ಇಟಲಿ ವಿಲವಿಲ: ಕೊರೊನಾದಿಂದ ಸತ್ತವರ ಸಂಖ್ಯೆ ಅತ್ಯಧಿಕ ಯಾಕೆ ಗೊತ್ತಾ?
ರೋಮ್: ಇಟಲಿಯಲ್ಲಿ ಕೊರೊನಾ ವೈರಸ್ನಿಂದ ಸತ್ತವರ ಸಂಖ್ಯೆ ಅತ್ಯಧಿಕವಾಗಿದೆ. ಇದುವರೆಗೆ ಇಟಲಿಯಲ್ಲಿ ಸುಮಾರು 9 ಸಾವಿರ ಪ್ರಕರಣಗಳು ದಾಖಲಾಗಿದ್ದು, 631 ಮಂದಿ ಸಾವಿಗೀಡಾಗಿದ್ದಾರೆ. ಇದೇ ವೇಳೆ ಕೊರೊನಾ ವೈರಸ್ಗೆ ಜನ್ಮ ನೀಡಿದ ಚೀನಾದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ವ್ಯುಬೈ ಪ್ರಾಂತ್ಯದಲ್ಲಿ 13 ಪ್ರಕರಣಗಳು ದಾಖಲಾಗಿವೆ. ಇಟಲಿಯಲ್ಲಿ ಕೊರೊನಾ ಎಷ್ಟು ಆತಂಕವನ್ನು ಸೃಷ್ಟಿಸಿದೆಯೆಂದರೆ ಪೋಸ್ಟ್ ಆಫೀಸ್ವೊಂದರ ಮುಂದೆ ಸರತಿ ಸಾಲಿನಲ್ಲಿ ಜನರು ನಿಂತಿರುವುದನ್ನು ಗಮನಿಸಬಹುದಾಗಿದೆ. ಇಷ್ಟಕ್ಕೂ ಕೊರೊನಾ ವೈರಸ್ನ ತವರು ಚೀನಾಕ್ಕಿಂತಲೂ ಇಟಲಿಯಲ್ಲೇ ಅತ್ಯಧಿಕ ಸಾವುಗಳು ಸಂಭವಿಸಲು ಕಾರಣವಾದರೂ […]
ರೋಮ್: ಇಟಲಿಯಲ್ಲಿ ಕೊರೊನಾ ವೈರಸ್ನಿಂದ ಸತ್ತವರ ಸಂಖ್ಯೆ ಅತ್ಯಧಿಕವಾಗಿದೆ. ಇದುವರೆಗೆ ಇಟಲಿಯಲ್ಲಿ ಸುಮಾರು 9 ಸಾವಿರ ಪ್ರಕರಣಗಳು ದಾಖಲಾಗಿದ್ದು, 631 ಮಂದಿ ಸಾವಿಗೀಡಾಗಿದ್ದಾರೆ. ಇದೇ ವೇಳೆ ಕೊರೊನಾ ವೈರಸ್ಗೆ ಜನ್ಮ ನೀಡಿದ ಚೀನಾದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ವ್ಯುಬೈ ಪ್ರಾಂತ್ಯದಲ್ಲಿ 13 ಪ್ರಕರಣಗಳು ದಾಖಲಾಗಿವೆ. ಇಟಲಿಯಲ್ಲಿ ಕೊರೊನಾ ಎಷ್ಟು ಆತಂಕವನ್ನು ಸೃಷ್ಟಿಸಿದೆಯೆಂದರೆ ಪೋಸ್ಟ್ ಆಫೀಸ್ವೊಂದರ ಮುಂದೆ ಸರತಿ ಸಾಲಿನಲ್ಲಿ ಜನರು ನಿಂತಿರುವುದನ್ನು ಗಮನಿಸಬಹುದಾಗಿದೆ.
ಇಷ್ಟಕ್ಕೂ ಕೊರೊನಾ ವೈರಸ್ನ ತವರು ಚೀನಾಕ್ಕಿಂತಲೂ ಇಟಲಿಯಲ್ಲೇ ಅತ್ಯಧಿಕ ಸಾವುಗಳು ಸಂಭವಿಸಲು ಕಾರಣವಾದರೂ ಏನು ಎಂಬುದನ್ನೂ ತಡಕಾಡಿದಾಗ ಇಟಲಿಯ ಟೋಟಲ್ ನೆಗ್ಲಿಜೆನ್ಸ್ ಎದ್ದು ಕಾಣುತ್ತಿದೆ. ಆರಂಭದಲ್ಲಿ ಯುವಕನೊಬ್ಬ ಫೆ.20ರಂದು ತನಗೆ ಕೊರೊನಾ ವೈರಸ್ ಸೋಂಕಿದೆ ಎಂದು ಹೇಳಿಕೊಂಡಿದ್ದ. ಅದಾದನಂತರವೂ ದಿವ್ಯ ನಿರ್ಲಕ್ಷ್ಯ ತೋರಿದ ಇಟಲಿ ಆಡಳಿತ ಮಂಪರಿಗೆ ಜಾರಿದೆ. ಎಚ್ಚೆತ್ತುಕೊಳ್ಳುವಷ್ಟರಲ್ಲಿ ದುಪ್ಪಟ್ಟು ಪ್ರಮಾಣಗಳಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ. ಹಾಗಾಗಿ ಇಟಲಿ ಇಂದು ಅತ್ಯಧಿಕ ಸಾವುಗಳನ್ನು ಕಾಣುತ್ತಿದೆ.