಂದಿಗೆ ಜಮ್ಹೂರಿ ಪಾರ್ಟಿ ಸರ್ಕಾರದಲ್ಲಿ ಪಾಲುದಾರರಾಗಿದ್ದಾರೆ.ದಿ ಟೈಮ್ಸ್ ಆಫ್ ಅಬ್ದು ಪ್ರಕಾರ ಸೋಲಿಹ್ ಹಲ್ಹುಮಾಲೆ ರಸ್ತೆಯಲ್ಲಿ ಮೊಟಾರ್ ಸೈಕಲ್ ಓಡಿಸುಕೊಂಡು ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಸೋಲಿಹ್​​ನ ಕುತ್ತಿಗೆ ಮೇಲೆ ಇರಿಯುವ ಮುನ್ನ ಹಲ್ಲೆಕೋರ ಕುರಾನ್​​ನ ಕೆಲವು ಸಾಲುಗಳನ್ನು ಹೇಳಿದ್ದಾನೆ. ಕುತ್ತಿಗೆಗೆ ಇರಿಯಲು ನೋಡಿದ್ದರೂ ಅದು ಗುರಿ ತಪ್ಪಿ ಎಡಟ ಭುಜಕ್ಕೆ ತಾಗಿದೆ.

ದಾಳಿಕೋರನಿಂದ ರಕ್ಷಿಸಿಕೊಳ್ಳಲು ಸೋಲಿಹ್ ಮೋಟಾರ್‌ಸೈಕಲ್‌ನಿಂದ ಇಳಿದು ಓಡಿಹೋಗಿದ್ದು ಹುಲ್ಹುಮಾಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಲ್ಡೀವ್ಸ್, ಹಿಂದೂ ಮಹಾಸಾಗರದ ದ್ವೀಪಸಮೂಹ.  ಮೇ 2021 ರಲ್ಲಿ  ರಾಜಧಾನಿ ಮಾಲೆಯಲ್ಲಿ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಮನೆಯ ಹೊರಗೆ ಬಾಂಬ್ ಸ್ಫೋಟವಾಗಿದ್ದು ಅದರಲ್ಲಿ ಅವರು ಗಂಭೀರ ಗಾಯಗೊಂಡಿದ್ದರು.  ನಶೀದ್ ಅವರ ಕಾರಿನ ಬಳಿ ನಿಲ್ಲಿಸಿದ್ದ ಬೈಕ್‌ನಲ್ಲಿ ಸ್ಫೋಟಕವನ್ನು ಅಳವಡಿಸಲಾಗಿತ್ತು. ನಶೀದ್‌ಗೆ ಚಿಕಿತ್ಸೆ ನೀಡಿದ ನಂತರ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ವಿಮಾನದಲ್ಲಿ ಸಾಗಿಸಲಾಯಿತು. ಹೆಚ್ಚುತ್ತಿರುವ ಇಸ್ಲಾಮಿಕ್ ಮೂಲಭೂತವಾದ ಮತ್ತು ಜಾಗತಿಕ ಉಗ್ರಗಾಮಿ ಸಂಘಟನೆಗಳಿಗೆ ನೇಮಕಾತಿಯಿಂದ ಮಾಲ್ಡೀವ್ಸ್ ಬೆದರಿಕೆಯನ್ನು ಎದುರಿಸುತ್ತಿದೆ.

ಸ್ಪೀಕರ್ ನಶೀದ್ ಜೊತೆಗೆ ಅಧ್ಯಕ್ಷ ಸೋಲಿಹ್ ನೇತೃತ್ವದ ಪ್ರಸ್ತುತ ಸರ್ಕಾರವು ಆಡಳಿತ ಮತ್ತು ಸಾಮಾಜಿಕ ನಿಯಮಗಳ ಕಡೆಗೆ ಅದರ ವಿಧಾನದಲ್ಲಿ ಪ್ರಜಾಪ್ರಭುತ್ವ ಮತ್ತು ಉದಾರವಾದಿಯಾಗಿದೆ. ಅಂತಾರಾಷ್ಟ್ರೀಯ ಬೆಂಬಲದೊಂದಿಗೆ ಹಿಂದೂ ಮಹಾಸಾಗರದ ರಾಷ್ಟ್ರದಲ್ಲಿ ಉಗ್ರ ಕೃತ್ಯಗಳ ಬೆಳವಣಿಗೆಯ ವಿರುದ್ಧ ಎಂಡಿಪಿ ಸುದೀರ್ಘ ಹೋರಾಟವನ್ನು ನಡೆಸುತ್ತಿದೆ.

Published On - 12:46 pm, Wed, 24 August 22

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ