ಕುರಾನ್​ಗೆ ಅವಮಾನ ಆರೋಪ, ಪೊಲೀಸ್​ ಠಾಣೆ ಎದುರೇ ವ್ಯಕ್ತಿಯನ್ನು ಜೀವಂತವಾಗಿ ದಹಿಸಿದ ಜನರು

ಕುರಾನ್​ನ ಕೆಲವು ಪುಟಗಳನ್ನು ಸುಟ್ಟುಹಾಕಿದ್ದಾರೆ ಎಂದು ಆರೋಪಿಸಿ ಜನರ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ, ಆತನನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಕುರಾನ್​ಗೆ ಅವಮಾನ ಆರೋಪ, ಪೊಲೀಸ್​ ಠಾಣೆ ಎದುರೇ ವ್ಯಕ್ತಿಯನ್ನು ಜೀವಂತವಾಗಿ ದಹಿಸಿದ ಜನರು
Edited By:

Updated on: Jun 21, 2024 | 3:22 PM

ಕುರಾನ್​(Quran)ಗೆ ಅವಮಾನ ಮಾಡಿದ್ದಾನೆಂದು ಆರೋಪಿಸಿ ಜನರು ವ್ಯಕ್ತಿಯೊಬ್ಬನನ್ನು ಪೊಲೀಸ್​ ಠಾಣೆ ಎದುರೇ ಜೀವಂತವಾಗಿ ದಹಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಕುರಾನ್​ಗೆ ಅವಮಾನ ಮಾಡಿದ್ದಾನೆಂದು ಸುಮಾರು 20 ಜನರು ಸೇರಿ ವ್ಯಕ್ತಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೋಪಗೊಂಡ ಜನರು ಮಸೀದಿಯಲ್ಲಿ ಮೈಕ್​ನಲ್ಲಿ ಘೋಷಣೆ ಮಾಡಿ ಎಲ್ಲರೂ ಸೇರುವಂತೆ ಮಾಡಿದರು, ಪೊಲೀಸ್​ ಠಾಣೆಯ ಸುತ್ತ ಜನರ ಗುಂಪು ಸುತ್ತುವರೆಯಿತು. ಪೊಲೀಸ್​ ಕಸ್ಟಡಿಯಲ್ಲಿರುವ ವ್ಯಕ್ತಿಯನ್ನು ಎಳೆದುತಂದು ಪೊಲೀಸರೆದುರೇ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ.

ಕುರಾನ್‌ಗೆ ಅವಮಾನ ಮಾಡಲಾಗಿದೆ ಎಂಬ ಸುದ್ದಿ ಜನರಲ್ಲಿ ಹರಡಿದ ತಕ್ಷಣ ಅವರು ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸ್​ ಠಾಣೆಯಲ್ಲಿದ್ದ ವ್ಯಕ್ತಿಯನ್ನು ಎಳೆದುತಂದು ಹತ್ಯೆ ಮಾಡಿದ್ದಾರೆ. ಪೊಲೀಸ್​ ಅಧಿಕಾರಿ ಮಾತನಾಡಿ, ಮೃತರು ಸಿಯಾಲ್‌ಕೋಟ್‌ನ ನಿವಾಸಿಯಾಗಿದ್ದು, ಮಾದಯನ್ ತೆಹಸಿಲ್‌ನಲ್ಲಿ ಪವಿತ್ರ ಕುರಾನ್‌ನ ಕೆಲವು ಪುಟಗಳನ್ನು ಸುಟ್ಟುಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: ಏ 20ರಂದು ಬೇಲೂರಿನ ಶ್ರೀಚನ್ನಕೇಶವ ಸ್ವಾಮಿ ರಥೋತ್ಸವ: ಕುರಾನ್ ಪಠಣಕ್ಕೆ ಅವಕಾಶ ನೀಡದಂತೆ ಒತ್ತಾಯ

ಜನರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ, ಆದರೂ ಅಷ್ಟು ದೊಡ್ಡ ಗುಂಪನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ. ಗುಂಪು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿ ವ್ಯಕ್ತಿಯನ್ನು ಥಳಿಸಿ ಹೊರಗೆ ಕರೆದೊಯ್ದಿದೆ. ವ್ಯಕ್ತಿಯ ಸಾವಿನ ನಂತರ, ಗುಂಪು ಅವನ ದೇಹಕ್ಕೆ ಬೆಂಕಿ ಹಚ್ಚಿತು.

ಜನರು ವ್ಯಕ್ತಿ ಸಾಯುವವರೆಗೂ ದೊಡ್ಡಯಿಂದ ಹೊಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪಾಕಿಸ್ತಾನದ ಹಲವರು ಇದನ್ನು ಖಂಡಿಸಿದ್ದಾರೆ.

ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಪ್ರದೇಶದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಜನರು ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಿದ್ದರಿಂದ ಪೊಲೀಸರು ಕೂಡ ತಮ್ಮ ಜೀವವನ್ನು ಉಳಿಸಿಕೊಳ್ಳಲು ಓಡಿಹೋಗಬೇಕಾಯಿತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ