Breaking: ಅಫ್ಘಾನ್ ನಲ್ಲಿ ಭೂಕಂಪ, 950ಕ್ಕೂ ಹೆಚ್ಚು ಜನರು ಸಾವು

Breaking: ಅಫ್ಘಾನ್ ನಲ್ಲಿ ಭೂಕಂಪ, 950ಕ್ಕೂ ಹೆಚ್ಚು ಜನರು ಸಾವು
ಸಾಂದರ್ಭಿಕ ಚಿತ್ರ

ಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು, 155 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿದ 6 ತೀವ್ರತೆಯ ಕಂಪನದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ

TV9kannada Web Team

| Edited By: ಅಕ್ಷಯ್​ ಕುಮಾರ್​​

Jun 22, 2022 | 4:38 PM

ಇಂದು (ಬುಧವಾರ) ಮುಂಜಾನೆ ಪೂರ್ವ ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು,  155 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿದ 6 ತೀವ್ರತೆಯ ಕಂಪನದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಸರ್ಕಾರಿ ಸ್ವಾಮ್ಯದ ಬಖ್ತಾರ್ ಸುದ್ದಿ ಸಂಸ್ಥೆ ವಿವರವನ್ನು ವರದಿ ಮಾಡಿದೆ ಮತ್ತು ರಕ್ಷಕರು ಹೆಲಿಕಾಪ್ಟರ್ ಮೂಲಕ ಆಗಮಿಸುತ್ತಿದ್ದಾರೆ ಎಂದು ಹೇಳಿದರು. ಈಗಾಗಲ್ಲೇ ಅನೇಕ ಜನರು ಗಾಯಗೊಂಡಿದ್ದು. ಕಾರ್ಯಚಾರಣೆ ಮುಂದುವರಿದೆ. 250ಕ್ಕೂ ಹೆಚ್ಚು ಜನರು ಭೂಕಂಪದಿಂದ ಗಾಯಗೊಂಡಿದ್ದಾರೆ. ಭೂಕಂಪವು ಪಾಕಿಸ್ತಾನದ ಗಡಿಯ ಸಮೀಪವಿರುವ ಖೋಸ್ಟ್ ನಗರದಿಂದ ಸುಮಾರು 44 ಕಿಮೀ (27 ಮೈಲುಗಳು) 51 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ನಿವಾಸಿಯೊಬ್ಬರು ಈ ಭೂಕಂಪದ ಬಗ್ಗೆ ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದ (EMSC) ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಭೂಕಂಪದಿಂದ ಅನೇಕ ಸಾವು-ನೋವುಗಳು ಸಂಭವಿಸಿದೆ ಎಂದು  ವಾಯುವ್ಯ ಪಾಕಿಸ್ತಾನಿ ನಗರದ ಪೇಶಾವರ್ ತಿಳಿಸಿದ್ದಾರೆ.  ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಭಾರತದಲ್ಲಿ ಸುಮಾರು 119 ಲಕ್ಷ ಜನರು ಈ ಭೂಕಂಪದಿಂದ ಹಂತಕಗೊಂಡಿದ್ದಾರೆ ಎಂದು  EMSC ಟ್ವಿಟರ್‌ನಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಹೊರದೇಶಗಳಲ್ಲಿ ನೌಕರಿ ಮಾಡಲಿಚ್ಛಿಸುವ ಯುವತಿಯರ ವಯೋಮಿತಿಯನ್ನು 21ಕ್ಕಿಳಿಸಿದ ಶ್ರೀಲಂಕಾ ಸರ್ಕಾರ

ಅಫಘಾನ್ ಮಾಧ್ಯಮಗಳಲ್ಲಿ ಈ ಬಗ್ಗೆ ಚಿತ್ರವೊಂದನ್ನು ಪ್ರಕಟ ಮಾಡಲಾಗಿತ್ತು. ಇದರ ಜೊತೆಗೆ  ತಾಲಿಬಾನ್ ಆಡಳಿತದ ನೈಸರ್ಗಿಕ ವಿಕೋಪ ಸಚಿವಾಲಯದ ಮುಖ್ಯಸ್ಥ ಮೊಹಮ್ಮದ್ ನಸ್ಸಿಮ್ ಹಕ್ಕಾನಿ, ಪಕ್ಟಿಕಾ ಪ್ರಾಂತ್ಯದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ,  150ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಮತ್ತು 250 ಜನರು ಗಾಯಗೊಂಡಿದ್ದಾರೆ. ಖೋಸ್ಟ್‌ನಲ್ಲಿ ಇನ್ನೂ 25 ಜನರು ಮತ್ತು ನಂಗರ್‌ಹಾರ್ ಪ್ರಾಂತ್ಯದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ . ಹೆಚ್ಚಿನ ಸಾವುನೋವುಗಳು ಸಂಭವಿಸಿವೆಯೇ ಎಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪವು 950 ಜನರನ್ನು ಬಲಿತೆಗೆದುಕೊಂಡಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ, 600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪವು 950 ಜನರನ್ನು ಬಲಿತೆಗೆದುಕೊಂಡಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ, 600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಹೆಳಲಾಗಿತ್ತು ಆದರೆ ಇದೀಗ ವಿಪತ್ತು ನಿರ್ವಹಣಾ ಅಧಿಕಾರಿಗಳು ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1000ಕ್ಕೆ ದಾಟಿದೆ.

ಇದನ್ನೂ ಓದಿ

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ 

Follow us on

Related Stories

Most Read Stories

Click on your DTH Provider to Add TV9 Kannada