AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia-Ukraine War: ಉಕ್ರೇನ್ ರಾಜಧಾನಿಯ ಮೇಲೆ ರಷ್ಯಾ ದಾಳಿ, ವಸತಿ ಕಟ್ಟಡದ ಮೇಲ್ಛಾವಣಿಯ ಮೇಲೆ ಬೆಂಕಿ

ರಷ್ಯಾ ಮತ್ತೆ ಉಕ್ರೇನ್ (Russia-Ukraine War) ರಾಜಧಾನಿ ಕೈವ್​​ದ ಮೇಲೆ ಡ್ರೋನ್ ದಾಳಿಯನ್ನು ಮಾಡಿದೆ. ಇಂದು ಮುಂಜಾನೆ ಈ ದಾಳಿ ನಡೆದಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

Russia-Ukraine War: ಉಕ್ರೇನ್ ರಾಜಧಾನಿಯ ಮೇಲೆ ರಷ್ಯಾ ದಾಳಿ, ವಸತಿ ಕಟ್ಟಡದ ಮೇಲ್ಛಾವಣಿಯ ಮೇಲೆ ಬೆಂಕಿ
ಉಕ್ರೇನ್ ಮೇಲೆ ರಷ್ಯಾ ದಾಳಿ
ಅಕ್ಷಯ್​ ಪಲ್ಲಮಜಲು​​
|

Updated on: May 20, 2023 | 10:26 AM

Share

ರಷ್ಯಾ ಮತ್ತೆ ಉಕ್ರೇನ್ (Russia-Ukraine War) ರಾಜಧಾನಿ ಕೈವ್​​ದ ಮೇಲೆ ಡ್ರೋನ್ ದಾಳಿಯನ್ನು ಮಾಡಿದೆ. ಇಂದು ಮುಂಜಾನೆ ಈ ದಾಳಿ ನಡೆದಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. ಉಕ್ರೇನಿಯನ್ ರಾಜಧಾನಿಯ ಮೂರು ಜಿಲ್ಲೆಗಳಲ್ಲಿ ಈ ದಾಳಿ ನಡೆದಿದ್ದು, ವಸತಿ ಕಟ್ಟಡದ ಮೇಲ್ಛಾವಣಿಯ ಮೇಲೆ ಬೆಂಕಿ ಬಿದ್ದಿದೆ ಎಂದು ಅಧಿಕಾರಿಗಳ ವರದಿ ತಿಳಿಸಿದೆ. ಕೈವ್ ರಾತ್ರಿಯಿಡೀ ರಷ್ಯಾದ ವಾಯು ದಾಳಿಗೆ ಒಳಗಾಯಿತು. ಡ್ನಿಪ್ರೊವ್ಸ್ಕಿ ಜಿಲ್ಲೆಯ ವಸತಿ ಸಂಕೀರ್ಣಗಳಲ್ಲಿ 9 ಅಂತಸ್ತಿನ ಕಟ್ಟಡದ ಛಾವಣಿಯ ಮೇಲೆ ಬೆಂಕಿ ಬಿದ್ದಿದೆ ಎಂದು ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಟೆಲಿಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ, ಸಾವು- ನೋವುಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಲಾಗಿದೆ.

ದಾಳಿಯಿಂದ ಬೆಂಕಿಯಿಂದ ಕೂಡಿದ ಅವಶೇಷಗಳು ನಿರ್ಜನ ಪ್ರದೇಶಲ್ಲಿ ಬಿದ್ದಿರುವುದನ್ನು ಕಾಣಿಸಿಕೊಂಡಿದೆ ಎಂದು ಕೈವ್‌ನ ನಾಗರಿಕ ಮತ್ತು ಮಿಲಿಟರಿ ಆಡಳಿತದ ಮುಖ್ಯಸ್ಥ ಸೆರ್ಹಿ ಪಾಪ್ಕೊ ಹೇಳಿದ್ದಾರೆ. ಈ ಪ್ರದೇದಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ:Russia-Ukraine war ರಷ್ಯಾದ ತೈಲ ಮತ್ತು ಅನಿಲ ಆಮದುಗಳ ಮೇಲೆ ನಿಷೇಧ ಘೋಷಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಶನಿವಾರ 12:45 am (2145 GMT ಶುಕ್ರವಾರ), ರಷ್ಯಾದಿಂದ ಬಂದ ಡ್ರೋನ್‌ಗಳು ಕೈವ್ ಪ್ರದೇಶದ ಕಡೆಗೆ ಹೋಗುತ್ತಿವೆ ಎಂದು ಉಕ್ರೇನಿಯನ್ ಸೇನೆ ಹೇಳಿದೆ. ಈ ಡ್ರೋನ್​​​ಗಳು ಹೋದ ನಂತರ ಕೈವ್‌ನ ಈಶಾನ್ಯದಲ್ಲಿರುವ ಚೆರ್ನಿಹಿವ್ ನಗರದಲ್ಲಿ ಸ್ಫೋಟಗಳು ವರದಿಯಾಗಿವೆ. ರಷ್ಯಾದ ಆಕ್ರಮಿತ ಮರಿಯುಪೋಲ್‌ನ ಗಡಿಪಾರು ಕೌನ್ಸಿಲ್ ಸಹ ಅಜೋವ್ ಸಮುದ್ರದಲ್ಲಿ ನಗರದಲ್ಲಿ ಸ್ಫೋಟವಾಗಿರುವ ವರದಿಯಾಗಿದೆ. ಉಕ್ರೇನಿಯನ್ ಮಿಲಿಟರಿ ಹೇಳಿರುವ ಪ್ರಕಾರ, ಕೈವ್ ಮತ್ತು ಚೆರ್ನಿಹಿವ್ ಪ್ರದೇಶಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳು ಸಕ್ರಿಯವಾಗಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ