Viral Video: 126 ಪ್ರಯಾಣಿಕರಿದ್ದ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪತನ; ಮೂವರ ಸ್ಥಿತಿ ಗಂಭೀರ
ಬೆಂಕಿ ಹೊತ್ತಿಕೊಂಡು ರನ್‌ವೇಯಿಂದ ಕೆಳಗಿಳಿದ ನಂತರ ವಿಮಾನವು ಕ್ರೇನ್ ಟವರ್ ಮತ್ತು ಆ ಪ್ರದೇಶದಲ್ಲಿನ ಸಣ್ಣ ಕಟ್ಟಡ ಸೇರಿದಂತೆ ಹಲವಾರು ಕಡೆ ಡಿಕ್ಕಿ ಹೊಡೆದಿದೆ.
ವಾಷಿಂಗ್ಟನ್: ಅಮೆರಿಕಾದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ( Miami International Airport) 126 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಲ್ಯಾಂಡಿಂಗ್ ಗೇರ್ ರನ್‌ವೇಯಲ್ಲಿ ಹಾನಿಗೀಡಾದ ಹಿನ್ನೆಲೆಯಲ್ಲಿ ಬೆಂಕಿ (Fire Accident) ಹೊತ್ತಿಕೊಂಡಿದೆ. ಮಂಗಳವಾರ ಸಂಜೆ ಡೊಮಿನಿಕನ್ ರಿಪಬ್ಲಿಕ್‌ನ ಸ್ಯಾಂಟೋ ಡೊಮಿಂಗೊದಿಂದ ರೆಡ್ ಏರ್ ಫ್ಲೈಟ್ ಆಗಮಿಸಿದ್ದು, ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದರಿಂದ ಮೂವರು ಗಾಯಗೊಂಡಿದ್ದಾರೆ.
ಈ ಘಟನೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಗ್ನಿಶಾಮಕ ದಳದವರು ವಿಮಾನವನ್ನು ಬಿಳಿ ರಾಸಾಯನಿಕ ನೊರೆ ಸಿಂಪಡಿಸಿ, ಬೆಂಕಿ ಆರಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದ ಕೂಡಲೆ ಪ್ರಯಾಣಿಕರು ಬೆಂಕಿಯಿಂದ ತಪ್ಪಿಸಿಕೊಂಡು ಹೊರಗೆ ಓಡಿಹೋಗುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
Plane catches fire after crash landing at Miami International Airport from DR. Sources state there were only minor injuries | #ONLYinDADE pic.twitter.com/AtL9vDYF74
— ONLY in DADE (@ONLYinDADE) June 21, 2022
ನಿನ್ನೆ ಸಂಜೆ 5.30ಕ್ಕೆ (ಸ್ಥಳೀಯ ಕಾಲಮಾನ) ಸ್ಯಾಂಟೋ ಡೊಮಿಂಗೊದಿಂದ ವಿಮಾನ ವಾಪಾಸ್ ಆಗಮಿಸುತ್ತಿತ್ತು. ಬೆಂಕಿ ಹೊತ್ತಿಕೊಂಡು ರನ್‌ವೇಯಿಂದ ಕೆಳಗಿಳಿದ ನಂತರ ವಿಮಾನವು ಕ್ರೇನ್ ಟವರ್ ಮತ್ತು ಆ ಪ್ರದೇಶದಲ್ಲಿನ ಸಣ್ಣ ಕಟ್ಟಡ ಸೇರಿದಂತೆ ಹಲವಾರು ಕಡೆ ಡಿಕ್ಕಿ ಹೊಡೆದಿದೆ.
#Florida ?? | Plane with 126 passengers, from the Dominican Republic, caught fire after landing at #Miami airport. The MD-82 plane, Red Air Flight 203, had landed when the landing gear collapsed and caught fire. 3 people with minor injuries. pic.twitter.com/eBok7Xuwhj
— The informant (@theinformantofc) June 22, 2022
ಇದನ್ನೂ ಓದಿ: Viral Video: ಮಿಲಿಟರಿ ಡ್ರೆಸ್ ತೊಟ್ಟು ಮದುವೆಯಾದ ವಧು-ವರರು; ವೈರಲ್ ಆಯ್ತು ವಿಡಿಯೋ
ಈ ಘಟನೆಯ ನಂತರ ಕೆಲವು ವಿಮಾನಗಳ ಸಂಚಾರ ಕೂಡ ವಿಳಂಬವಾಯಿತು. ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ತಮ್ಮ ವೈಯಕ್ತಿಕ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ವಿಮಾನದ ಮುಂಭಾಗದ ಲ್ಯಾಂಡಿಂಗ್ ಗೇರ್ ಕುಸಿದಿದ್ದೇ ಈ ಬೆಂಕಿ ಅವಘಡಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:00 pm, Wed, 22 June 22