ಮನುಷ್ಯ ಅಲ್ಲ ಈತ ರಾಕ್ಷಸ, ಪತ್ನಿಯ ಹತ್ಯೆ ಮಾಡಿ 200 ತುಂಡುಗಳಾಗಿ ಕತ್ತರಿಸಿ ವಾರ ಅಡುಗೆ ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿ

ವ್ಯಕ್ತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಬಳಿಕ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಅಷ್ಟೇ ಅಲ್ಲ ದೇಹದ ತುಂಡುಗಳನ್ನು ವಾರಗಳವರೆಗೆ ಅಡುಗೆ ಮನೆಯಲ್ಲೇ ಇಟ್ಟುಕೊಂಡಿದ್ದ, ಇದಾದ ನಂತರ ಸ್ನೇಹಿತನಿಗೆ 5 ಸಾವಿರ ರೂ. ಕೊಟ್ಟು ಅವುಗಳನ್ನು ನದಿಗೆ ಎಸೆಯಲು ತಿಳಿಸಿದ್ದ.

ಆರೋಪಿ
Follow us
ನಯನಾ ರಾಜೀವ್
|

Updated on: Apr 07, 2024 | 11:22 AM

ವ್ಯಕ್ತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಬಳಿಕ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಅಷ್ಟೇ ಅಲ್ಲ ದೇಹದ ತುಂಡುಗಳನ್ನು ವಾರಗಳವರೆಗೆ ಅಡುಗೆ ಮನೆಯಲ್ಲೇ ಇಟ್ಟುಕೊಂಡಿದ್ದ, ಇದಾದ ನಂತರ ಸ್ನೇಹಿತನಿಗೆ 5 ಸಾವಿರ ರೂ. ಕೊಟ್ಟು ಅವುಗಳನ್ನು ನದಿಗೆ ಎಸೆಯಲು ತಿಳಿಸಿದ್ದ.

28 ವರ್ಷದ ನಿಕೋಲಸ್ ಮೆಟ್ಸನ್ 26 ವರ್ಷದ ಪತ್ನಿ ಬ್ಲಾಮ್ಲಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೊದಲು ಬೆಡ್​ರೂಮಿನಲ್ಲಿ ಪತ್ನಿಗೆ ಹಲವು ಬಾರಿ ಇರಿದು ಕೊಲೆ ಮಾಡಿ ಬಳಿಕ ದೇಹವನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಬಳಿಕ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಡುಗಳನ್ನು ಹಾಕಿ ಇರಿಸಿದ್ದ.

ಘಟನೆ ನಡೆದು ಸುಮಾರು ಒಂದು ವಾರದ ಬಳಿಕ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಶವವನ್ನು ವಿಲೇವಾರಿ ಮಾಡಿದ ಮರುದಿನವೇ ವಾಕಿಂಗ್​ಗೆ ತೆರಳಿದ್ದ ವ್ಯಕ್ತಿಯೊಬ್ಬರು ನದಿಯಲ್ಲಿ ಪ್ಲಾಸ್ಟಿಕ್​ ಚೀಲಗಳು ತೇಲುತ್ತಿರುವುದನ್ನು ನೋಡಿದ್ದರು. ಒಂದು ಬ್ಯಾಗ್​ನಲ್ಲಿ ಬ್ರಾಮ್ಲಿಯ ಕೈ ಹಾಗೂ ಬೋಳಿಸಿದ ತಲೆ ಇತ್ತು. ದೇಹವನ್ನು ವಿರೂಪಗೊಳಿಸಲಾಗಿತ್ತು.

ಮತ್ತಷ್ಟು ಓದಿ: ಮಂಗಳೂರು: ಅವಳಿ ಕೊಲೆ ಕೇಸ್​ನಲ್ಲಿ ಮೃತಪಟ್ಟಿದ್ದ ಮಹಿಳೆ ಪತಿ ಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು

ತನ್ನ ಮಗಳಿಗೆ ಮದುವೆಯಾಗಿ ಕೇವಲ 16 ತಿಂಗಳುಗಳಾಗಿದೆ, ಈ ರಾಕ್ಷಸರು ಒಂದು ದಿನವೂ ಆಕೆಗೆ ನಮ್ಮನ್ನು ಭೇಟಿಯಾಗಲು ಅವಕಾಶ ಕೊಟ್ಟಿರಲಿಲ್ಲ. ಮಾರ್ಚ್​ 24 ರಂದು ಪೊಲೀಸರು ಅವರ ಮನೆಗೆ ಹೋದಾಗ ಆತ ತನ್ನ ಹೆಂಡತಿ ತನಗೆ ಕಾಟ ಕೊಡುತ್ತಿದ್ದಾಳೆ ಎಂದು ಕಚ್ಚಿದ ಕಲೆಯನ್ನು ತೋರಿಸಿದ್ದ.

ಬಳಿಕ ಪೊಲೀಸರು ಬಾತ್​ ಟಬ್​ನಲ್ಲಿ ರಕ್ತದ ಕಲೆಗಳನ್ನು ಕಂಡಿದ್ದಾರೆ, ರೂಮಿನ ತುಂಬಾ ಅಮೋನಿಯಾ ಹಾಗೂ ಬ್ಲೀಚ್​ನ ವಾಸನೆ ಮೂಗಿಗೆ ಬಡಿಯುತ್ತಿತ್ತು. ಕೆಲವು ದಿನಗಳ ಹಿಂದೆ ಆಕೆ ತನ್ನ ಸ್ನೇಹಿತೆಯರ ಜತೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ನಂಬಿಸಲು ಪ್ರಯತ್ನಿಸಿದ್ದ, ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಸೋಮವಾರ ಹಂತಕನಿಗೆ ಶಿಕ್ಷೆಯಾಗಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ