ಏ 20ರಂದು ಬೇಲೂರಿನ ಶ್ರೀಚನ್ನಕೇಶವ ಸ್ವಾಮಿ ರಥೋತ್ಸವ: ಕುರಾನ್ ಪಠಣಕ್ಕೆ ಅವಕಾಶ ನೀಡದಂತೆ ಒತ್ತಾಯ

ಏಪ್ರಿಲ್ 20ರಂದು ಬೇಲೂರಿನ ಶ್ರೀಚನ್ನಕೇಶವ ಸ್ವಾಮಿ ದಿವ್ಯ ರಥೋತ್ಸವದಂದು ಕುರಾನ್ ಪಠಾಣಕ್ಕೆ ಅವಕಾಶ ನೀಡದಂತೆ ಬೇಲೂರು ಚನ್ನಕೇಶವ ಹಿತರಕ್ಷಣಾ ವೇದಿಕೆ ಕಾರ್ಯಕರ್ತರಿಂದ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ರಥೋತ್ಸವದಂದು ಕುರಾನ್ ಪಠಣ ಮಾಡಬೇಕು ಎಂದು ಉಲ್ಲೇಖ ಇರುವುದಿಲ್ಲ. ಹಾಗಾಗಿ ಕುರಾನ್ ಪಠಣ ಮಾಡಲು ಅವಕಾಶ ನೀಡಿದಂತೆ ಒತ್ತಾಯ ಮಾಡಲಾಗಿದೆ.

ಏ 20ರಂದು ಬೇಲೂರಿನ ಶ್ರೀಚನ್ನಕೇಶವ ಸ್ವಾಮಿ ರಥೋತ್ಸವ: ಕುರಾನ್ ಪಠಣಕ್ಕೆ ಅವಕಾಶ ನೀಡದಂತೆ ಒತ್ತಾಯ
ಚನ್ನಕೇಶವ ಹಿತರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಕೆ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on:Mar 07, 2024 | 5:28 PM

ಹಾಸನ, ಮಾರ್ಚ್​ 7: ಏಪ್ರಿಲ್​​ 20 ರಂದು ಐತಿಹಾಸಿಕ ಬೇಲೂರಿನ ಶ್ರೀಚನ್ನಕೇಶವ ಸ್ವಾಮಿ ದಿವ್ಯ ರಥೋತ್ಸವ (Sri Channakeshava Swami Rathotsava) ನಡೆಯಲಿದ್ದು, ಈ ವೇಳೆ ಕುರಾನ್ ಪಠಾಣಕ್ಕೆ ಅವಕಾಶ ನೀಡದಂತೆ ಬೇಲೂರು ಚನ್ನಕೇಶವ ಹಿತರಕ್ಷಣಾ ವೇದಿಕೆ ಕಾರ್ಯಕರ್ತರಿಂದ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಮ್ಯಾನ್ಯುಯಲ್ ಕೈಪಿಡಿಯಲ್ಲಿ ರಥೋತ್ಸವದ ದಿನದಂದು ಮೇದೂರು ಖಾಜಿ ಸಾಹೇಬರ ಕುಟುಂಬದವರಿಗೆ ಗೌರವ ಮತ್ತು ಧಾನ್ಯ ಕಾಣಿಕೆ ನೀಡಬೇಕು ಎಂದು ಉಲ್ಲೇಖವಿದೆಯೇ ಹೊರೆತು ಕೈಪಿಡಿಯಲ್ಲಿ ಎಲ್ಲೂ ಸಹ ರಥದ ಎದುರು ಕುರಾನ್ ಪಠಣ ಮಾಡಬೇಕು ಎಂದು ಉಲ್ಲೇಖ ಇರುವುದಿಲ್ಲ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಸಂಸ್ಥೆ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಯಾವುದೇ ಅನ್ಯ ಧರ್ಮೀಯರ ಆಚರಣೆ, ಚಟುವಟಿಕೆ ಹಾಗೂ ಪಠಣ ಮಾಡಲು ಅವಕಾಶವಿಲ್ಲ. ಆದ್ದರಿಂದ ಕುರಾನ್ ಪಠಣ ಮಾಡಲು ಅವಕಾಶ ನೀಡಿದಂತೆ ಒತ್ತಾಯ ಮಾಡಲಾಗಿದೆ.

ಇದನ್ನೂ ಓದಿ: ಹನಕೆರೆ‌ ಬಳಿ ಅಂಡರ್‌ಪಾಸ್ ನಿರ್ಮಾಣ: ಧರಣಿ ಕುಳಿತ್ತಿದ್ದ ರವಿ ಗಣಿಗಗೆ ಅನುಮೋದನೆ ಪತ್ರ ರವಾನಿಸಿದ NHAI

ಶ್ರೀ ಚನ್ನಕೇಶವ ದೇವಸ್ಥಾನ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಸಂಸ್ಥೆ ಅಡಿಯಲ್ಲಿ ಬರುತ್ತದೆ. ಹಾಗಾಗಿ ಹಿಂದೂ ಧಾರ್ಮಿಕ ವಿಧಿ ವಿಧಾನಗಳಂತೆ ಪೂಜೆ, ಹೋಮ, ಹವನ ನಡೆಸಬೇಕು.

ಪ್ರತಿ ವರ್ಷ ನಡೆಯುವ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಮೇದೂರಿನ ಖಾಜಿಗಳು ರಥೋತ್ಸವದಲ್ಲಿ ಕುರಾನ್ ಪಠಣ ಮಾಡುವುದು ಸಂಪ್ರದಾಯ. ಆದರೆ ಈ ಸಂಪ್ರದಾಯವನ್ನ 1932ರಿಂದ ಆಚೆಗೆ ಸೇರಿಸಲಾಗಿದೆ. 1931ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಕೋಮುಗಲಭೆ ಬಳಿಕ ಕೋಮುಸಾಮರಸ್ಯದ ಹೆಸರಿನಲ್ಲಿ ಅಂದಿನ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಸೇರಿಸಿದ್ದಾರೆ. ಈ ಹಿಂದೆ ಈ ಆಚರಣೆ ಇರಲಿಲ್ಲ ಎನ್ನುವುದು ಹಿಂದೂಪರ ಸಂಘಟನೆಗಳ ವಾದ. ಈ ಬಗ್ಗೆ ಹಾಸನದ ವೈದ್ಯ ಡಾ. ರಮೇಶ್ ದಾಖಲೆಗಳ ಸಮೇತ ಬರೆದಿರುವ ಬೇಲೂರಿನ ಶ್ರೀ ಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ ಪುಸ್ತಕದಲ್ಲಿ ಈ ಆಚರಣೆ ಇಲ್ಲ ಎನ್ನೋದನ್ನ ಹೇಳಿದ್ದಾರೆ.

ಇದನ್ನೂ ಓದಿ: ಮಹಾಶಿವರಾತ್ರಿ: ಅರಮನೆ ಆವರಣದಲ್ಲಿರುವ ದೇವಾಲಯದಲ್ಲಿ ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಅಲಂಕಾರ! ಮಿಸ್ ಮಾಡದೆ ನೋಡಿ

ಧಾರ್ಮಿಕ ಸಾಮರಸ್ಯಕ್ಕಾಗಿ ಎಲ್ಲಾ ಜಾತಿ, ಜನಾಂಗಗಳನ್ನು ಒಳಗೊಂಡು ಇಂತಹ ಆಚರಣೆ ಬಂದಿದೆ. ಆದರೆ ಕೆಲವರು ಕೋಮು ಸಾಮರಸ್ಯ ಹಾಳು ಮಾಡಲು ಮುಂದಾಗಿದ್ದಾರೆ. ಹೊರಗಿನಿಂದ ಬಂದ ಕೆಲವರು ಇಂತಹ ಆಕ್ಷೇಪ ಕೇಳಿಬಂದಿತ್ತು. ಹಿಂದೆ ದೇಗುಲದ ಮೆಟ್ಟಿಲಿನ ಮೇಲೆ ಕುರಾನ್ ಪಠಣ ಆಗುತ್ತಿತ್ತು. ಐದಾರು ವರ್ಷಗಳಿಂದ ಅವರು ರಥದ ಮುಂದೆ ಕುರಾನ್ ಪಠಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:19 pm, Thu, 7 March 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ