ಮೆಕ್ಸಿಕೋದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಬಸ್ ಒಂದು 40 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ನವಜಾತ ಶಿಶು ಸೇರಿ 27 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೆಕ್ಸಿಕೋದ ದಕ್ಷಿಣ ರಾಜ್ಯವಾದ ಓಕ್ಸಾಕಾದಲ್ಲಿ ಪ್ರಯಾಣಿಕರು ತುಂಬಿದ್ದ ಬಸ್ ಪರ್ವತದ ರಸ್ತೆಯಿಂದ ಜಾರಿ ಬಿದ್ದು ಕಂದಕಕ್ಕೆ ಬಿದ್ದಿದೆ. ಈ ಅವಘಡದಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದು, 17ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಬಸ್ ಸಂಪೂರ್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿ ಪ್ರಯಾಣಿಕರಿಗೆ ಸಹಾಯ ಮಾಡಿದ್ದಾರೆ.
ಪ್ರಾಥಮಿಕ ಅಂಕಿಅಂಶಗಳ ಪ್ರಕಾರ, 27 ಜನರು ಸಾವನ್ನಪ್ಪಿದ್ದಾರೆ ಮತ್ತು 17 ಗಾಯಗೊಂಡವರನ್ನು ವೈದ್ಯಕೀಯ ಸಹಾಯಕ್ಕಾಗಿ ಪ್ರದೇಶದ ವಿವಿಧ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಓಕ್ಸಾಕಾದ ರಾಜ್ಯ ಪ್ರಾಸಿಕ್ಯೂಟರ್ ಬರ್ನಾರ್ಡೊ ರೊಡ್ರಿಗಜ್ ಅಲಮಿಲ್ಲಾ AFP ಗೆ ತಿಳಿಸಿದ್ದಾರೆ. ಅಪಘಾತದ ಕಾರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ತಾಂತ್ರಿಕ ದೋಷವು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ನಂಬಲಾಗಿದೆ.
ಮತ್ತಷ್ಟು ಓದಿ: Accident: ಪಶ್ಚಿಮ ಕೀನ್ಯಾದಲ್ಲಿ ಭೀಕರ ರಸ್ತೆ ಅಪಘಾತ, 48 ಜನ ದುರ್ಮರಣ
ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆರು ಮಂದಿ ಪ್ರಜ್ಞಾಹೀನರಾಗಿದ್ದರು ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸ್ಥಳೀಯ ಸಾರಿಗೆ ಸಂಸ್ಥೆಯೊಂದು ನಿರ್ವಹಿಸುತ್ತಿದ್ದ ಬಸ್ ಮಂಗಳವಾರ (ಜುಲೈ 4) ರಾತ್ರಿ ರಾಜಧಾನಿ ಮೆಕ್ಸಿಕೋ ನಗರದಿಂದ ಹೊರಟು ಸ್ಯಾಂಟಿಯಾಗೊ ಡಿ ಯೊಸುಂಡುವಾ ನಗರಕ್ಕೆ ತೆರಳುತ್ತಿತ್ತು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕ ಬಹುಶಃ ನಿಯಂತ್ರಣವನ್ನು ಕಳೆದುಕೊಂಡಿರಬಹುದು ಎನ್ನಲಾಗಿದೆ, ಬಸ್‌ನ ಮೇಲಿನ ಅರ್ಧಭಾಗವು ನಾಶವಾಗಿದೆ.
ಗಾಯಗೊಂಡ ಪ್ರಯಾಣಿಕರನ್ನು ಪ್ರದೇಶದ ವಿವಿಧ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ ಎಂದು ಜೀಸಸ್ ರೊಮೆರೊ ಹೇಳಿದರು. ಪರ್ವತ ಪ್ರದೇಶದಲ್ಲಿರುವ ಮ್ಯಾಗ್ಡಲೀನಾ ಪೆನಾಸ್ಕೊ ಎಂಬ ಪಟ್ಟಣದಲ್ಲಿ ಅಪಘಾತ ಸಂಭವಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ