ಕಠ್ಮಂಡು: ನೇಪಾಳದ ಕಠ್ಮಂಡುವಿನಿಂದ 161 ಕಿಮೀ WNW ದೂರದಲ್ಲಿ ಇಂದು (ಗುರುವಾರ) ಬೆಳಗ್ಗೆ 4.3 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಮಾಹಿತಿ ನೀಡಿದೆ. ಇಂದು ಮುಂಜಾನೆ ಮಧ್ಯ ನೇಪಾಳದಲ್ಲಿ (Nepal) 5.0ಕ್ಕಿಂತ ಕಡಿಮೆ ಪ್ರಮಾಣದ ತೀವ್ರತೆಯ ಎರಡು ಲಘು ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ.
ಇಂದು ಬೆಳಗ್ಗೆ 3.56ಕ್ಕೆ ನೇಪಾಳದ ಕಸ್ಕಿ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 4.9 ತೀವ್ರತೆಯ ಭೂಕಂಪ ಅಪ್ಪಳಿಸಿತು. ಆ ಭೂಕಂಪದ ಕೇಂದ್ರಬಿಂದು ಕಸ್ಕಿ ಜಿಲ್ಲೆಯ ಮಚ್ಚಪುರ್ಚರೆ ಗ್ರಾಮಾಂತರ ಪುರಸಭೆ -7ನ ಧಂಪಸ್‌ನಲ್ಲಿದೆ. ಬಗ್ಲುಂಗ್, ಪರ್ಬತ್, ಮೈಗ್ಡಿ ಮತ್ತು ತನಹುನ್ ಜಿಲ್ಲೆಗಳಲ್ಲಿ ಕೂಡ ಭೂಕಂಪದ ಅಲೆಗಳು ಕಂಡುಬಂದಿವೆ.
ಇದನ್ನೂ ಓದಿ: ಪೂರ್ವ ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪ: 1,000 ಜನರು ಸಾವು, 1,500 ಕ್ಕೂ ಹೆಚ್ಚು ಜನರಿಗೆ ಗಾಯ
ಅದಾದ ನಂತರ ಬೆಳಗ್ಗೆ 7.22 AMಕ್ಕೆ ಗೂರ್ಖಾ ಜಿಲ್ಲೆಯ ಥುಮಿಯಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ ದಾಖಲಿಸಿದೆ. ಆದರೆ, ಈ ಭೂಕಂಪದಿಂದ ಇದುವರೆಗೆ ಯಾವುದೇ ಹಾನಿ ಅಥವಾ ಸಾವು ನೋವುಗಳ ವರದಿಯಾಗಿಲ್ಲ.
2015ರ ಏಪ್ರಿಲ್ ತಿಂಗಳಲ್ಲಿ 7.9 ತೀವ್ರತೆಯ ಭೂಕಂಪ ಸಂಭವಿಸಿ, ಹಿಮಾಲಯನ್ ರಾಷ್ಟ್ರವನ್ನು ಬೆಚ್ಚಿಬೀಳಿಸಿತ್ತು. ಈ ಭೂಕಂಪದಿಂದ ಸುಮಾರು 10,000 ಜನ ಸಾವನ್ನಪ್ಪಿದ್ದರು, ಲಕ್ಷಾಂತರ ಮನೆಗಳು ನಾಶವಾಗಿದ್ದವು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ