ವಿಶ್ವಸುಂದರಿ (Miss Universe) ಪಟ್ಟ ಈ ಬಾರಿ ಯುಎಸ್ ಪಾಲಾಗಿದೆ. ಹೌದು 71ನೇ ವಿಶ್ವ ಸುಂದರಿ ಆವೃತ್ತಿಯು ಇಂದು (ಜ.15) ರಂದು ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿರುವ ನ್ಯೂ ಓರ್ಲಿಯನ್ಸ್ ಮೋರಿಯಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಯುಎಸ್ನ ಆರ್’ಬೊನಿ ಗೇಬ್ರಿಯಲ್ (R’Bonney Gabriel) ವಿಶ್ವ ಸುಂದರಿ ಕಿರೀಟ ಧರಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ದಿವಿತಾ ರೈ (Divita Rai) ವಿಶ್ವ ಸುಂದರಿ ಪಟ್ಟದಿಂದ ವಂಚಿತರಾಗಿದ್ದಾರೆ.
The new Miss Universe is USA!!! #MISSUNIVERSE pic.twitter.com/7vryvLV92Y
— Miss Universe (@MissUniverse) January 15, 2023
ಟಾಪ್ 16 ರ ಸ್ಥಾನದಲ್ಲಿದ್ದ ದಿವಿತಾ ರೈ ಅವರು ಕೊನೆ ಹಂತದಲ್ಲಿ ಸ್ಪರ್ಧೆಯಿಂದ ಪರಾಭವಗೊಂಡರು. ಹಾಗೆ ದಿವಿತಾ ರೈ ಅವರು ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆದ್ದಿದ್ದರು. ಇದೇ ಸ್ಪರ್ಧೆಯಲ್ಲಿ 2021 ರಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ನಟಿಯರಾದ ಸುಶ್ಮಿತಾ ಸೇನ್ (1994) ಮತ್ತು ಲಾರಾ ದತ್ತಾ (2000) ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದ ಭಾರತೀಯರು.
ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 am, Sun, 15 January 23