
ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ನಡೆಯುವ ವಿಚಿತ್ರ ಘಟನೆಗಳು ಒಬ್ಬರ ಪ್ರಾಣಕ್ಕೆ ಕುತ್ತು ತರುತ್ತವೆ ಎಂಬುದಕ್ಕೆ ಈ ನೈಜ ಘಟನೆ ಸಾಕ್ಷಿಯಾಗಿದೆ. ಲೂಸಿಯಾನದ ಲೇನ್ ಮಾರ್ಟಿನ್ ಎಂಬ ವ್ಯಕ್ತಿಯೂ ಗೊರಿಲ್ಲಾ ಗಮ್ನ ಅಸಲಿಯತ್ತನ್ನು ನಿರೂಪಿಸಲು ಹೋಗಿ ಸಾವನ್ನಪ್ಪಿದ್ದಾನೆ. ಅಷ್ಟಕ್ಕೂ ನಡೆದಿದ್ದೇನೆಂದರೆ.. ಕೆಲವು ದಿನಗಳ ಹಿಂದೆ ಟೆಸ್ಸಿಕಾ ಬ್ರೌನ್ ಎಂಬ ಯುವತಿ ತನ್ನ ತಲೆ ಕೂದಲಿಗೆ ಹೇರ್ ಸ್ಪ್ರೇ ಬದಲಿಗೆ ಪ್ರತಿಷ್ಠಿತ ಕಂಪನಿಯೊಂದರ ಗೊರಿಲ್ಲಾ ಗಮ್ ಬಳಸಿದ್ದಳು. ಇದರಿಂದಾಗಿ ಈಕೆಯ ತಲೆ ಕೂದಲಿಗೆ ಗೊರಿಲ್ಲಾ ಗಮ್ ಬರೋಬ್ಬರಿ 1 ತಿಂಗಳಿಗೂ ಹೆಚ್ಚು ಅಂಟಿಕೊಂಡಿತ್ತು.
ತಾನು ಮಾಡಿಕೊಂಡ ಎಡವಟ್ಟಿನಿಂದ ಟೆಸ್ಸಿಕಾ ತನ್ನ ತಲೆಕೂದಲನ್ನು ಮೊದಲಿನಂತೆ ಮಾಡಲು ಪಡಬಾರದ ಕಷ್ಟಪಟ್ಟಿದ್ದಳು. ಆದರೆ ಆಕೆ ಎಷ್ಟೇ ಪ್ರಯತ್ನ ಪಟ್ಟರೂ ಗೊರಿಲ್ಲಾ ಗಮ್ನಿಂದ ಆಕೆಯ ತಲೆಕೂದಲನ್ನು ಬಿಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಆಕೆಯ ತಲೆಗೂದಲನ್ನೇ ಸಂಪೂರ್ಣವಾಗಿ ತೆಗೆಯಬೇಕಾಯಿತು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು.
ಸುಳ್ಳೆಂದು ಸಾಬೀತುಪಡಿಸುತ್ತೇನೆ..
ಈ ವಿಡಿಯೋ ನೀಡಿದ ಲೇನ್ ಮಾರ್ಟಿನ್, ಇದು ಶುದ್ಧ ಸುಳ್ಳು, ಇದೆಲ್ಲಾ ಪ್ರಚಾರಕ್ಕಾಗಿ ಮಾಡಿರುವ ಗಿಮಿಕ್. ಹೀಗಾಗಿ ಇದನ್ನು ಸುಳ್ಳೆಂದು ಸಾಬೀತುಪಡಿಸುತ್ತೇನೆ. ಟೆಸ್ಸಿಕಾ ಬರಿ ಸುಳ್ಳು ಹೇಳುತ್ತಿದ್ದಾಳೆ. ಆ ಕಂಪನಿಯ ಗಮ್, ಈಕೆ ಹೇಳುವಂತೆ ಅಷ್ಟು ಗಟ್ಟಿಯಾಗಿಲ್ಲ. ಎಲ್ಲರ ಮುಂದೆ ಇದರ ಹಿಂದಿರುವ ಸತ್ಯವನ್ನು ನಾನು ಸಾಬೀತುಪಡಿಸುತ್ತೇನೆ ಎಂದವನೇ ಗೊರಿಲ್ಲಾ ಗಮ್ ಚಾಲೆಂಚ್ ತೆಗೆದುಕೊಂಡಿದ್ದಾನೆ. ಅದರಂತೆ ಪ್ರಯೋಗಕ್ಕಿಳಿದ ಮಾರ್ಟಿನ್ ಗೋರಿಲ್ಲಾ ಗಮ್ ಅನ್ನು ಒಂದು ಲೋಟಕ್ಕೆ ಹಾಕಿಕೊಂಡಿದ್ದಾನೆ ತದ ನಂತರ ಲೋಟದಲಿದ್ದ ಗಮ್ಕುಡಿಯಲು ಯತ್ನಿಸಿದ್ದಾನೆ.
ಆದರೆ ಮಾರ್ಟಿನ್ನ ತುಟಿ ಪ್ರವೇಶಿಸಿದ ಗಮ್, ತಕ್ಷಣವೇ ಆತನ ತುಟಿಯನ್ನು ಬಿಡದಂತೆ ಲೋಟವನ್ನು ಸೇರಿಸಿಕೊಂಡಿಯೇ ಅಂಟಿಕೊಂಡಿದೆ. ಬಳಿಕ ಆ ಲೋಟವನ್ನು ತೆಗೆಯಲು ಮಾರ್ಟಿನ್ ಪ್ರಯತ್ನಿಸಿದ್ದಾನೆ. ಆದರೆ ಅದು ಬಾಯಿಯಿಂದ ಬೇರ್ಪಟ್ಟಿಲ್ಲ. ಅಲ್ಲದೆ ಬೇರೆ ಯಾರೇ ಬಲವಾಗಿ ಎಳೆದರು ಬರದಂತೆ ಗಟ್ಟಿಯಾಗಿ ಮುಖಕ್ಕೆ ಅಂಟಿಕೊಂಡುಬಿಟ್ಟಿದೆ. ಇದರಿಂದ ಪಜೀತಿಗೆ ಒಳಗಾದ ಮಾರ್ಟಿನ್ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ ಆಸ್ಪತ್ರೆಯಲ್ಲಿ ನೀಡಿದ ಯಾವುದೇ ಚಿಕಿತ್ಸೆಗಳು ಫಲಕಾರಿಯಾಗಲಿಲ್ಲ. ಹೀಗಾಗಿ ಮಾರ್ಟಿನ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
Published On - 6:07 pm, Tue, 16 February 21