Maldives: ಮಾಲ್ಡೀವ್ಸ್​ನಲ್ಲಿ ಭಾರೀ ಅಗ್ನಿ ದುರಂತ, 9 ಭಾರತೀಯರು ಸೇರಿ 10 ಜನ ಸಾವು

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 10, 2022 | 12:18 PM

ಮಾಲ್ಡೀವ್ಸ್ ರಾಜಧಾನಿ ಮಾಲೆಯ ಇಕ್ಕಟ್ಟಾದ ವಸತಿಗೃಹದಲ್ಲಿ ಭಾರೀ ಅಗ್ನಿ ದುರಂತ. ಬೇರೆ ಬೇರೆ ದೇಶದಿಂದ ಇಲ್ಲಿ ಕೆಲಸ ಬಂದಿದ್ದು, ಒಂದೇ ಕಟ್ಟದಲ್ಲಿ ವಾಸವಾಗಿದ್ದರು. ಇದೀಗ ಈ ಅಗ್ನಿ ದುರಂತದಲ್ಲಿ 10 ಜನ ಸಾವನ್ನಪಿದ್ದಾರೆ.

Maldives: ಮಾಲ್ಡೀವ್ಸ್​ನಲ್ಲಿ ಭಾರೀ ಅಗ್ನಿ ದುರಂತ, 9 ಭಾರತೀಯರು ಸೇರಿ 10 ಜನ ಸಾವು
Massive fire
Follow us on

ಮಾಲೆ: ಮಾಲ್ಡೀವ್ಸ್ ರಾಜಧಾನಿ ಮಾಲೆಯ ಇಕ್ಕಟ್ಟಾದ ವಸತಿಗೃಹದಲ್ಲಿ ಭಾರೀ ಅಗ್ನಿ ದುರಂತ ನಡೆದಿದೆ. ಬೇರೆ ಬೇರೆ ದೇಶದಿಂದ ಇಲ್ಲಿ ಕೆಲಸ ಬಂದಿದ್ದಾರೆ. ಒಂದೇ ಕಟ್ಟದಲ್ಲಿ ವಾಸವಾಗಿದ್ದರು. ಇದೀಗ ಈ ಅಗ್ನಿ ದುರಂತದಲ್ಲಿ 10 ಜನ ಸಾವನ್ನಪಿದ್ದಾರೆ ಎಂದು ಹೇಳಿಲಾಗಿದೆ. ಇದರಲ್ಲಿ 9 ಜನ ಭಾರತೀಯರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅನೇಕರಿಗೆ ಗಾಯಲಾಗಿದ್ದು, ಅಗ್ನಿಶಾಮಕ ದಳ ಈಗಾಗಲೇ ಸ್ಥಳಕ್ಕೆ ಬಂದಿದ್ದು ಬೆಂಕಿ ನಂದಿಸುವ ಕೆಲಸವನ್ನು ಮಾಡುತ್ತಿದೆ. ಇಕ್ಕಟ್ಟಾದ ವಸತಿಗೃಹಗಳಲ್ಲಿ ಬೆಂಕಿ ಆವರಿಸಿದ್ದರಿಂದ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಸೇವೆ ತಿಳಿಸಿದೆ. ಬೆಂಕಿಯಲ್ಲಿ ಧ್ವಂಸಗೊಂಡ ಕಟ್ಟಡದ ಮೇಲಿನ ಮಹಡಿಯಿಂದ ಅಧಿಕಾರಿಗಳು 10 ಮೃತದೇಹಗಳನ್ನು ಹೊರತೆಗೆದಿದ್ದಾರೆ.

ನೆಲ ಅಂತಸ್ತಿನ ವಾಹನ ರಿಪೇರಿ ಗ್ಯಾರೇಜ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ನಾವು 10 ಶವಗಳನ್ನು ಪತ್ತೆ ಮಾಡಿದ್ದೇವೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಬೆಂಕಿಯನ್ನು ನಂದಿಸಲು ಸುಮಾರು ನಾಲ್ಕು ಗಂಟೆಗಳನ್ನು ತೆಗೆದುಕೊಂಡಿತು ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ತಿಳಿಸಿದೆ. ಬೆಂಕಿಯಲ್ಲಿ ಸಾವನ್ನಪ್ಪಿದ ಇನ್ನೊಬ್ಬ ವ್ಯಕ್ತಿ ಬಾಂಗ್ಲಾದೇಶದ ಪ್ರಜೆ ಎಂದು ಭದ್ರತಾ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.

ಬೇರೆ ಬೇರೆ ದೇಶದಿಂದ ಇಲ್ಲಿಗೆ ಬಂದಿದ್ದ ಮತ್ತು ಮಾಲ್ಡೀವ್ಸ್​ನಲ್ಲಿ ವಾಸವಾಗಿದ್ದ ಉದ್ಯೋಗಿಗಳು ಈ ಕಟ್ಟದಲ್ಲಿ ಅರ್ಧದಷ್ಟು ಜನ ಇದ್ದರು ಮತ್ತು ಹೆಚ್ಚಾಗಿ ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಬಂದವರು ಎಂದು ಹೇಳಲಾಗುತ್ತದೆ. ಯಾವುದೇ ಸಹಾಯಕ್ಕಾಗಿ, HCI ಅನ್ನು ಈ ಸಂಖ್ಯೆಗಳಲ್ಲಿ  ಸಂಪರ್ಕಿಸಿ ಎಂದು +9607361452 ; +9607790701  ಮಾಲ್ಡೀವ್ಸ್ ಟ್ವಿಟ್ ಮಾಡಿದೆ.

Published On - 12:10 pm, Thu, 10 November 22