AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19: ಚೀನಾದಲ್ಲಿ ಒಂದೇ ತಿಂಗಳಲ್ಲಿ ಕೋವಿಡ್​ನಿಂದ 60,000 ಸಾವು

2022ರ ಡಿಸೆಂಬರ್ 8ರಿಂದ 2023ರ ಜನವರಿ 12ರ ಅವಧಿಯಲ್ಲಿ 59,938 ಮಂದಿ ಕೋವಿಡ್​​ನಿಂದಾಗಿ ಮೃತಪಟ್ಟಿದ್ದಾರೆ. ಈ ಪೈಕಿ 5,503 ಮಂದಿ ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಮೃತಪಟ್ಟರೆ 54,435 ಮಂದಿ ನೇರವಾಗಿ ಕೋವಿಡ್​ನಿಂದ ಮೃತಪಟ್ಟಿದ್ದಾರೆ ಎಂದು ಎನ್​ಎಚ್​ಸಿ ತಿಳಿಸಿದೆ.

Covid-19: ಚೀನಾದಲ್ಲಿ ಒಂದೇ ತಿಂಗಳಲ್ಲಿ ಕೋವಿಡ್​ನಿಂದ 60,000 ಸಾವು
ಚೀನಾದಲ್ಲಿ ಕೋವಿಡ್ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Jan 14, 2023 | 7:07 PM

Share

ಬೀಜಿಂಗ್: ಚೀನಾದಲ್ಲಿ (China) ಕೇವಲ ಒಂದು ತಿಂಗಳ ಅವಧಿಯಲ್ಲಿ ಕೋವಿಡ್ ಸಂಬಂಧಿತ (Covid-19) ಸಮಸ್ಯೆಗಳಿಂದ ಸುಮಾರು 60,000 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2022ರ ಡಿಸೆಂಬರ್​ ಆರಂಭದಲ್ಲಿ ಕೋವಿಡ್ ಸಂಬಂಧಿತ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಚೀನಾದ ಅಧಿಕಾರಿಗಳು ಇದೇ ಮೊದಲ ಬಾರಿಗೆ ಕೋವಿಡ್ ಸಾವಿಗೆ ಸಂಬಂಧಿಸಿದ ವಿವರ ಬಹಿರಂಗಪಡಿಸಿದ್ದಾರೆ. ಕೋವಿಡ್ ವಿರುದ್ಧದ ಶೂನ್ಯ ಸಹನೆ ನೀತಿಯನ್ನು ಕೈಬಿಟ್ಟ ಬಳಿಕ ಚೀನಾವು ಕೋವಿಡ್ ಸಾವಿಗೆ ಸಂಬಂಧಿಸಿ ಅಂಕಿಅಂಶಗಳನ್ನು ಮರೆಮಾಚುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿದ್ದು, ಇದರ ಮಧ್ಯೆಯೇ ಅಂಕಿಅಂಶ ಬಿಡುಗಡೆ ಮಾಡಲಾಗಿದೆ.

ಕೋವಿಡ್​ನಿಂದಾಗಿ ಕೆಲವೇ ಕೆಲವು ಸಾವುಗಳು ಸಂಭವಿಸಿವೆ ಎಂದು ಈ ಹಿಂದೆ ಚೀನಾ ಹೇಳಿತ್ತು. ಆದರೆ ಈಗ ಚೀನಾದ ರಾಷ್ಟ್ರೀಯ ಆರೋಗ್ಯ ಸಮಿತಿ (ಎನ್​ಎಚ್​ಸಿ) ಬಹಿರಂಗಪಡಿಸಿರುವ ವರದಿ ಬೇರೆಯೇ ಲೆಕ್ಕಾಚಾರಗಳನ್ನು ಜನರ ಮುಂದಿಟ್ಟಿದೆ. 2022ರ ಡಿಸೆಂಬರ್ 8ರಿಂದ 2023ರ ಜನವರಿ 12ರ ಅವಧಿಯಲ್ಲಿ 59,938 ಮಂದಿ ಕೋವಿಡ್​​ನಿಂದಾಗಿ ಮೃತಪಟ್ಟಿದ್ದಾರೆ. ಈ ಪೈಕಿ 5,503 ಮಂದಿ ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಮೃತಪಟ್ಟರೆ 54,435 ಮಂದಿ ನೇರವಾಗಿ ಕೋವಿಡ್​ನಿಂದ ಮೃತಪಟ್ಟಿದ್ದಾರೆ ಎಂದು ಎನ್​ಎಚ್​ಸಿ ತಿಳಿಸಿದೆ.

ಇದನ್ನೂ ಓದಿ: Omicron subvariant XBB.1.5: ವಿಶ್ವದಲ್ಲಿ ಹೆಚ್ಚುತ್ತಿದೆ XBB.1.5, WHO ಕಳವಳ; ಭಾರತದಲ್ಲಿ 0.01% ಕೋವಿಡ್ ಪಾಸಿಟಿವಿಟಿ

ಚೀನಾದಲ್ಲಿ ಮುಂದಿನ 2-3 ತಿಂಗಳುಗಳಲ್ಲಿ ಕೊರೊನಾ ಸೋಂಕು ಉತ್ತುಂಗಕ್ಕೆ ತಲುಪಲಿದ್ದು, ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ಳಲಿದೆ ಎಂದು ಅಲ್ಲಿನ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಶುಕ್ರವಾರ ಹೇಳಿದ್ದರು. ಚೀನಾದಲ್ಲಿ ಹೊಸ ವರ್ಷ ಆಗಮನ ಇನ್ನಷ್ಟೇ ಆಗಬೇಕಿದೆ. ಹೀಗಾಗಿ ಹೊಸ ವರ್ಷದ ಅಂಗವಾಗಿ ಜನವರಿ 21ರಿಂದ ಕೋಟ್ಯಂತರ ಮಂದಿ ತಮ್ಮ ಊರುಗಳಿಗೆ ಹಿಂದಿರುಗುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಶೂನ್ಯ ಕೋವಿಡ್ ನೀತಿಯಿಂದಾಗಿ ಚೀನಾದ ಜನರು ತತ್ತರಿಸಿಹೋಗಿದ್ದರು. ನವೆಂಬರ್​ ಅಂತ್ಯದ ವೇಳೆಗೆ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಬಳಿಕ ಅಲ್ಲಿನ ಸರ್ಕಾರ ಡಿಸೆಂಬರ್ ಮೊದಲ ವಾರದಲ್ಲಿ ಲಾಕ್​ಡೌನ್​ ತೆರವು ಮಾಡಿತ್ತು. ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದ್ದಲ್ಲದೆ, ಅಂತಾರಾಷ್ಟ್ರೀಯ ಗಡಿಗಳನ್ನು ಕೂಡ ತೆರೆದಿತ್ತು. ಬಳಿಕ ಕೋವಿಡ್ ಪ್ರಕರಣಗಳು ತಾರಕಕ್ಕೇರಿದ್ದವು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ