ಲಾಕ್ಡೌನ್ ಸಮಯದಲ್ಲಿ ನಡೆದ ಪಾರ್ಟಿಯೊಂದರಲ್ಲಿ ಯುಕೆ ಮಾಜಿ ಪ್ರಧಾನಿ ಬೊರಿಸ್ ಜಾನ್ಸನ್ ಸಿಬ್ಬಂದಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು!
ಐಟಿವಿ ಪಾಡ್ ಕಾಸ್ಟ್ ಗೆ ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ಕೋವಿಡ್ ಪಿಡುಗಿನ ಸಂದರ್ಭದಲ್ಲಿ ನಡೆದ ಪಾರ್ಟಿಗಳ ಬಗ್ಗೆ ಪ್ರಮುಖ ದಾಖಲೆ ಮತ್ತು ಸಾಕ್ಷ್ಯಗಳನ್ನು ಸ್ಯೂ ಗ್ರೇ-ಕ್ಯಾಬಿನೆಟ್ ಕಚೇರಿ ಮತ್ತು ಅಂತಿಮವಾಗಿ ಪೊಲೀಸ್ ತನಿಖೆ ಶುರುವಾಗುವ ಮೊದಲು ನಾಶಪಡಿಸಲಾಗಿತ್ತು.
ಲಂಡನ್: ಬ್ರಿಟನ್ನಿನ ಮಾಜಿ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ (Boris Johnson) ಅವರ ಖಾಸಗಿ ಬದುಕಿನ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿದೆ. ಅವರಿಗೆ ನಾಲ್ವರು ಪತ್ನಿಯರು ಮತ್ತು 7-8 ಮಕ್ಕಳು. ತಮ್ಮ 57 ನೇ ವಯಸ್ಸಿನಲ್ಲೂ ಅವರು ತಮ್ಮ 4 ನೇ ಪತ್ನಿಯ ಮೂಲಕ 2021ರ ಕೊನೆಭಾಗದಲ್ಲಿ ಮಗುವೊಂದನ್ನು ಪಡೆದಿದ್ದರು. ನಮ್ಮ ಗಮನಕ್ಕೆ ಬಂದಿರುವ ಸಂಗತಿಯೇನೆಂದರೆ ಜಾನ್ಸನ್ ಸಚಿವ ಸಂಪುಟದ ಕೆಲ ಸಹೋದ್ಯೋಗಿಗಳು ಅಥವಾ 10 ಡೌನಿಂಗ್ ಸ್ಟ್ರೀಟ್ (Downing Street) ಕಚೇರಿಯ ಸಿಬ್ಬಂದಿ ಸಹ ಅವರಂತೆ ರಸಿಕರಾಗಿದ್ದರು ಅಂತ ಹೇಳೋದಕ್ಕಿಂತ ಕಾಮಾಸಕ್ತರಾಗಿದ್ದರು ಅಂತ ಹೇಳಿದರೆ ಹೆಚ್ಚು ಸರಿಯೆನಿಸುತ್ತದೆ. ವಿಷಯವೇನೆಂದರೆ, ಏಪ್ರಿಲ್ 2021 ರಲ್ಲಿ ಕೋವಿಡ್ ಗೆ ಸಂಬಂಧಿಸಿದ ನಿಬಂಧನೆಗಳು ಇನ್ನೂ ಜಾರಿಯಲ್ಲಿರುವಾಗ ಬ್ರಿಟನನ್ನಿನ ರಾಜಕುಮಾರ ಫಿಲಿಪ್ (Prince Philip) ಅವರ ಅಂತ್ಯಸಂಸ್ಕಾರದ ಮುನ್ನಾದಿನ ಜಾನ್ಸನ್ ಅವರ ಸಿಬ್ಬಂದಿಯ ಪೈಕಿ ಕೆಲವರು ಡೌನಿಂಗ್ ಸ್ಟ್ರೀಟ್ ಕಚೇರಿಯಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ನಡೆದ ಪಾರ್ಟಿಯಲ್ಲಿ ರತಿಕ್ರೀಡೆ ನಡೆಸಿದರು ಎಂದು ಅದನ್ನು ಕಂಡ ಕೆಲವರು ಬಾಯಿಬಿಟ್ಟಿದ್ದಾರೆ.
ಪಾರ್ಟಿಯಲ್ಲಿ ರತಿಕ್ರೀಡೆ!
ಅವರು ನೀಡಿರುವ ಮಾಹಿತಿ ಪ್ರಕಾರ ಎರಡು ಜೋಡಿಗಳು ಬಹಳ ಜೋರಾಗಿ ಪಾರ್ಟಿ ನಡೆಯುತ್ತಿದ್ದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎಂದು ದಿ ಟೈಮ್ಸ್ ಪತ್ರಿಕೆ ವರದಿ ಮಾಡಿದ್ದು ಅವುಗಳಲ್ಲೊಂಸದು ಜೋಡಿಯು ಲೈಟ್ಗಳನ್ನು ಆಫ್ ಮಾಡಿಕೊಂಡು ಕಚೇರಿಯೊಳಗೆ ಪ್ರವೇಶಿಸಿದವು ಎಂದು ಹೇಳಲಾಗಿದೆ. ಪತ್ರಿಕೆಯ ವರದಿಯ ಪ್ರಕಾರ ಮತ್ತೊಂದು ಜೋಡಿಯು ಡೌನಿಂಗ್ ಸ್ಟ್ರೀಟ್ ನ ಅಡುಗೆ ಕೋಣೆಯಲ್ಲಿ ಫೋರ್ ಪ್ಲೇಯಲ್ಲಿ ತೊಡಗಿ ಮೈ ಕಾವೇರಿಸಿಕೊಂಡು ಆಫೀಸಿನ ಮತ್ತೊಂದು ರೂಮಿನೊಳಗೆ ಹೋದರು ಮತ್ತು ಕತ್ತಲೆ ಅವರಿಸಿದ್ದ ರೂಮಿನಿಂದ ಹೊರಬರುವಾಗ ಅವರ ಮುಖದಲ್ಲಿ ಗಾಬರಿ ಕಾಣಿಸುತಿತ್ತು ಎಂದು ಅವರನ್ನು ನೋಡಿದ ಜನ ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.
ಜಾನ್ಸನ್ ಅವರು ನವೆಂಬರ್ 13, 2020 ರಲ್ಲಿ ತಮ್ಮ ಪಾರ್ಟಿಯ ಬಗ್ಗೆ ಜೋಕ್ ಮಾಡುತ್ತಾ ಅದು ಯುಕೆಯ ರಾಜಕೀಯ ಪಕ್ಷಗಳ ಪೈಕಿ ಸಾಮಾಜಿಕ ಕಟ್ಟಳೆಗಳಿಂದ ಅಂತರ ಕಾಯ್ದುಕೊಂಡಿರುವ ಪಕ್ಷವಾಗಿರುವುದರಿಂದ ಅದನ್ನು ತ್ಯಜಿಸುವುದಾಗಿ ಹೇಳಿ ಒತ್ತಡಕ್ಕೆ ಸಿಕ್ಕಿದ್ದ ಕೆಲವೇ ತಿಂಗಳುಗಳ ಬಳಿಕ ಮೇಲಿನ ಆರೋಪಗಳು ಕೇಳಿಬಂದಿವೆ.
ಇದನ್ನೂಓದಿ: ಸ್ಯಾಂಟ್ರೋ ರವಿ ಕ್ರಿಮಿ ಅಷ್ಟೇ, ಆತನ ಹಿಂದೆ ಮುನ್ನೂರು ಜನರಿದ್ದಾರೆ: ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ
ಆರೋಪವನ್ನು ಬಾತ್ಮೀದಾರ ಅಲ್ಲಗಳೆದಿಲ್ಲ
ಜೋಡಿಗಳು ಡೌನಿಂಗ್ ಸ್ಟ್ರೀಟ್ ಕಚೇರಿಯಲ್ಲಿ ರತಿಕ್ರೀಡೆಯಲ್ಲಿ ತೊಡಗಿದ್ದ ಅರೋಪವನ್ನು ಜಾನ್ಸನ್ ಅವರ ಬಾತ್ಮೀದಾರರು, ಸಂಪರ್ಕ ಇಲಾಖೆಯ ಮಾಜಿ ನಿರ್ದೇಶಕ ಲೀ ಕೇನ್ ಅವರ ವಿದಾಯ ಪಾರ್ಟಿಯಲ್ಲಿ ಅಲ್ಲಗಳೆದಿರಲಿಲ್ಲ, ಐಟಿವಿಯ ಪಾರ್ಟಿಗೇಟ್: ದಿ ಇನ್ ಸೈಡ್ ಸ್ಟೋರಿ ಕಾರ್ಯಕ್ರಮದಲ್ಲಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಾನ್ಸನ್ ಅವರು ಹಾಜರಾಗದ ಪ್ರಿನ್ಸ್ ಫಿಲಿಪ್ ಅವರ ಅಂತ್ಯಸಂಸ್ಕಾರದ ಮುನ್ನಾದಿನದ ಪಾರ್ಟಿಯಲ್ಲಿ ಸುಮಾರು 30 ಜನ ಭಾಗವಹಿಸಿದ್ದರು. ಕಚೇರಿಯ ಸಿಬ್ಬಂದಿಯು ಸೂಟ್ ಕೇಸ್ ನಲ್ಲಿ ವೈನ್ ಬಾಟಲಿಗಳನ್ನು ಹೊತ್ತು ತಂದ ಬಳಿಕ ಎರಡೂ ಸಮಾರಂಭಗಳ ಅತಿಥಿಗಳು ಒಂದಾದರು. ಆ ಸಮಯದಲ್ಲಿ ಸೋಶಿಯಲ್ ಪಾರ್ಟಿ ಮತ್ತು ಗುಂಪುಗೂಡುವಿಕೆಯನ್ನು ಬ್ಯಾನ್ ಮಾಡಲಾಗಿತ್ತು ಮತ್ತು ಕೆಲಸದ ನಿಮಿತ್ತ ಮಾತ್ರ ಜನರು ಬೆರೆಯುವುದಕ್ಕೆ ಅವಕಾಶವಿತ್ತು,
ಸಾಕ್ಷ್ಯಗಳನ್ನು ನಾಶಪಡಿಸಲಾಗಿತ್ತು
ಐಟಿವಿ ಪಾಡ್ ಕಾಸ್ಟ್ ಗೆ ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ಕೋವಿಡ್ ಪಿಡುಗಿನ ಸಂದರ್ಭದಲ್ಲಿ ನಡೆದ ಪಾರ್ಟಿಗಳ ಬಗ್ಗೆ ಪ್ರಮುಖ ದಾಖಲೆ ಮತ್ತು ಸಾಕ್ಷ್ಯಗಳನ್ನು ಸ್ಯೂ ಗ್ರೇ-ಕ್ಯಾಬಿನೆಟ್ ಕಚೇರಿ ಮತ್ತು ಅಂತಿಮವಾಗಿ ಪೊಲೀಸ್ ತನಿಖೆ ಶುರುವಾಗುವ ಮೊದಲು ನಾಶಪಡಿಸಲಾಗಿತ್ತು.
ಆದರೆ, ನಂಬರ್ 10 ಡೌನಿಂಗ್ ಸ್ಟ್ರೀಟ್ ಕಚೇರಿಯು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕಾಪಾಡಿ ಇಟ್ಟುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಹೇಳಿದೆ. ‘ಘಟನೆಗಳಿಗೆ ಸಂಬಂಧಿಸಿದಂತೆ ತನಿಖೆಯೊಂದು ಈಗಾಗಲೇ ನಡೆದಿದೆ ಮತ್ತು ಲಂಡನ್ ಮೆಟ್ ಪೊಲೀಸ್ ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ.’ ಎಂದು ರಿಷಿ ಸುನಾಕ್ ಅವರ ಅಧಿಕೃತ ಪ್ರತಿನಿಧಿ ಹೇಳಿದ್ದಾರೆ.
ಇದನ್ನೂಓದಿ: ವಿದೇಶದಲ್ಲಿ ಆಸ್ತಿ ಮಾಡಿದ್ದ ಮಂಗಳೂರು ಉದ್ಯಮಿಯ ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ
ದಾಖಲೆಗಳನ್ನು ಕಾಯ್ದಿಡುವಂತೆ ಸೂಚಿಸಲಾಗಿದೆ
‘ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಕಾಯ್ದಿಡುವಂತೆ ಮತ್ತು ತನಿಖೆಯೊಂದಿಗೆ ಸಹಕರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು. ಸ್ಯೂ ಗ್ರೇ ವರದಿಯನ್ನು ಸಮಗ್ರವಾಗಿ ಪ್ರಕಾಶಿಸಲಾಗಿದೆ,’ ಎಂದು ನಂ. 10 ಬಾತ್ಮೀದಾರ ಹೇಳಿದ್ದಾರೆ. ದಿ ಇಂಡಿಪೆಂಡೆಂಟ್ ಪತ್ರಿಕೆಗೆ ಕನ್ಸರ್ವೇಟಿವ್ ಪಕ್ಷದ ಸಂಸದರು ಹೇಳಿರುವ ಹಾಗೆ, ಸಾಮಾಜಿಕವಾಗಿ ಅಂತರ ಕಾಯ್ದುಕೊಂಡಿರುವ ಪಕ್ಷ ಅಂತ ಜಾನ್ಸನ್ ಮಾಡಿದ ಕಾಮೆಂಟ್ ಅವರ ರಾಜಕೀಯ ಕಮ್ ಬ್ಯಾಕ್ ಮಾಡುವ ಆಶಯದ ಮೇಲೆ ವ್ತತಿರಿಕ್ತ ಪರಣಾಮ ಬೀರಿದೆ.
‘ಹಕ್ಕು ಸಮಿತಿಯ ತನಿಖೆ ಪೂರ್ಣಗೊಂಡ ಬಳಿಕ ಶಿಕ್ಷೆಯಿಂದ ಬಚಾವಾಗುವುದು ಜಾನ್ಸನ್ ಅವರಿಗೆ ಕಷ್ಟವಾಗಲಿದೆ,’ ಅಂತ ಒಬ್ಬ ಸಂಸದ ಹೇಳಿದ್ದಾರೆ. ‘ತಾವೇ ತೋಡಿಕೊಂಡ ಗುಂಡಿಯೊಳಗೆ ಅವರು ಬೀಳಲಿದ್ದಾರೆ,’ ಎಂದು ಅವರು ಹೇಳಿದ್ದಾರೆ. ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಮತ್ತು ಮಾಜಿ ಸಚಿವ, ‘ಹಕ್ಕು ಸಮಿತಿಯ ತನಿಖೆ ಬೊರಿಸ್ ಪಾಲಿಗೆ ಕಂಟಕವಾಗಲಿದೆ. ಅದೇನಾದರೂ ಸ್ಥಿರಪಟ್ಟರೆ ಮುಂದೇನಾಗಲಿದೆ ಅಂತ ಅವರಿಗೆ ಗೊತ್ತಿದೆ,’ ಅಂತ ಅವರು ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Sat, 14 January 23