ಡಾ ಡೆತ್ ಅಂತ ಕುಖ್ಯಾತನಾಗಿದ್ದ ಡಾ ಹೆರಾಲ್ಡ್ ಶಿಪ್​ಮನ್ ವೈದ್ಯನಾಗಿ ಪ್ರಾಣವುಳಿಸುವ ಬದಲು ತೆಗೆಯುತ್ತಿದ್ದ!

ಆದರೆ 1977ರಲ್ಲಿ ಗ್ರೇಟರ್ ಮ್ಯಾಂಚೆಸ್ಟರ್ ಹೈಡ್ ನಲ್ಲಿ ಅವನಿಗೆ ಪುನಃ ಜನರಲ್ ಪ್ರ್ಯಾಕ್ಟಿಷನರ್ ಕೆಲಸ ಸಿಕ್ಕಿತು. ಆಗ ಶ್ರದ್ಧೆಯಿಂದ ಕೆಲಸ ಮಾಡಲಾರಂಭಿಸಿದ್ದ ಅವನ ಖ್ಯಾತಿ ಹೆಚ್ಚಿತ್ತು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನ ಅವನನ್ನು ಗೌರವದಿಂದ ಕಾಣತೊಡಗಿದ್ದರು. ಅವನ ಪ್ರ್ಯಾಕ್ಟೀಸ್ ಭಾರಿ ಜೋರಿನಿಂದ ನಡೆಯಲಾರಂಭಿಸಿತ್ತು.

ಡಾ ಡೆತ್ ಅಂತ ಕುಖ್ಯಾತನಾಗಿದ್ದ ಡಾ ಹೆರಾಲ್ಡ್ ಶಿಪ್​ಮನ್ ವೈದ್ಯನಾಗಿ ಪ್ರಾಣವುಳಿಸುವ ಬದಲು ತೆಗೆಯುತ್ತಿದ್ದ!
ಡಾ ಹೆರಾಲ್ಡ್ ಶಿಪ್​​ಮನ್ ಮತ್ತು ಅವನ ಕೆಲ ಆಹುತಿಗಳು
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 14, 2023 | 7:53 AM

ಡಾಕ್ಟರ್ ಗಳ ಕೆಲಸ ಪ್ರಾಣ ಉಳಿಸುವುದು ಮತ್ತು ಅದಕ್ಕಾಗಿ ಅವರು ಪಣತೊಟ್ಟಿರುತ್ತಾರೆ, ಆದರೆ ನಾವು ನಿಮಗೆ ಪರಿಚಯಿಸುತ್ತಿರುವ ಹೆರಾಲ್ಡ್ ಶಿಪ್​ಮನ್ (Dr Herald Shipman) ಹೆಸರಿನ ಬ್ರಿಟಿಷ್ ವೈದ್ಯ ತನ್ನ ರೋಗಿಗಳ (patients) ಪ್ರಾಣ ತೆಗೆಯುತ್ತಿದ್ದ! ಅವನು ನಡೆಸಿದ ಅಪರಾಧಗಳನ್ನು ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳ ಪ್ರಕಾರ ಡಾ ಡೆತ್ (Dr Death) ಎಂಬ ಉಪನಾಮದಿಂದ ಖ್ಯಾತನಾಗಿದ್ದ ಹೆರಾಲ್ಡ್ ಏನಿಲ್ಲವೆಂದರೂ ತನ್ನ 250 ರೋಗಿಗಳನ್ನು ಸಾಯಿಸಿದ್ದ. ಅವನ ಕೃತ್ಯಗಳು ಬ್ರಿಟನ್ನಿನಲ್ಲಿ ವೈದ್ಯಕೀಯ ವೃತ್ತಿಯನ್ನೇ ಜನ ಅನುಮಾನಿಸುವಂಥ ಸ್ಥಿತಿ ನಿರ್ಮಾಣಮಾಡಿತ್ತು. ಹೆರಾಲ್ಡ್ ಮ್ಯಾಂಚೆಸ್ಟರ್ ನ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನೆವರಿ 14, 1946 ರಂದು ಜನಿಸಿದ್ದ. ಅವನ ತಾಯಿ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆಯ ಭಾಗವಾಗಿ ಆಕೆಗೆ ಮಾರ್ಫಿನ್ ಇಂಜೆಕ್ಷನ್ ನೀಡಲಾಗುತಿತ್ತು. ಅದನ್ನೆಲ್ಲ ಹತ್ತಿರದಿಂದ ಗಮನಿಸುತ್ತಿದ್ದ ಹೆರಾಲ್ಡ್ ಗೆ ಮೆಡಿಸಿನ್ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು.

1970 ರಲ್ಲಿ ಅವನು ಲೀಡ್ಸ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದು ಕೆಲ ತಿಂಗಳುಗಳ ಬಳಿಕ ಹೆರಾಲ್ಡ್ ಲಂಕಾಶೈರ್ ಟಾಡ್ ಮಾರ್ಡೆನ್ ನಲ್ಲಿ ಜನರಲ್ ಪ್ರ್ಯಾಕ್ಟಿಷನರ್ ಆಗಿ ಕೆಲಸಕ್ಕೆ ಸೇರಿಕೊಂಡ. 1975 ರಲ್ಲಿ ಅವನ ಮಾದಕ ವಸ್ತುಗಳ ಸಾಲಿಗೆ ಸೇರಿದ ಓಪಿಯೇಟ್ ಪೆಥಿಡಿನ್ ಹೆಸರಿನ ಡ್ರಗ್ ಅನ್ನು ಅನೇಕ ರೋಗಿಗಳಿಗೆ ಪ್ರಿಸ್ಕ್ರೈಬ್ ಮಾಡಿದ್ದು ಬೆಳಕಿಗೆ ಬಂದಿತ್ತು. ವಿಚಾರಣೆ ನಡೆದಾಗ ಖುದ್ದು ಅವನೇ ಆ ಡ್ರಗ್ ಗೆ ಅಡಿಕ್ಟ್ ಆಗಿದ್ದು ಪತ್ತೆಯಾಗಿತ್ತು. ಕೂಡಲೇ ಹೆರಾಲ್ಡ್ ನನ್ನ ಕೆಲಸದಿಂದ ತೆಗೆದು ರಿಹ್ಯಾಬ್ ಸೆಂಟರ್ ಗೆ ಸೇರಿಸಲಾಗಿತ್ತು.

ಜನರಲ್ ಪ್ರ್ಯಾಕ್ಟಿಷನರ್ ಆಗಿ ಕೆಲಸ

ಆದರೆ 1977ರಲ್ಲಿ ಗ್ರೇಟರ್ ಮ್ಯಾಂಚೆಸ್ಟರ್ ಹೈಡ್ ನಲ್ಲಿ ಅವನಿಗೆ ಪುನಃ ಜನರಲ್ ಪ್ರ್ಯಾಕ್ಟಿಷನರ್ ಕೆಲಸ ಸಿಕ್ಕಿತು. ಆಗ ಶ್ರದ್ಧೆಯಿಂದ ಕೆಲಸ ಮಾಡಲಾರಂಭಿಸಿದ್ದ ಅವನ ಖ್ಯಾತಿ ಹೆಚ್ಚಿತ್ತು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನ ಅವನನ್ನು ಗೌರವದಿಂದ ಕಾಣತೊಡಗಿದ್ದರು. ಅವನ ಪ್ರ್ಯಾಕ್ಟೀಸ್ ಭಾರಿ ಜೋರಿನಿಂದ ನಡೆಯಲಾರಂಭಿಸಿತ್ತು.

ಇದನ್ನೂ ಓದಿ: Pravasi Bharatiya Divas: ವಿದೇಶದಲ್ಲಿರುವ ಭಾರತೀಯರ ಸಾಧನೆಗೆ ಇದು ವೇದಿಕೆ, ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ

1998 ರಲ್ಲಿ ಅವನ ರೋಗಿಗಳಲ್ಲಿ ಒಬ್ಬರಾಗಿದ್ದ 81-ವರ್ಷ-ವಯಸ್ಸಿನ ಹಿರಿಯ ಮಹಿಳೆಯು, ಹೆರಾಲ್ಡ್ ಆಕೆಯ ಮನೆಗೆ ಹೋಗಿ ತಪಾಸಣೆ ಮಾಡಿದ ಅಲ್ಪ ಸಮಯದಲ್ಲೇ ಸತ್ತುಹೋಗಿದ್ದರು. ಗಂಭೀರವೆನಿಸುವ ಯಾವುದೇ ಕಾಯಿಲೆ ಮಹಿಳೆಗೆ ಇರಲಿಲ್ಲ ಮತ್ತು ಹೆರಾಲ್ಡ್ ಬಂದು ಪರೀಕ್ಷಿಸುವ ಮೊದಲು ಆರೋಗ್ಯವಾಗೇ ಇದ್ದ್ದವರು ಇದ್ದಕ್ಕಿಂದ್ದಂತೆ ಮರಣಿಸಿದ್ದು ಕುಟುಂಬದ ಸದಸ್ಯರಲ್ಲಿ ಆಶ್ಚರ್ಯವನ್ನುಂಟು ಮಾಡಿತ್ತು. ಕೆಲವೇ ನಿಮಿಷಗಳ ಬಳಿಕ ಆಕೆಯ ವಿಲ್ ಡಾ ಹೆರಾಲ್ಡ್ ಗೆ ಪ್ರಯೋಜವಾಗುವ ಹಾಗೆ ಬದಲಾಗಿದ್ದು ಪತ್ತೆಯಾಗುತ್ತು. ಆಗಿನ ಸಮಯದಲ್ಲಿ £400,000 (ಸುಮಾರು ರೂ 4 ಕೋಟಿ) ಬೆಲೆ ಬಾಳುತ್ತಿದ್ದ ಎಸ್ಟೇಟೊಂದು ಹೆರಾಲ್ಡ್ ಹೆಸರಿಗೆ ಮಾಡಲಾಗಿತ್ತು. ವಯಸ್ಕ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸುವ ಅವಶ್ಯಕತೆಯಿಲ್ಲವೆಂದು ಹೆರಾಲ್ಡ್ ಕುಟುಂಬದವರಿಗೆ ಹೇಳಿದ್ದ.

ಆತ್ಮಹತ್ಯೆ ಮಾಡಿಕೊಂಡ

ಎರಡು ವರ್ಷಗಳ ನಂತರ ಹೆರಾಲ್ಡ್ ನನ್ನು 15 ಕೊಲೆಗಳು ಮತ್ತು ಒಂದು ಪೋರ್ಜರಿ ಪ್ರಕರಣಗಳ ಆರೋಪದಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅವನಿಗೆ ಜೀವಾವಧಿ ಸೆರೆವಾಸದ ಶಿಕ್ಷೆ ವಿಧಿಸಿತ್ತು. ಆದರೆ, ಹೆರಾಲ್ಡ್ ಸೆರೆಮನೆ ಸೆಲ್ ನಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಬ್ರಿಟಿಷ್ ಸರ್ಕಾರವು ಒಂದು ಸಮಿತಿಯನ್ನು ರಚಿಸಿ ಹೆರಾಲ್ಡ್ ಗೆ ಬಲಿಯಾದ ರೋಗಿಗಳ ಸಂಖ್ಯೆ ಎಷ್ಟು ಅಂತ ಪತ್ತೆ ಮಾಡಲು ತಿಳಿಸಿತು. 2005 ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾದ ಅಧಿಕೃತ ವರದಿಯ ಪ್ರಕಾರ ಹೆರಾಲ್ಡ್ 1971ರಿಂದ ಆರಂಭಿಸಿ ಬಂಧನಕ್ಕೊಳಗಾಗುವರೆಗೆ ಕನಿಷ್ಟ 250 ಜನರನ್ನು ಕೊಂದಿದ್ದ! ಹೆಚ್ಚಿನ ಪ್ರಕರಣಗಳಲ್ಲಿ ಅವನು ತನ್ನ ರೋಗಿಗಳಿಗೆ ಡಯಮಾರ್ಫಿನ್ ಹೆಸರಿನ ನೋವು ನಿವಾರಕ ಔಷಧಿಯ ಹೈ ಡೋಸ್ ನೀಡಿ ಸಾವಿನಕೂಪಕ್ಕೆ ತಳ್ಳುತ್ತಿದ್ದ ಮತ್ತು ಡೆತ್ ಸರ್ಟಿಫೀಕೇಟ್ ಗಳಲ್ಲಿ ಸಹಜ ಸಾವು ಎಂದು ನಮೂದಿಸಿ ಸಹಿ ಹಾಕುತ್ತಿದ್ದ.

ಉದ್ದೇಶ ನಿಗೂಢ!

ಅವನ್ಯಾಕೆ ಜನರನ್ನು ಕೊಲ್ಲುತ್ತಿದ್ದ ಅಂತ ಈಗಲೂ ನಿಗೂಢವಾಗಿದೆ. ಕೆಲವರ ಪ್ರಕಾರ ತನ್ನ ತಾಯಿ ಪಡುತ್ತಿದ್ದ ಅವಸ್ಥೆಯನ್ನು ನೋಡುತ್ತಾ ಬೆಳೆದ ಅವನಲ್ಲಿ ಪ್ರತೀಕಾರದ ಭಾವ ಮನೆಮಾಡಿಕೊಂಡಿತ್ತು. ಇನ್ನೂ ಕೆಲವರ ಪ್ರಕಾರ ವಯಸ್ಸಾದ ಜನ ಸಮಾಜಕ್ಕೆ, ವೈದ್ಯಕೀಯ ಸೇವೆ ಮತ್ತು ಕುಟುಂಬಕ್ಕೆ ಹೊರೆಯಾಗುತ್ತಾರೆ ಎಂದು ಭಾವಿಸಿದ್ದ ಅವನು ವಯಸ್ಕರ ಜನಸಂಖ್ಯೆಯನ್ನು ಕಡಿಮೆ ಮಾಡಲು ಅವರಿಗೆ ದಯಾಮರಣಕ್ಕೀಡು (ಯುಥನೇಸಿಯ) ಮಾಡುತ್ತಿದ್ದ.

ಇದನ್ನೂ ಓದಿ: ಸಿದ್ದರಾಮಯ್ಯ ಒಂದು ಕ್ಷೇತ್ರದಿಂದ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ: ಆದಿನಾಡು ಚಿಕ್ಕಮ್ಮ ದೇವಿ ಸಂದೇಶ

ಮೂರನೇ ವಾದ ಅಥವಾ ಸಾಧ್ಯತೆಯೆಂದರೆ, ಒಬ್ಬ ವೈದ್ಯನಾಗಿ ಜನರನ್ನು ಬದುಕಿಸುವ ಅಥವಾ ಸಾಯಿಸುವ ಅಧಿಕಾರ ತನಗಿದೆ ಎಂದು ಡಾ ಹೆರಾಲ್ಡ್ ಭಾವಿಸಿದ್ದ ಮತ್ತು ಅವರನ್ನು ಕೊಲ್ಲುವ ಮೂಲಕ ತನ್ನ ಆಧಿಕಾರವನ್ನು ಚಲಾಯಿಸುತ್ತಿರುವ ಪಾಶವೀ ಆನಂದವನ್ನು ಪಡೆಯುತ್ತಿದ್ದ. ಅಜ್ಜಿಯೊಬ್ಬರ ವಿಲ್ ನಲ್ಲ್ಲಿ ಮಾರ್ಪಾಟು ಮಾಡಿ ಎಸ್ಟೇಟ್ ಅನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದು ನಿಜವಾದರೂ, ಹಣ ಅಥವಾ ಆಸ್ತಿಪಾಸ್ತಿಗಳನ್ನು ಕಬಳಿಸಲು ಅವನು ಕೊಲೆಗಳನ್ನು ಮಾಡುತ್ತಿದ್ದನೆಂಬ ವಾದಕ್ಕೆ ಯಾವುದೇ ಪುಷ್ಟಿ ಸಿಕ್ಕಿಲ್ಲ.

ಕೊಲೆಗಳು ಬೆಳಕಿಗೆ ಯಾಕೆ ಬರಲಿಲ್ಲ?

ಆದರೆ, ಅಷ್ಟೆಲ್ಲ ಕೊಲೆಗಳನ್ನು ಮಾಡಿದರೂ ಡಾ ಹೆರಾಲ್ಡ್ ಹೇಗೆ ಸುಮಾರು ವರ್ಷಗಳವರೆಗೆ ಅವುಗಳನ್ನು ಮುಚ್ಚಿಡುವಲ್ಲಿ ಸಫಲನಾದ ಅನ್ನೋದು ಪೊಲೀಸರಿಗೆ ಕೊನೆವರೆಗೆ ಗೊತ್ತಾಗಲಿಲ್ಲ. ಈ ಸಂಗತಿ ಮತ್ತಷ್ಟು ವಿಸ್ಮಯಕಾರಿ ಅನಿಸೋದು ಯಾಕೆಂದರೆ, ಅವನಿಗೆ ಬಲಿಯಾದವರೆಲ್ಲ ಅವನಲ್ಲಿಗೆ ಬರುವ ಮೊದಲು ಆರೋಗ್ಯವಾಗೇ ಇರುತ್ತಿದ್ದರು. ಜನರು ತನ್ನ ಮೇಲಿಟ್ಟಿದ್ದ ವಿಶ್ವಾಸವನ್ನು ಅವನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಮತ್ತು ಜನರಲ್ಲಿ ಭೀತಿ ಹುಟ್ಟಿಸುವ ಅಪರಾಧಗಳನ್ನು ನಡೆಸುತ್ತಿದ್ದ.

ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?
ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ