Voteಗಾಗಿ Kidnap ನಾಟಕ: ಮೇಯರ್​ ಅಭ್ಯರ್ಥಿ ಕೊನೆಗೂ ಅಂದರ್​, ಎಲ್ಲಿ?

|

Updated on: Aug 23, 2020 | 4:40 PM

ಜನರಿಂದ sympathy ವೋಟ್​ ಗಿಟ್ಟಿಸಿಕೊಂಡು ಚುನಾವಣೆ ಗೆಲ್ಲುವ ಹುನ್ನಾರದಲ್ಲಿ ತನ್ನ ಅಪಹರಣದ ನಾಟಕವನ್ನ ಸೃಷ್ಟಿಸಿದ ಚುನಾವಣಾ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿರುವ ಸ್ವಾರಸ್ಯಕರ ಪ್ರಸಂಗ ಅಮೆರಿಕದ ಸೌತ್​​ ಕೆರೊಲಿನಾ ರಾಜ್ಯದ ಸಮ್ಟರ್​ ನಗರದಲ್ಲಿ ಬೆಳಕಿಗೆ ಬಂದಿದೆ. ಸಬ್ರೀನಾ ಬೆಲ್ಚರ್​ ಎಂಬ ಮಹಿಳೆಯೊಬ್ಬಳು ನವೆಂಬರ್​ನಲ್ಲಿ ನಡೆಯಲಿದ್ದ ಮೇಯರ್​ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಳು. ಚುನಾವಣಾ ಪ್ರಚಾರದ ವೇಳೆ ತನ್ನನ್ನು ವಿರೋಧ ಪಕ್ಷದ ಅಭ್ಯರ್ಥಿ ಕಿಡ್ನಾಪ್​ ಮಾಡಿಸಿ ಸೆರೆಹಿಡಿದಿದ್ದಾರೆ ಎಂದು ನಾಟಕವಾಡಿದರೆ ಜನರ ಸಹಾನುಭೂತಿ ಗಿಟ್ಟಿಸಿ ವೋಟ್​ ಪಡೆದು ಚುನಾವಣೆ ಗೆಲ್ಲಬಹುದು […]

Voteಗಾಗಿ Kidnap ನಾಟಕ: ಮೇಯರ್​ ಅಭ್ಯರ್ಥಿ ಕೊನೆಗೂ ಅಂದರ್​, ಎಲ್ಲಿ?
Follow us on

ಜನರಿಂದ sympathy ವೋಟ್​ ಗಿಟ್ಟಿಸಿಕೊಂಡು ಚುನಾವಣೆ ಗೆಲ್ಲುವ ಹುನ್ನಾರದಲ್ಲಿ ತನ್ನ ಅಪಹರಣದ ನಾಟಕವನ್ನ ಸೃಷ್ಟಿಸಿದ ಚುನಾವಣಾ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿರುವ ಸ್ವಾರಸ್ಯಕರ ಪ್ರಸಂಗ ಅಮೆರಿಕದ ಸೌತ್​​ ಕೆರೊಲಿನಾ ರಾಜ್ಯದ ಸಮ್ಟರ್​ ನಗರದಲ್ಲಿ ಬೆಳಕಿಗೆ ಬಂದಿದೆ.

ಸಬ್ರೀನಾ ಬೆಲ್ಚರ್​ ಎಂಬ ಮಹಿಳೆಯೊಬ್ಬಳು ನವೆಂಬರ್​ನಲ್ಲಿ ನಡೆಯಲಿದ್ದ ಮೇಯರ್​ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಳು. ಚುನಾವಣಾ ಪ್ರಚಾರದ ವೇಳೆ ತನ್ನನ್ನು ವಿರೋಧ ಪಕ್ಷದ ಅಭ್ಯರ್ಥಿ ಕಿಡ್ನಾಪ್​ ಮಾಡಿಸಿ ಸೆರೆಹಿಡಿದಿದ್ದಾರೆ ಎಂದು ನಾಟಕವಾಡಿದರೆ ಜನರ ಸಹಾನುಭೂತಿ ಗಿಟ್ಟಿಸಿ ವೋಟ್​ ಪಡೆದು ಚುನಾವಣೆ ಗೆಲ್ಲಬಹುದು ಎಂದು ಸಬ್ರೀನಾ ಸ್ಕೆಚ್​ ಹಾಕಿದ್ದಾಳೆ.

ಅಂತೆಯೇ, ತನ್ನ ಅಪಹರಣದ ನಾಟಕವನ್ನು ತಾನೇ ಆಡಿಸಿದ್ದಾಳೆ. ಇಷ್ಟಕ್ಕೆ ನಿಲ್ಲದೆ ತನ್ನನ್ನು ಅಪಹರಣಕಾರರು ಮನಬಂದಂತೆ ಥಳಿಸುವಂತೆ ಡ್ರಾಮಾ ಮಾಡಿಸಿ ಇಡೀ ಪ್ರಸಂಗವನ್ನು ಫೇಸ್​ಬುಕ್​ ಲೈವ್​ ಸಹ ಮಾಡಿದ್ದಾಳಂತೆ.

ಆದರೆ, ಅದೃಷ್ಟ ಸಬ್ರೀನಾ ಕೈಹಿಡಿಯಲಿಲ್ಲ. ಕಿಡ್ನಾಪ್​ ಪ್ರಕರಣವನ್ನು ಭೇದಿಸಿ ಆಕೆಯನ್ನು ರಕ್ಷಿಸಿದ ಪೊಲೀಸರಿಗೆ ಎಲ್ಲೋ ಏನೋ ಮಿಸ್​ ಹೊಡೀತಿದೆ ಅಂತಾ ಅನ್ನಿಸಿತ್ತಂತೆ. ಹಾಗಾಗಿ, ಮತ್ತಷ್ಟು ತನಿಖೆ ನಡೆಸಿದಾಗ ಸಬ್ರೀನಾಳ ಈ ಪ್ಲಾನ್​ ಹೊರಬಿದ್ದಿದೆ. ಒಟ್ನಲ್ಲಿ ಬೇರೊಬ್ಬರ ಮೇಲೆ ಕೆಸರು ಎರಚಲು ಹೋದ ಸಬ್ರೀನಾ ತಾನೇ ಮಣ್ಣು ತಿನ್ನುವ ಕೆಲಸ ಮಾಡಿದ್ದಾಳೆ. ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ.