ಮೆಕ್ಸಿಕೋದಲ್ಲಿ ಭಾರಿ ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಮೇಯರ್ ಸೇರಿ 18 ಜನ ಮೃತಪಟ್ಟಿದ್ದಾರೆ. ಮೆಕ್ಸಿಕೋದ ಸ್ಯಾನ್ ಮಿಗುಯೆಲ್ ಟೊಟೊಲಾಪನ್ನಲ್ಲಿರುವ(San Miguel Totolapan) ಸಿಟಿ ಹಾಲ್‌ನಲ್ಲಿ ದುಷ್ಕರ್ಮಿಗಳು ಮನ ಬಂದಂತೆ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಸುಮಾರು 18 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮೇಯರ್ ಕೂಡ ಸೇರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕೆಲ ಬಂದೂಕುಧಾರಿಗಳು ಮೆಕ್ಸಿಕೋದ ಸ್ಯಾನ್ ಮಿಗುಯೆಲ್ ಟೊಟೊಲಾಪಾನ್‌ನಲ್ಲಿರುವ ಸಿಟಿ ಹಾಲ್ ಮತ್ತು ಹತ್ತಿರದ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸುಮಾರು 18 ಜನರು ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ ಗುರೆರೊ ರಾಜ್ಯದ ಸ್ಯಾನ್ ಮಿಗುಯೆಲ್ ಟೊಟೊಲಾಪಾನ್‌ನಲ್ಲಿರುವ ಸಿಟಿ ಹಾಲ್‌ನಲ್ಲಿ ಬಂದೂಕುಧಾರಿಗಳ ಗುಂಪು ಗುಂಡು ಹಾರಿಸಿದ್ದು ಗೋಡೆಗಳ ಮೇಳೆ ಗುಂಡಿನ ದಾಳಿಗೆ ಸಾಕ್ಷಿ ಎಂಬಂತೆ ರಂಧ್ರಗಳು ಕಂಡು ಬಂದಿವೆ. ಗುಂಡುಗಳು ಗೋಡೆಗೆ ತಾಕಿ ರಂಧ್ರಗಳು ಸೃಷ್ಟಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಷಯ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರಿಗೆ ಮನೆಗಳ ಮುಂದೆ ಗುಂಡಿನ ದಾಳಿಗೆ ಮೃತಪಟ್ಟವರ ದೇಹಗಳು ಸಿಕ್ಕಿವೆ. ಮೃತರಲ್ಲಿ ಮೇಯರ್ ಕಾನ್ರಾಡೊ ಮೆಂಡೋಜಾ, ಅವರ ತಂದೆ ಮತ್ತು ಮಾಜಿ ಮೇಯರ್ ಜುವಾನ್ ಮೆಂಡೋಜಾ ಮತ್ತು ನಗರದ ಇತರೆ ಅಧಿಕಾರಿಗಳು ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
#ULTIMAHORA Así quedó parte de la fachada del ayuntamiento de San Miguel Totolapan luego del ataque del grupo criminal de “Los Tequileros”. El alcalde, su papá y 7 policías municipales los muertos. #Guerrero pic.twitter.com/g8uiT9UP5M
— Jacob Morales A. (@JacobMorant) October 5, 2022
“ಲಾಸ್ ಟೆಕ್ವಿಲೆರೋಸ್” ಎಂಬ ಸಂಘಟನೆ ಬುಧವಾರದ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಲಾಸ್ ಟೆಕ್ವಿಲೆರೋಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಈ ದಾಳಿ ಮಾಡಿದ್ದು ನಾವೇ ಎಂದು ಹೇಳಿಕೊಂಡಿದೆ. ಆದರೂ ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ತಕ್ಷಣದ ದೃಢೀಕರಣವಿಲ್ಲ. ಕಾನ್ರಾಡೊ ಮೆಂಡೋಜಾ ಸೇರಿರುವ PRD ರಾಜಕೀಯ ಪಕ್ಷವು ದಾಳಿಯ ಸ್ವಲ್ಪ ಸಮಯದ ನಂತರ ನೀಡಿದ ಹೇಳಿಕೆಯಲ್ಲಿ ಮೇಯರ್ ಅವರ ಸಾವನ್ನು ದೃಢಪಡಿಸಿದೆ. ತಮ್ಮ ಪಕ್ಷವು ದಾಳಿಯನ್ನು ಖಂಡಿಸುತ್ತದೆ, ನ್ಯಾಯಕ್ಕಾಗಿ, ಹಿಂಸಾಚಾರ ಮತ್ತು ನಿರ್ಭಯವನ್ನು ನಿಲ್ಲಿಸಲು ಕರೆ ನೀಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ದಾಳಿಯು ಇತ್ತೀಚೆಗೆ ನಡೆದ ಮೆಕ್ಸಿಕೊವನ್ನು ಬೆಚ್ಚಿಬೀಳಿಸಿದ ಮೂರನೇ ದಾಳಿಯಾಗಿದೆ. ಸೆಪ್ಟೆಂಬರ್ 21 ರ ರಾತ್ರಿ, ಗ್ವಾನಾಜುವಾಟೊದಲ್ಲಿನ ಬಾರ್‌ನಲ್ಲಿ ಬಂದೂಕುಧಾರಿಗಳ ಗುಂಪು ಗುಂಡು ಹಾರಿಸಿ 10 ಜನರನ್ನು ಕೊಂದಿತ್ತು. ಮತ್ತು ಕೇವಲ ಒಂದು ವಾರದ ನಂತರ, ಉತ್ತರ ಮೆಕ್ಸಿಕೋದಲ್ಲಿ ಮತ್ತೊಂದು ದಾಳಿ ನಡೆದಿತ್ತು.
Published On - 7:38 am, Thu, 6 October 22