ಜಮ್ಮುವಿನ ಸೇನಾ ಶಿಬಿರದ ಮೇಲಿನ ದಾಳಿಯ ಮಾಸ್ಟರ್​ಮೈಂಡ್ ಖ್ವಾಜಾ ಶಾಹಿದ್ ​ಮೃತದೇಹ ರುಂಡ, ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ

|

Updated on: Nov 06, 2023 | 11:43 AM

2018ರಲ್ಲಿ ಜಮ್ಮುವಿನಲ್ಲಿ ಸೇನಾ ಶಿಬಿರದ ಮೇಲಿನ ದಾಳಿಯ ಮಾಸ್ಟರ್​ಮೈಂಡ್ ​ ಪಿಒಕೆಯಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತನನ್ನು ಖ್ವಾಜಾ ಶಾಹಿದ್ ಎಂದು ಗುರುತಿಸಲಾಗಿದೆ. ಖ್ವಾಜಾ ಶಾಹಿದ್​​ನ ಶಿರಚ್ಛೇದಿತ ಶವ ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ಖ್ವಾಜಾ ಶಾಹಿದ್ ಅವರನ್ನು ಅಪಹರಿಸಲಾಗಿತ್ತು.

ಜಮ್ಮುವಿನ ಸೇನಾ ಶಿಬಿರದ ಮೇಲಿನ ದಾಳಿಯ ಮಾಸ್ಟರ್​ಮೈಂಡ್ ಖ್ವಾಜಾ ಶಾಹಿದ್ ​ಮೃತದೇಹ ರುಂಡ, ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ
ಖ್ವಾಜಾ ಶಾಹಿದ್
Image Credit source: Times Now
Follow us on

2018ರಲ್ಲಿ ಜಮ್ಮುವಿನಲ್ಲಿ ಸೇನಾ ಶಿಬಿರದ ಮೇಲಿನ ದಾಳಿಯ ಮಾಸ್ಟರ್​ಮೈಂಡ್ ​ ಪಿಒಕೆಯಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತನನ್ನು ಖ್ವಾಜಾ ಶಾಹಿದ್ ಎಂದು ಗುರುತಿಸಲಾಗಿದೆ. ಖ್ವಾಜಾ ಶಾಹಿದ್​​ನ ಶಿರಚ್ಛೇದಿತ ಶವ ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ಖ್ವಾಜಾ ಶಾಹಿದ್ ಅವರನ್ನು ಅಪಹರಿಸಲಾಗಿತ್ತು.

ಇಬ್ಬರೂ ಭಯೋತ್ಪಾದಕರ ಮೃತದೇಹಗಳು ನೀಲಂ ಕಣಿವೆಯಲ್ಲಿರುವ ಪಾಕಿಸ್ತಾನ ಸೇನಾ ನೆಲೆಯಲ್ಲಿವೆ. ಫೆಬ್ರವರಿ 10, 2018 ರ ಮುಂಜಾನೆ, ಭಯೋತ್ಪಾದಕರ ಗುಂಪು ಜಮ್ಮು ಬಳಿ ಇರುವ ಸುಂಜುವಾನ್ ಮಿಲಿಟರಿ ಕ್ಯಾಂಪ್ ಅನ್ನು ಪ್ರವೇಶಿಸಿತು. ಯೋಧರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿ ಗ್ರೆನೇಡ್‌ಗಳನ್ನು ಎಸೆದಿದ್ದರು.

ದಾಳಿಯಲ್ಲಿ ಆರು ಸೈನಿಕರು ಮತ್ತು ಒಬ್ಬ ನಾಗರಿಕರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡರು. ಭಾರತೀಯ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರೂ ಹತರಾಗಿದ್ದರು.

ಮತ್ತಷ್ಟು ಓದಿ: ವಿಡಿಯೋ ವೈರಲ್: ಪಾಕ್​​ ವಾಯುನೆಲೆಯ ಮೇಲೆ ಉಗ್ರರ ದಾಳಿ, ಒಟ್ಟು ಆರು ಸಾವು

ದಾಳಿಯ ಸಮಯದಲ್ಲಿ, ಭಯೋತ್ಪಾದಕರು ಶಿಬಿರದ ಕೆಲವು ನಿವಾಸಿಗಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ಭಾರತೀಯ ಭದ್ರತಾ ಪಡೆಗಳು ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು.

ಕಳೆದ ತಿಂಗಳು ಜೈಷ್ ಮುಖ್ಯಸ್ಥ ಮಸೂದ್ ಅಜರ್​ನ ಆಪ್ತ ದಾವೂದ್ ಮಲಿಕ್, ವಜಿರಿಸ್ತಾನ್​ನಲ್ಲಿ ಹಗಲಿನಲ್ಲಿಯೇ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:42 am, Mon, 6 November 23