ಯೋಗದಿನದಂದು ಪಾಕಿಸ್ತಾನ ಸರ್ಕಾರ ಮಾಡಿದ ಟ್ವೀಟ್ಗೆ ಪಾಕ್ ಪ್ರಜೆಗಳಿಂದ ಟೀಕೆ
ಇದು ಭಾರತೀಯ ಧ್ಯಾನದ ಶೈಲಿ ಎಂದು ನಾನು ಭಾವಿಸುತ್ತೇನೆ, ಸರ್ಕಾರವು ಈ ದಿನವನ್ನು ಆಚರಿಸಬಾರದು. ಮುಸ್ಲಿಮರಾದ ನಮಗೆ ಧ್ಯಾನ ಮಾಡಲು ನಮ್ಮದೇ ಆದ ಮಾರ್ಗಗಳಿವೆ. ದಯವಿಟ್ಟು ಈ ಪೋಸ್ಟ್ ಅನ್ನು ತೆಗೆದುಹಾಕಿ...
ಜೂನ್ 21 ರಂದು ವಿಶ್ವದಾದ್ಯಂತ ಜನರು ಅಂತರಾಷ್ಟ್ರೀಯ ಯೋಗ ದಿನವನ್ನು(International Yoga Day) ಆಚರಿಸಿದರು. ಈ ಸಂದರ್ಭದಲ್ಲಿ ಯೋಗದ (Yoga) ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಯಿತು. ಅದೇ ವೇಳೆ ಪಾಕಿಸ್ತಾನ (Pakistan) ಸರ್ಕಾರ ಟ್ವಿಟರ್ನಲ್ಲಿ ಹಂಚಿಕೊಂಡ ಪೋಸ್ಟೊಂದನ್ನು ಅಲ್ಲಿನ ಜನರು ಟೀಕಿಸಿದ್ದಾರೆ. ಯೋಗದ ಪ್ರಯೋಜನಗಳು ತ್ವರಿತ ತೃಪ್ತಿ ಮತ್ತು ಶಾಶ್ವತ ರೂಪಾಂತರ ಎರಡನ್ನೂ ಒದಗಿಸುತ್ತದೆ. ಫಿಟ್‌ನೆಸ್ ಜಗತ್ತಿನಲ್ಲಿ, ಇವೆರಡೂ ಬಹಳ ಮುಖ್ಯವಾಗಿವೆ. ಯೋಗವು ನಿಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ತ್ವರಿತವಾಗಿ ಬದಲಾಯಿಸುತ್ತದೆ ಮತ್ತು ದೀರ್ಘಾವಧಿ ಆರೋಗ್ಯಕ್ಕೆ ಮನಸ್ಸು ಮತ್ತು ದೇಹವನ್ನು ಸಿದ್ಧಪಡಿಸುತ್ತದೆ ಎಂದು ಪಾಕಿಸ್ತಾನ ಸರ್ಕಾರವು ಟ್ವೀಟ್ ಮಾಡಿದೆ. ಈ ಟ್ವೀಟ್ನ್ನು ಪಾಕಿಸ್ತಾನಿ ಪ್ರಜೆಗಳೇ ಟೀಕಿಸಿದ್ದಾರೆ. “ಭಾರತದ ಪ್ರಧಾನಿ ಮೋದಿಯನ್ನು ಅನುಸರಿಸುತ್ತಿದ್ದೀರಾ? ಆಮದು ಮಾಡಿಕೊಳ್ಳಲಾಗಿದ್ದರೂ ನೀವು ಪಾಕಿಸ್ತಾನದ ಸರ್ಕಾರ ಎಂಬುದನ್ನು ನಾವು ನಿಮಗೆ ನೆನಪಿಸುತ್ತಿದ್ದೇವೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
The benefits of yoga provide both instant gratification and lasting transformation. In the fitness world, both are extremely important. Yoga can change your physical and mental capacity quickly while preparing the mind and body for long-term health. #YogaForHumanity2022 pic.twitter.com/eGCPZUyn5m
— Government of Pakistan (@GovtofPakistan) June 21, 2022
ಇನ್ನೊಬ್ಬ ನೆಟಿಜನ್ ತನ್ನ ಸರ್ಕಾರವನ್ನು ‘ಭಾರತೀಯ ಸಂಸ್ಕೃತಿ’ ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಇದು ಭಾರತೀಯ ಧ್ಯಾನದ ಶೈಲಿ ಎಂದು ನಾನು ಭಾವಿಸುತ್ತೇನೆ, ಸರ್ಕಾರವು ಈ ದಿನವನ್ನು ಆಚರಿಸಬಾರದು. ಮುಸ್ಲಿಮರಾದ ನಮಗೆ ಧ್ಯಾನ ಮಾಡಲು ನಮ್ಮದೇ ಆದ ಮಾರ್ಗಗಳಿವೆ. ದಯವಿಟ್ಟು ಈ ಪೋಸ್ಟ್ ಅನ್ನು ತೆಗೆದುಹಾಕಿ. ಸಾರ್ವಜನಿಕ ವೇದಿಕೆಯಲ್ಲಿ ನೀವು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರಚಾರ ಮಾಡುತ್ತಿದ್ದೀರಿ ಅಥವಾ ಇದು ಪಾವತಿಸಿದ ಪ್ರಚಾರವೇ. ಅಸಂಬದ್ಧ ಎಂದು ಪ್ರೊಫೆಸರ್ ಇಮ್ರಾನ್ ಅಲ್ಬಸ್ ಎಂಬವರು ಪ್ರತಿಕ್ರಿಸಿದ್ದಾರೆ.
ಇದೆಲ್ಲದರಿಂದ ಸಮಯ ಸಿಕ್ಕರೆ ಬಡವರಿಗಾಗಿ ಏನಾದರೂ ಯೋಚಿಸಿ ಎಂದು ಐಶಾ ರಾಥೋಡ್ ಎಂಬ ಟ್ವೀಟಿಗರು ಹೇಳಿದ್ದಾರೆ.
ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ