ಪೂರ್ವ ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪ: 1,000 ಜನರು ಸಾವು, 1,500 ಕ್ಕೂ ಹೆಚ್ಚು ಜನರಿಗೆ ಗಾಯ

| Updated By: ರಶ್ಮಿ ಕಲ್ಲಕಟ್ಟ

Updated on: Jun 22, 2022 | 7:18 PM

ಬುಧವಾರ ಮುಂಜಾನೆ ಪೂರ್ವ ಅಫ್ಘಾನಿಸ್ತಾನದ ಗ್ರಾಮೀಣ, ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಎರಡು ದಶಕಗಳಲ್ಲಿ ಸಂಭವಿಸಿದ ಭೀಕರ ಕಂಪನದಲ್ಲಿ...

ಪೂರ್ವ ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪ: 1,000 ಜನರು ಸಾವು, 1,500 ಕ್ಕೂ ಹೆಚ್ಚು ಜನರಿಗೆ  ಗಾಯ
ಅಫ್ಘಾನಿಸ್ತಾನದಲ್ಲಿ ಭೂಕಂಪ
Image Credit source: AP
Follow us on

ಕಾಬೂಲ್: ಪೂರ್ವ ಅಫ್ಘಾನಿಸ್ತಾನ (Afghanistan) ಸಂಭವಿಸಿದ ಭೂಕಂಪದಲ್ಲಿ 1,000 ಜನರು ಸಾವನ್ನಪ್ಪಿದ್ದಾರೆ ಮತ್ತು 1,500 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಸರ್ಕಾರಿ ಸುದ್ದಿ ಸಂಸ್ಥೆ ಹೇಳಿದೆ. ಕಳೆದ ವರ್ಷ ದೇಶವನ್ನು ತಾಲಿಬಾನ್ (Taliban) ಸ್ವಾಧೀನಪಡಿಸಿಕೊಂಡ ನಂತರ ಮತ್ತು ಅದರ ಇತಿಹಾಸದಲ್ಲಿ ಸುದೀರ್ಘ ಯುದ್ಧದಿಂದ ಯುಎಸ್ ಮಿಲಿಟರಿಯನ್ನು ಹಿಂತೆಗೆದುಕೊಂಡ ನಂತರ ಅನೇಕ ಅಂತರರಾಷ್ಟ್ರೀಯ ನೆರವು ಸಂಸ್ಥೆಗಳು ಅಫ್ಘಾನಿಸ್ತಾನವನ್ನು ತೊರೆದ ಕಾರಣದಿಂದ ರಕ್ಷಣಾ ಕಾರ್ಯಗಳು ಜಟಿಲವಾಗಿರುವ ಸಾಧ್ಯತೆಯಿದೆ. ಬುಧವಾರ ಮುಂಜಾನೆ ಪೂರ್ವ ಅಫ್ಘಾನಿಸ್ತಾನದ ಗ್ರಾಮೀಣ, ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಎರಡು ದಶಕಗಳಲ್ಲಿ ಸಂಭವಿಸಿದ ಭೀಕರ ಕಂಪನದಲ್ಲಿ ಕನಿಷ್ಠ 920 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನ್ ನೇತೃತ್ವದ ಸರ್ಕಾರಕ್ಕೆ ಈ ದುರಂತವು ಒಂದು ಪ್ರಮುಖ ಪರೀಕ್ಷೆಯನ್ನು ಒಡ್ಡಿದೆ. ರಕ್ಷಣಾ ಕಾರ್ಯಕರ್ತರು ಬುಧವಾರ ಹೆಲಿಕಾಪ್ಟರ್ ಮೂಲಕ ಈ ಪ್ರದೇಶಕ್ಕೆ ಧಾವಿಸಿದರು, ಆದರೆ ತಾಲಿಬಾನ್ ಸ್ವಾಧೀನದ ನಂತರ ಅನೇಕ ಅಂತರಾಷ್ಟ್ರೀಯ ನೆರವು ಸಂಸ್ಥೆಗಳು ಅಫ್ಘಾನಿಸ್ತಾನವನ್ನು ತೊರೆದ ಕಾರಣ ಪ್ರತಿಕ್ರಿಯೆಯು ಜಟಿಲವಾಗಿದೆ.

ಪಾಕಿಸ್ತಾನದ ಗಡಿಯ ಬಳಿ 6.1 ತೀವ್ರತೆಯ ಭೂಕಂಪನವುಂಟಾಗಿದ್ದು  ಮನೆಗಳು ಮತ್ತು ಇತರ ಕಟ್ಟಡಗಳು ಕಳಪೆಯಾಗಿ ನಿರ್ಮಿಸಲ್ಪಟ್ಟಿರುವ ಮತ್ತು ಭೂಕುಸಿತಗಳು ಸಾಮಾನ್ಯವಾಗಿರುವ ಪ್ರದೇಶದಲ್ಲಿ ತೀವ್ರ ಹಾನಿಯನ್ನುಂಟುಮಾಡಿವೆ.

ಇದನ್ನೂ ಓದಿ
Breaking: ಅಫ್ಘಾನ್ ನಲ್ಲಿ ಭೂಕಂಪ, 950ಕ್ಕೂ ಹೆಚ್ಚು ಜನರು ಸಾವು
ತೀವ್ರ ಆರ್ಥಿಕ ಬಿಕ್ಕಟ್ಟು: ಹೊರದೇಶಗಳಲ್ಲಿ ನೌಕರಿ ಮಾಡಲಿಚ್ಛಿಸುವ ಯುವತಿಯರ ವಯೋಮಿತಿಯನ್ನು 21ಕ್ಕಿಳಿಸಿದ ಶ್ರೀಲಂಕಾ ಸರ್ಕಾರ


ನೆರೆಯ ಪಾಕಿಸ್ತಾನದ ಹವಾಮಾನ ಇಲಾಖೆಯು ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿದೆ, ಖೋಸ್ಟ್ ನಗರದ ನೈಋತ್ಯಕ್ಕೆ 50 ಕಿಲೋಮೀಟರ್ ದೂರದಲ್ಲಿದೆ. ಖೋಸ್ಟ್ ಪ್ರಾಂತ್ಯದಲ್ಲಿ ಕಟ್ಟಡಗಳು ಹಾನಿಗೊಳಗಾಗಿವೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನವರೆಗೂ ಕಂಪನ ಅನುಭವಕ್ಕೆ ಬಂದಿದೆ. ಪಕ್ಟಿಕಾದಲ್ಲಿ ಪುರುಷರು ಕಂಬಳಿಯಲ್ಲಿ ಜನರನ್ನು ಸಾಗಿಸುತ್ತಾ ಹೆಲಿಕಾಪ್ಟರ್‌ಗಳಿಗೆ ಕಾಯುತ್ತಿರುವುದನ್ನು ತೋರಿಸಿದೆ.

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 7:18 pm, Wed, 22 June 22