AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರತೆಗೂ ಕೋವಿಡ್: ಹಿಮಚಿರತೆಗೆ ಕೊರೊನಾ ಸೋಂಕು, ಎರಡು ಚಿರತೆಗಳಲ್ಲಿ ರೋಗ ಲಕ್ಷಣ

ಮೃಗಾಲಯದಲ್ಲಿ ಕೊವಿಡ್​-19 ಸೋಂಕು ಬಾರದೆ ಇರಲು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿದರೂ ಸಹ, ಚಿರತೆಗಳು ವೈರಸ್ ಪೀಡಿತವಾಗಿವೆ. ಲಕ್ಷಣ ರಹಿತ ಸೋಂಕಿಗೆ ಒಳಗಾಗಿದ್ದ ಯಾವುದೋ ಸಿಬ್ಬಂದಿಯಿಂದ ಬಂದಿರಬಹುದು ಎನ್ನಲಾಗಿದೆ.

ಚಿರತೆಗೂ ಕೋವಿಡ್: ಹಿಮಚಿರತೆಗೆ ಕೊರೊನಾ ಸೋಂಕು, ಎರಡು ಚಿರತೆಗಳಲ್ಲಿ ರೋಗ ಲಕ್ಷಣ
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on:Dec 13, 2020 | 10:42 PM

Share

ಕೆಂಟಕಿ: ಅಮೆರಿಕದ ಕೆಂಟಕಿ ಮೃಗಾಲಯದಲ್ಲಿರುವ ಹಿಮಚಿರತೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಮೆರಿಕದಲ್ಲಿ ಇದು ಮೊದಲ ಪ್ರಕರಣ. ಹಾಗೇ ಲೂಯಿಸ್ವಿಲ್ಲೆ ಮೃಗಾಲಯದಲ್ಲಿರುವ ಇನ್ನೆರಡು ಹಿಮಚಿರತೆಗಳನ್ನೂ ಕೊರೊನಾ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಲ್ಲಿನ ಕೃಷಿ ಇಲಾಖೆಯ ರಾಷ್ಟ್ರೀಯ ಪಶುವೈದ್ಯಕೀಯ ಸೇವೆಗಳ ಪ್ರಯೋಗಾಲಯಗಳು ತಿಳಿಸಿವೆ.

ಈ ಮೂರು ಚಿರತೆಗಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದು, ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಒಂದು ಚಿರತೆಯಲ್ಲಿ ಕೊರೊನಾ ದೃಢಪಟ್ಟಿದ್ದು, ಮತ್ತೆರಡು ಪ್ರಾಣಿಗಳ ವರದಿ ಬರಬೇಕಿದೆ. ಮೂರೂ ಚಿರತೆಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಲಾಗಿದೆ..ಚಿರತೆಗಳ ಹೊರತುಪಡಿಸಿ ಮೃಗಾಲಯದಲ್ಲಿ ಇರುವ ಇನ್ಯಾವುದೇ ಪ್ರಾಣಿಗಳಲ್ಲೂ ಕೊರೊನಾ ಲಕ್ಷಣಗಳು ಇಲ್ಲ ಎಂದು ಪ್ರಯೋಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮೃಗಾಲಯದಲ್ಲಿ ಕೊರೊನಾ ಸೋಂಕು ಬಾರದಂತೆ ತಡೆಯಲು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿದರೂ ಸಹ, ಚಿರತೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಲಕ್ಷಣ ರಹಿತ ಸೋಂಕಿಗೆ ಒಳಗಾಗಿದ್ದ ಯಾವುದೋ ಸಿಬ್ಬಂದಿಯಿಂದ ಬಂದಿರಬಹುದು. ಪ್ರಾಣಿಗಳಿಂದ ಮನುಷ್ಯರಿಗೆ ಸೋಂಕು ಹರಡುವ ಸಾಧ್ಯತೆ ತೀರ ಕಡಿಮೆ. ಹಾಗಾಗಿ ಮೃಗಾಲಯವನ್ನು ತೆರೆದೇ ಇಡಲಾಗುತ್ತದೆ. ಆದರೆ ಸೋಂಕಿತ ಹಿಮ ಚಿರತೆಗಳ ಪ್ರದರ್ಶನಕ್ಕೆ ಅವಕಾಶ ಇಲ್ಲ ಎಂದು ಮೃಗಾಲಯದ ಆಡಳಿತ ತಿಳಿಸಿದೆ.

ಕೋವಿಡ್- 19| ಕಳೆದ 24ಗಂಟೆಗಳಲ್ಲಿ ಭಾರತದಲ್ಲಿ 30,006 ಹೊಸ ಪ್ರಕರಣಗಳು ಪತ್ತೆ

Published On - 6:57 pm, Sun, 13 December 20