ಗಾಲ್ಫ್​ ​ ಮೈದಾನದಲ್ಲಿ ಡ್ರೋನ್​ ಮೂಲಕ ಬಿಯರ್​ ವಿತರಣೆ: ವೈರಲ್​ ಆಯ್ತು ವಿಡಿಯೋ

| Updated By: ಸಾಧು ಶ್ರೀನಾಥ್​

Updated on: Dec 14, 2020 | 3:17 PM

ಮೈಕಲ್​ ಜೋರ್ಡನ್​ ಎಂಬುವವರು ಫ್ಲೋರಿಡಾದಲ್ಲಿ ಹೊಸ ಗಾಲ್ಫ್​ ಮೈದಾನ​ ಸಿದ್ಧಪಡಿಸಿದ್ದಾರೆ. ಡ್ರೋನ್​ ಮೂಲಕ ಆಟಗಾರರಿಗೆ ಬಿಯರ್​ ಹಾಗೂ ಸ್ನಾಕ್ಸ್​​ಗಳನ್ನು ಪೂರೈಕೆ ಮಾಡಿದ್ದಾರೆ.

ಗಾಲ್ಫ್​ ​ ಮೈದಾನದಲ್ಲಿ ಡ್ರೋನ್​ ಮೂಲಕ ಬಿಯರ್​ ವಿತರಣೆ: ವೈರಲ್​ ಆಯ್ತು ವಿಡಿಯೋ
ಗಾಲ್ಫ್​ ​ ಮೈದಾನದಲ್ಲಿ ಡ್ರೋನ್​ ಮೂಲಕ ಬಿಯರ್​ ವಿತರಣೆ: ವಿಡಿಯೋ ನೋಡಿ
Follow us on

ಗಾಲ್ಫ್​ ಕ್ರೀಡೆ ತುಂಬಾನೇ ಭಿನ್ನವಾದ ಆಟ. ಇದು ಶ್ರೀಮಂತರ ಆಟ ಎಂದೂ ಕರೆಯಲ್ಪಡುತ್ತದೆ. ಹತ್ತಾರು ಎಕರೆ ಪ್ರದೇಶದಲ್ಲಿ ಗಾಲ್ಫ್​ ಮೈದಾನ ವಿಶಾಲವಾಗಿ, ವೈಭವೋಪೇತವಾಗಿ ಹರಡಿಕೊಂಡಿರುತ್ತದೆ. ಇಲ್ಲಿ ಜನ ಓಡಾಡೋಕ್ಕೆ ಅಂತಾನೇ ಚಿಕ್ಕ ಚಿಕ್ಕ  ವಾಹನಗಳನ್ನು ಬಳಕೆ ಮಾಡುತ್ತಾರೆ. ಅದೂ ಓಕೆ.. ಆದ್ರೆ ಇಲ್ಲೋರ್ವ ವ್ಯಕ್ತಿ ಗಾಲ್ಫ್​ ಮೈದಾನಕ್ಕೆ ಡ್ರೋನ್​ ಮೂಲಕ ಬಿಯರ್​ ಪೂರೈಕೆ ಮಾಡಿ ಎಲ್ಲರನ್ನು ಅಚ್ಚರಿಯ ಕೊಳದಲ್ಲಿ ಮುಳುಗಿಸಿದ್ದಾನೆ.

ಮೈಕಲ್​ ಜೋರ್ಡನ್​ ಎಂಬುವವರು ಫ್ಲೋರಿಡಾದಲ್ಲಿ ಹೊಸ ಗಾಲ್ಫ್ ಮೈದಾನ​ ಸಿದ್ಧಪಡಿಸಿದ್ದಾರೆ. ಡ್ರೋನ್​ ಮೂಲಕ ಆಟಗಾರರಿಗೆ ಬಿಯರ್​ ಹಾಗೂ ಸ್ನಾಕ್ಸ್​​ಗಳನ್ನು ಪೂರೈಕೆ ಮಾಡಿದ್ದಾರೆ.

ಮಾಜಿ ಟೆನ್ನಿಸ್​ ಆಟಗಾರ ಕ್ಯಾರೋಲಿನ್ ವೋಜ್ನಿಯಾಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ. ಇದರಲ್ಲಿ ಗಾಲ್ಫ್​ ಕ್ರೀಂಡಾಗಣದಲ್ಲಿ ವ್ಯಕ್ತಿಯೋರ್ವ ಡ್ರೋನ್​ ಮೂಲಕ ಸ್ನಾಕ್ಸ್​ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೆ, ಆಧುನಿಕ ವ್ಯವಸ್ಥೆ ಬಳಕೆ ಮಾಡಿಕೊಂಡು ಬಿಯರ್​ ಹಾಗೂ ತಿಂಡಿ ಪೂರೈಕೆ ಮಾಡುವ ವಿಧಾನವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

 

ಪಾಕಿಸ್ತಾನದ ಶಸ್ತ್ರಾಸ್ತ್ರ ಹೊತ್ತ, ಚೀನಾ ನಿರ್ಮಿತ ಡ್ರೋನ್ ಹೊಡೆದುರುಳಿಸಿದ ಭಾರತದ ಸೇನೆ