ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ಸ್ ಚರ್ಚ್(Church) ನಲ್ಲಿ ವ್ಯಕ್ತಿಯೊಬ್ಬರು ಬೆತ್ತಲಾಗಿ ಕಾಣಿಸಿಕೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ವ್ಯಕ್ತಿಯು ಚರ್ಚ್‌ನ ಬಲಿಪೀಠದ ಬಳಿ ತನ್ನ ಬಟ್ಟೆಗಳನ್ನು ತೆಗೆದಿದ್ದಾನೆ. ಉಕ್ರೇನ್ ಯುದ್ಧದ ವಿರುದ್ಧ ಪ್ರತಿಭಟಿಸಲು ಅವನು ಇದನ್ನು ಮಾಡಿದನೆಂದು ನಂಬಲಾಗಿದೆ. ನಂತರ, ಚರ್ಚ್‌ನ ಭದ್ರತಾ ಸಿಬ್ಬಂದಿ ಅವರನ್ನು ತಡೆದು ಇಟಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವ್ಯಾಟಿಕನ್‌ನ ಸೇಂಟ್ ಪೀಟರ್ ಚರ್ಚ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಬಟ್ಟೆಗಳನ್ನು ತೆಗೆದಿದ್ದಾನೆ. ಉಕ್ರೇನ್‌ನ ಮಕ್ಕಳನ್ನು ಉಳಿಸಬೇಕು ಎಂದು ವ್ಯಕ್ತಿಯ ಬೆನ್ನಿನ ಮೇಲೆ ಬರೆಯಲಾಗಿದೆ. ಚರ್ಚ್ ಮುಚ್ಚುವ ಮುನ್ನ ಈ ಘಟನೆ ನಡೆದಿದೆ. ಘಟನೆ ನಡೆದ ತಕ್ಷಣ ವ್ಯಾಟಿಕನ್ ಸಿಟಿಯ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಇಟಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮತ್ತಷ್ಟು ಓದಿ: Russia-Ukraine War: ಉಕ್ರೇನ್ ರಾಜಧಾನಿಯ ಮೇಲೆ ರಷ್ಯಾ ದಾಳಿ, ವಸತಿ ಕಟ್ಟಡದ ಮೇಲ್ಛಾವಣಿಯ ಮೇಲೆ ಬೆಂಕಿ
ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಘಟನೆಯ ಕುರಿತು ಇಟಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿಸಿ ಇಟಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. 2016ರ ಹಿಂದೆ ಲೂಯಿಸ್ ಕಾರ್ಲೋಸ್ ಜಿಯಾಂಪೊಲಿ (44 ವರ್ಷ) ಎಂಬುವವರು ಸಹ ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಚರ್ಚ್ ಅನ್ನು ಬೆತ್ತಲೆಯಾಗಿ ಪ್ರವೇಶಿಸಿದ್ದನು. ಅವರು ಬ್ರೆಜಿಲ್ ನಿವಾಸಿಯಾಗಿದ್ದರು. ತನಿಖೆಯ ವೇಳೆ ಆರೋಪಿಯ ಮಾನಸಿಕ ಸಮತೋಲನ ಸರಿಯಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ಅವರನ್ನು ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 am, Fri, 2 June 23