AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂಗೆ ಸರಿಯಾಗಿ ಗೂಸಾ ಕೊಡ್ಬೇಕು ಅನ್ನಿಸುತ್ತಿದೆ -ಪತ್ನಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಬ್ರೆಜಿಲ್​ ಅಧ್ಯಕ್ಷ ಗರಂ!

ಭ್ರಷ್ಟಾಚಾರದ ಹಗರಣ ಒಂದರಲ್ಲಿ ನಿಮ್ಮ ಪತ್ನಿ ಮಿಶೆಲ್​ ಬೋಲ್ಸನಾರೊ ಹೆಸರು ತಳುಕು ಹಾಕಿಕೊಂಡಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದ ಪತ್ರಕರ್ತರೊಬ್ಬನಿಗೆ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನಾರೊ ‘ಗೂಸಾ ಕೊಡುವುದಾಗಿ’ ಹೇಳಿರುವ ಸ್ವಾರಸ್ಯಕರ ಪ್ರಸಂಗ ನಿನ್ನೆ ನಡೆದಿದೆ. ನಿನ್ನೆ ಭಾನುವಾರ ಬ್ರೆಜಿಲ್​ ಅಧ್ಯಕ್ಷ ಚರ್ಚ್​ಗೆ ಭೇಟಿ ಕೊಟ್ಟ ಬಳಿಕ ಪತ್ರಕರ್ತರ ಗುಂಪೊಂದು ಎಂದಿನಂತೆ ಬೋಲ್ಸನಾರೊರನ್ನು ಭೇಟಿಯಾಗಿದ್ದರಂತೆ. ಈ ವೇಳೆ ಸ್ಥಳೀಯ ಪತ್ರಕರ್ತ ಕೇಳಿದ ಈ ಪ್ರಶ್ನೆಗೆ ಕೆರಳಿದ ಅಧ್ಯಕ್ಷ ಬೋಲ್ಸನಾರೊ ನಿನ್ನ ಮುಖಕ್ಕೆ ಗೂಸಾ […]

ನಿಂಗೆ ಸರಿಯಾಗಿ ಗೂಸಾ ಕೊಡ್ಬೇಕು ಅನ್ನಿಸುತ್ತಿದೆ -ಪತ್ನಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಬ್ರೆಜಿಲ್​ ಅಧ್ಯಕ್ಷ ಗರಂ!
KUSHAL V
| Edited By: ಸಾಧು ಶ್ರೀನಾಥ್​|

Updated on:Aug 24, 2020 | 1:31 PM

Share

ಭ್ರಷ್ಟಾಚಾರದ ಹಗರಣ ಒಂದರಲ್ಲಿ ನಿಮ್ಮ ಪತ್ನಿ ಮಿಶೆಲ್​ ಬೋಲ್ಸನಾರೊ ಹೆಸರು ತಳುಕು ಹಾಕಿಕೊಂಡಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದ ಪತ್ರಕರ್ತರೊಬ್ಬನಿಗೆ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನಾರೊ ‘ಗೂಸಾ ಕೊಡುವುದಾಗಿ’ ಹೇಳಿರುವ ಸ್ವಾರಸ್ಯಕರ ಪ್ರಸಂಗ ನಿನ್ನೆ ನಡೆದಿದೆ.

ನಿನ್ನೆ ಭಾನುವಾರ ಬ್ರೆಜಿಲ್​ ಅಧ್ಯಕ್ಷ ಚರ್ಚ್​ಗೆ ಭೇಟಿ ಕೊಟ್ಟ ಬಳಿಕ ಪತ್ರಕರ್ತರ ಗುಂಪೊಂದು ಎಂದಿನಂತೆ ಬೋಲ್ಸನಾರೊರನ್ನು ಭೇಟಿಯಾಗಿದ್ದರಂತೆ. ಈ ವೇಳೆ ಸ್ಥಳೀಯ ಪತ್ರಕರ್ತ ಕೇಳಿದ ಈ ಪ್ರಶ್ನೆಗೆ ಕೆರಳಿದ ಅಧ್ಯಕ್ಷ ಬೋಲ್ಸನಾರೊ ನಿನ್ನ ಮುಖಕ್ಕೆ ಗೂಸಾ ಕೊಡಬೇಕೆಂದು ತುಂಬಾ ಆಸೆಯಾಗುತ್ತಿದೆ ಎಂದು ಹೇಳುತ್ತಾ ಅಲ್ಲಿಂದ ಹೊರಟುಹೋದರಂತೆ. ಅಧ್ಯಕ್ಷರ ಉದ್ಧಟತನದ ಮಾತಿಗೆ ಪತ್ರಕರ್ತರ ಗುಂಪು ಸಿಟ್ಟಾಗಿದೆ.  ಆದ್ರೂ ಕ್ಯಾರೇ ಅನ್ನದೇ ಅಧ್ಯಕ್ಷ ಮಹೋದಯ ಅಲ್ಲಿಂದ ಹೊರಟುಹೋದರಂತೆ.

ಅಧ್ಯಕ್ಷ ಜೈರ್​ ಬೋಲ್ಸನಾರೊರ ಹಿರಿಯ ಪುತ್ರ ಹಾಗೂ ಮಾಜಿ ಸಂಸದ ಫ್ಲಾವಿಯೋ ಬೋಲ್ಸನಾರೊರ ಆಪ್ತ ಸಹಾಯಕ ಫಾಬ್ರೀಜಿಯೋ ಕ್ವೇರೋಜ್​ ಎಂಬಾತನ ಹೆಸರು ದೊಡ್ಡ ಹಗರಣವೊಂದರಲ್ಲಿ ಕೇಳಿಬಂದಿದೆ.

ಇದಕ್ಕೆ ಸಂಬಂಧಿಸಿ ಅಲ್ಲಿನ ಪೊಲೀಸರು ಆತನನ್ನು ಬಂಧಿಸಿದ್ದರು. ಈ ನಡುವೆ ಕಳೆದ ತಿಂಗಳು ಬ್ರೆಜಿಲ್​ನ ಕೆಲ ಸುದ್ದಿವಾಹಿನಿಗಳು ಅಧ್ಯಕ್ಷ ಬೋಲ್ಸನಾರೊರ ಪತ್ನಿ ಮಿಶೆಲ್​ರ ಬ್ಯಾಂಕ್​ ಖಾತೆಗೆ ಫಾಬ್ರೀಜಿಯೋ ಸಾಕಷ್ಟು ಹಣವನ್ನು ಪಾವತಿಸಿದ್ದನು ಎಂದು ವರದಿ ಮಾಡಿದ್ದವು. ಆದ್ದರಿಂದ, ಈ ವಿಚಾರವಾಗಿ ಯಾರಾದರೂ ಪ್ರಶ್ನಿಸಿದರೆ ಅಧ್ಯಕ್ಷರಿಗೆ ಸಿಕ್ಕಾಪಟ್ಟೆ ಕೋಪಬರುತ್ತದ್ದಂತೆ!

Published On - 12:52 pm, Mon, 24 August 20

Follow Us
KUSHAL V
KUSHAL V
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ