Big News: ಕ್ಯಾಲಿಫೋರ್ನಿಯಾದಲ್ಲಿ ಆಕಾಶದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ; ಹಲವು ಜನ ಸಾವು

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಗುರುವಾರ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ 2 ವಿಮಾನಗಳು ಡಿಕ್ಕಿ ಹೊಡೆದು ಹಲವಾರು ಜನರು ಸಾವನ್ನಪ್ಪಿದ್ದಾರೆ.

Big News: ಕ್ಯಾಲಿಫೋರ್ನಿಯಾದಲ್ಲಿ ಆಕಾಶದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ; ಹಲವು ಜನ ಸಾವು
ಕ್ಯಾಲಿಫೋರ್ನಿಯಾದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ
Updated By: ಸುಷ್ಮಾ ಚಕ್ರೆ

Updated on: Aug 19, 2022 | 8:28 AM

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾ (California Airport) ರಾಜ್ಯದಲ್ಲಿ ಗುರುವಾರ 2 ಸಣ್ಣ ವಿಮಾನಗಳ ನಡುವೆ ಆಕಾಶದಲ್ಲೇ ಘರ್ಷಣೆ ಸಂಭವಿಸಿದ್ದು, ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ವಿಮಾನ (Plane) ನಿಲ್ದಾಣದಲ್ಲಿ 2 ವಿಮಾನಗಳು ಲ್ಯಾಂಡ್ ಆಗಲು ಪ್ರಯತ್ನಿಸಿದ ನಂತರ ವ್ಯಾಟ್ಸನ್‌ವಿಲ್ಲೆ ನಗರದಲ್ಲಿ ಈ ಘಟನೆ ನಡೆದಿದೆ.

“2 ವಿಮಾನಗಳನ್ನು ಲ್ಯಾಂಡ್ ಮಾಡಲು ಪ್ರಯತ್ನಿಸಿದ ನಂತರ ವ್ಯಾಟ್ಸನ್‌ವಿಲ್ಲೆ ಮುನಿಸಿಪಲ್ ಏರ್‌ಪೋರ್ಟ್‌ಗೆ ಹಲವಾರು ಏಜೆನ್ಸಿಗಳು ಪ್ರತಿಕ್ರಿಯಿಸಿವೆ. ಅನೇಕ ಸಾವು-ನೋವುಗಳಾಗಿರುವ ಬಗ್ಗೆ ನಮಗೆ ವರದಿಗಳು ಬಂದಿವೆ” ಎಂದು ಟ್ವಿಟ್ಟರ್ ಮೂಲಕ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಗುರುವಾರ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ 2 ವಿಮಾನಗಳು ಡಿಕ್ಕಿ ಹೊಡೆದು ಹಲವಾರು ಜನರು ಸಾವನ್ನಪ್ಪಿದ್ದಾರೆ. ವ್ಯಾಟ್ಸನ್‌ವಿಲ್ಲೆ ನಗರದಿಂದ ಮಾಡಿದ ಟ್ವೀಟ್ ಪ್ರಕಾರ, ವಿಮಾನಗಳು ವ್ಯಾಟ್ಸನ್‌ವಿಲ್ಲೆ ಮುನ್ಸಿಪಲ್ ಏರ್‌ಪೋರ್ಟ್‌ನಲ್ಲಿ ಗುರುವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ವಿಮಾನಗಳು ಪತನಗೊಂಡಿವೆ. ನಗರದ ಒಡೆತನದ ವಿಮಾನ ನಿಲ್ದಾಣವು ವಿಮಾನದ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಅನ್ನು ನಿರ್ದೇಶಿಸಲು ನಿಯಂತ್ರಣ ಗೋಪುರವನ್ನು ಹೊಂದಿರಲಿಲ್ಲ.

ಇದನ್ನೂ ಓದಿ: Nepal Plane ನಾಪತ್ತೆಯಾಗಿದ್ದ ನೇಪಾಳದ ತಾರಾ ಏರ್​​ಲೈನ್ಸ್​​​ ಕೊವಾಂಗ್​​ನಲ್ಲಿ ಪತ್ತೆ, ವಿಮಾನದ ಸ್ಥಿತಿ ಇನ್ನೂ ಖಚಿತವಾಗಿಲ್ಲ: ವರದಿ

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಪ್ರಕಾರ, ಅಪಘಾತದ ಸಮಯದಲ್ಲಿ ಅವಳಿ-ಎಂಜಿನ್ ಸೆಸ್ನಾ 340ನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಒಂದೇ ಇಂಜಿನ್ ಸೆಸ್ನಾ 152ನಲ್ಲಿ ಪೈಲಟ್ ಮಾತ್ರ ಇದ್ದರು. ಈ ಎರಡು ವಿಮಾನಗಳ ಅಪಘಾತದಿಂದಾಗಿ ಅನೇಕ ಸಾವು-ನೋವುಗಳು ವರದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈ ಅವಘಡದಲ್ಲಿ ಯಾರಾದರೂ ಬದುಕುಳಿದಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಿಮಾನ ಅಪಘಾತಗೊಂಡು ಕೆಳಗೆ ಅಪ್ಪಳಿಸಿದಾಗ ಮೈದಾನದಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಆ ವಿಮಾನ ನಿಲ್ದಾಣವು 4 ರನ್‌ವೇಗಳನ್ನು ಹೊಂದಿತ್ತು. ಆ ವಿಮಾನ ನಿಲ್ದಾಣದಲ್ಲಿ 300ಕ್ಕೂ ಹೆಚ್ಚು ವಿಮಾನಗಳು ಲ್ಯಾಂಡ್ ಆಗುತ್ತಿತ್ತು. ಇದು ವರ್ಷಕ್ಕೆ 55,000ಕ್ಕೂ ಹೆಚ್ಚು ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ಈ ವಿಮಾನ ನಿಲ್ದಾಣವನ್ನು ಕೃಷಿ ವ್ಯವಹಾರಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ.

ಇದನ್ನೂ ಓದಿ: Nepal Plane Crash: ನೇಪಾಳ ವಿಮಾನ ದುರಂತ; 4 ಭಾರತೀಯರು ಸೇರಿ 22 ಪ್ರಯಾಣಿಕರ ಮೃತದೇಹಗಳೂ ಪತ್ತೆ

ಮಾಂಟೆರಿ ಕೊಲ್ಲಿಯ ಸಮೀಪವಿರುವ ವ್ಯಾಟ್ಸನ್‌ವಿಲ್ಲೆ, ಸ್ಯಾನ್ ಫ್ರಾನ್ಸಿಸ್ಕೋದ ದಕ್ಷಿಣಕ್ಕೆ ಸುಮಾರು 100 ಮೈಲುಗಳು (160 ಕಿ.ಮೀ.) ದೂರದಲ್ಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಫೋಟೋಗಳು ಮತ್ತು ವಿಡಿಯೋಗಳಲ್ಲಿ ವಿಮಾನ ನಿಲ್ದಾಣದ ಹುಲ್ಲಿನ ಮೈದಾನದಲ್ಲಿ ಒಂದು ವಿಮಾನದ ಅವಶೇಷಗಳು ಪತ್ತೆಯಾಗಿವೆ. ಒಂದು ಫೋಟೋದಲ್ಲಿ ವಿಮಾನ ನಿಲ್ದಾಣದ ಸಮೀಪವಿರುವ ಬೀದಿಯಿಂದ ಹೊಗೆ ಬರುವುದನ್ನು ನೋಡಬಹುದು.

ಈ ಎರಡು ವಿಮಾನಗಳು ಪತನಗೊಂಡಾಗ ಭೂಮಿಯಿಂದ ಸುಮಾರು 200 ಅಡಿ (61 ಮೀಟರ್) ಎತ್ತರದಲ್ಲಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ