ಅಮೆರಿಕ: ಬಾಲಕನ ತಲೆಯನ್ನು ಬಲವಂತವಾಗಿ ಟಾಯ್ಲೆಟ್ಗೆ ಅದ್ದಿ, ಅದರ ನೀರು ಕುಡಿಸಿದ್ದ ಮಹಿಳೆಯ ಬಂಧನ
ಬಾಲಕನನ್ನು ಬಾತ್‌ರೂಮ್‌ಗೆ ಎಳೆದುಕೊಂಡು ಹೋಗಿ ಟಾಯ್ಲೆಟ್ ನೀರು ಕುಡಿಯುವಂತೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಟೆಕ್ಸಾಸ್‌ನ ವುಡ್‌ವೇಯಲ್ಲಿ ಬಂಧಿಸಲಾಗಿದೆ. ಬಾಲಕ ಅಳುತ್ತಲೇ ಶಾಲೆಗೆ ಬಂದಿದ್ದ ಆಗ ಶಿಕ್ಷಕರು ವಿಚಾರಿಸಿದಾಗ ನಡೆದ ವಿಚಾರವನ್ನು ತಿಳಿಸಿದ್ದ. ಡಿಯಾ ವೆಲೆಡಿಯಾಜ್-ಬೋನಿಫಾಜಿಯನ್ನು ಏಪ್ರಿಲ್ 3 ರಂದು ಬಂಧನದಲ್ಲಿರಿಸಲಾಗಿದೆ.

ಬಾಲಕನ ಕೂದಲು ಹಿಡಿದು ಟಾಯ್ಲೆಟ್ಗೆ ಎಳೆದೊಯ್ದು, ಟಾಯ್ಲೆಟ್ ಗುಂಡಿಯೊಳಗಿದ್ದ ನೀರು ಕುಡಿಯುವಂತೆ ಮಹಿಳೆ ಒತ್ತಾಯಿಸಿದ್ದಳು. ಪರಿಣಾಮ ಆತನ ತಲೆಯ ಕೆಲವು ಭಾಗಗಳಲ್ಲಿ ಕೂದಲು ಉದುರಿ ಹೋಗಿದೆ. ತಕ್ಷಣ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆಯವರು ತನಿಖೆ ನಡೆಸಿದ್ದಾರೆ. ಈ ಬಾಲಕ ಹಲವು ಸಮಯಗಳಲ್ಲಿ ಹಿಂಸೆ ಅನುಭವಿಸಿದ್ದಾನೆ ಎಂಬುದು ತಿಳಿದುಬಂದಿದೆ.
ವುಡ್ ವೇ ಪಬ್ಲಿಕ್ ಸೇಫ್ಟಿ ಡಿಪಾರ್ಟ್ಮೆಂಟ್ ವರದಿ ಪ್ರಕಾರ, ಮಹಿಳೆಯು ಬಾಲಕನಿಗೆ ಪದೇ ಪದೇ ಹೊಡೆಯುತ್ತಿದ್ದಳು, ವಿವಿಧ ವಸ್ತುಗಳನ್ನು ಮೈಮೇಲೆ ಎಸೆಯುತ್ತಿದ್ದಳು, ದೀರ್ಘಕಾಲದವರೆಗೆ ಆಹಾರವನ್ನು ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಮನುಷ್ಯ ಅಲ್ಲ ಈತ ರಾಕ್ಷಸ, ಪತ್ನಿಯ ಹತ್ಯೆ ಮಾಡಿ 200 ತುಂಡುಗಳಾಗಿ ಕತ್ತರಿಸಿ ವಾರ ಅಡುಗೆ ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿ
ಹುಡುಗನನ್ನು ಅವನ ಸುರಕ್ಷತೆಗಾಗಿ ಕುಟುಂಬದ ಸದಸ್ಯರೊಂದಿಗೆ ಇರಿಸಲಾಯಿತು. ಬಾಲಕ ಮತ್ತು ಕ್ಲೌಡಿಯಾ ವೆಲೆಡಿಯಾಜ್-ಬೋನಿಫಾಜಿ ನಡುವಿನ ಸಂಬಂಧ ಏನೆಂಬುದು ತಿಳಿದುಬಂದಿಲ್ಲ.
ಫೆಬ್ರವರಿಯಲ್ಲಿ ಅಲಬಾಮಾದಲ್ಲಿ ಮಹಿಳೆಯೊಬ್ಬರು ತನ್ನ 7 ವರ್ಷದ ಮಗುವಿನ ಮೇಲೆ ಕಾರು ಹತ್ತಿಸಿದ ಘಟನೆ ನಡೆದಿತ್ತು. ಆಕೆ ಶಿಕ್ಷೆ ನೀಡಲು ಮನೆಗೆ ನಡೆದುಕೊಂಡೇ ಬರುವಂತೆ ಹೇಳಿ, ಹಿಂದಿನಿಂದ ಕಾರು ಹತ್ತಿಸಿದ್ದಳು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Sun, 7 April 24