
ಇಸ್ಲಮಾಬಾದ್, ಮೇ 16: ಪಾಕಿಸ್ತಾನದಲ್ಲಿ (Pakistan) ಮೊದಲಿನಿಂದಲೂ ಮಹಿಳಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ. ಅಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯೇ ವಿನಃ ಕಡಿಮೆಯಾಗುತ್ತಿಲ್ಲ. ಇದೀಗ ಪಾಕಿಸ್ತಾನದ ಮಾಜಿ ಸಂಸದೆ ಶಾಂತನಾ ಗುಲ್ಜಾರ್ ಖಾನ್ ಟಿವಿ ಲೈವ್ ಸಂದರ್ಶನದಲ್ಲಿ ಪಾಕಿಸ್ತಾನದ ಮತ್ತೊಂದು ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನದ ಶೇ. 82ರಷ್ಟು ಅತ್ಯಾಚಾರಕ್ಕೊಳಗಾದ ಮಹಿಳೆಯರು ತಮ್ಮ ತಂದೆ ಮತ್ತು ಸಹೋದರರಿಂದಲೇ ಲೈಂಗಿಕ ಕಿರುಕುಳಕ್ಕೊಳಗಾದವರು ಎಂಬ ಆಘಾತಕಾರಿ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಶೇ. 82ರಷ್ಟು ಲೈಂಗಿಕ ದೌರ್ಜನ್ಯಗಳು ಅತ್ಯಾಚಾರಕ್ಕೊಳಗಾದ ಮಹಿಳೆಯ ತಂದೆ ಅಥವಾ ಸಹೋದರರಿಂದಲೇ ನಡೆಯುತ್ತವೆ ಎಂದು ಪಾಕಿಸ್ತಾನದ ಮಾಜಿ ಮಹಿಳಾ ಸಂಸದೆ ಹೇಳಿದ್ದಾರೆ. ಇದು ಪಾಕಿಸ್ತಾನ ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆಯ ವ್ಯಾಪ್ತಿಯನ್ನು ಎತ್ತಿ ತೋರಿಸುತ್ತದೆ. ಮಹಿಳೆಯರ ಮೇಲೆ ಹೆಚ್ಚಾಗಿ ದೌರ್ಜನ್ಯ ಎಸಗುವ ಕುಟುಂಬದ ಸದಸ್ಯರಲ್ಲಿ ತಂದೆ, ಸಹೋದರರು, ಅಜ್ಜ ಮತ್ತು ಚಿಕ್ಕಪ್ಪಂದಿರು ಕೂಡ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಮಹಿಳೆಯರ ಮೇಲೆ ಅವರದೇ ರಕ್ತಸಂಬಂಧ ಹೊಂದಿರುವ ಅಪ್ಪ, ಅಣ್ಣ, ಅಜ್ಜ, ಚಿಕ್ಕಪ್ಪಂದಿರು ಅತ್ಯಾಚಾರ ನಡೆಸುವ ಮೂಲಕ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ರಾಷ್ಟ್ರೀಯ ಸುದ್ದಿವಾಹಿನಿಯ ಲೈವ್ ಕಾರ್ಯಕ್ರಮದಲ್ಲಿ ಅಲ್ಲಿನ ಮಾಜಿ ಸಂಸದೆಯೇ ಬಯಲು ಮಾಡಿದ್ದಾರೆ.
PERVERTED Pakistani Society, discussed on Pak National TV.
FACT: 82% Muslim girls are raped by their own Fathers, Brothers, Paternal, Maternal Uncles, Grand fathers & Other Blood Relations.
What a pathetic & rotten set of people?@CMShehbaz@MaryamNSharif@MunizaeJahangir… pic.twitter.com/boQo959UUx— 🇮🇳 Ramnik Singh ੴ ਰਮਣੀਕ, रमणिक (@ramnikmann) March 12, 2025
ಇದನ್ನೂ ಓದಿ: 2019ರ ಪೊಲ್ಲಾಚಿ ಅತ್ಯಾಚಾರ ಪ್ರಕರಣ; 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಅವರ ಪ್ರಕಾರ, ಈ ರೀತಿಯ ಹಿಂಸೆಗೆ ಒಳಗಾದ ಹುಡುಗಿಯರು ಮತ್ತು ಮಹಿಳೆಯರು ಪೊಲೀಸರಿಗೆ ದೂರು ನೀಡಲು ಸಹ ಹಿಂಜರಿಯುತ್ತಾರೆ. ಪಾಕಿಸ್ತಾನಿ ಸಮಾಜದಲ್ಲಿ ಯಾರೂ ಈ ವಿಷಯದ ಬಗ್ಗೆ ಮಾತನಾಡಲು ಏಕೆ ಸಿದ್ಧರಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ ಮತ್ತು ಆಧುನಿಕ ಸಮಾಜದಲ್ಲೂ ಕಾಡುತ್ತಿರುವ ಈ ವಿಷಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ