Nepal Plane ನಾಪತ್ತೆಯಾಗಿದ್ದ ನೇಪಾಳದ ತಾರಾ ಏರ್​​ಲೈನ್ಸ್​​​ ಕೊವಾಂಗ್​​ನಲ್ಲಿ ಪತ್ತೆ, ವಿಮಾನದ ಸ್ಥಿತಿ ಇನ್ನೂ ಖಚಿತವಾಗಿಲ್ಲ: ವರದಿ

Nepal Plane ನಾಪತ್ತೆಯಾಗಿದ್ದ ನೇಪಾಳದ ತಾರಾ ಏರ್​​ಲೈನ್ಸ್​​​  ಕೊವಾಂಗ್​​ನಲ್ಲಿ ಪತ್ತೆ, ವಿಮಾನದ ಸ್ಥಿತಿ ಇನ್ನೂ ಖಚಿತವಾಗಿಲ್ಲ: ವರದಿ
ತಾರಾ ಏರ್ (ಸಂಗ್ರಹ ಚಿತ್ರ)
Image Credit source: Hindustan Times

ನೇಪಾಳ (Nepal) ಸ್ಥಳೀಯ ವಿಮಾನಯಾನ ಸಂಸ್ಥೆಯ ಚಿಕ್ಕ ವಿಮಾನವು ಮುಸ್ತಾಂಗ್‌ನ ಕೊವಾಂಗ್‌ನಲ್ಲಿ ಪತ್ತೆಯಾಗಿದೆ. ವಿಮಾನದ ಸ್ಥಿತಿ ಇನ್ನೂ ಖಚಿತವಾಗಿಲ್ಲ ಎಂದು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯಸ್ಥರು ತಿಳಿಸಿದ್ದಾರೆ

TV9kannada Web Team

| Edited By: Rashmi Kallakatta

May 29, 2022 | 5:40 PM

ಕೊವಾಂಗ್: ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ನೇಪಾಳ (Nepal) ಸ್ಥಳೀಯ ವಿಮಾನಯಾನ ಸಂಸ್ಥೆಯ ಚಿಕ್ಕ ವಿಮಾನವು ಮುಸ್ತಾಂಗ್‌ನ ಕೊವಾಂಗ್‌ನಲ್ಲಿ ಪತ್ತೆಯಾಗಿದೆ. ವಿಮಾನದ ಸ್ಥಿತಿ ಇನ್ನೂ ಖಚಿತವಾಗಿಲ್ಲ ಎಂದು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯಸ್ಥರು ತಿಳಿಸಿದ್ದಾರೆ. ನೇಪಾಳದ ತಾರಾ ಏರ್‌ಗೆ (Tara Air) ಸೇರಿದ ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು (Twin Otter 9N-AET plane) ಪೋಖರಾದಿಂದ ಬೆಳಿಗ್ಗೆ 10.15 ಕ್ಕೆ ಹೊರಟಿದ್ದು 15 ನಿಮಿಷಗಳ ನಂತರ ಕಂಟ್ರೋಲ್ ಟವರ್ ನಿಂದ ಸಂಪರ್ಕವನ್ನು ಕಳೆದುಕೊಂಡಿತು ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ. ವಿಮಾನವು ಮಾನಪತಿ ಹಿಮಾಲ್ ಭಾಗದ  ಲಾಮ್ಚೆ ನದಿಯ ಮುಖಭಾಗದಲ್ಲಿ ಪತನಗೊಂಡಿದೆ. ಸ್ಥಳೀಯರು ನೇಪಾಳ ಸೇನೆಯೊಂದಿಗೆ ಹಂಚಿಕೊಂಡ ಮಾಹಿತಿ ಇದು ಎಂದು ನೇಪಾಳ ಸೇನೆಯ ವಕ್ತಾರ ನಾರಾಯಣ್ ಸಿಲ್ವಾಲ್ ಹೇಳಿದ್ದಾರೆ. “ನೇಪಾಳ ಸೇನೆಯು ನೆಲ ಮತ್ತು ವಾಯು ಮಾರ್ಗದಿಂದ ಪ್ರಸ್ತುತ ಪ್ರದೇಶಕ್ಕೆ ಹೋಗುತ್ತಿದೆ ಎಂದುಸಿಲ್ವಾಲ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ನೇಪಾಳದ ಸೇನಾ ಹೆಲಿಕಾಪ್ಟರ್ 10 ಸೈನಿಕರು ಮತ್ತು ನಾಗರಿಕ ವಿಮಾನಯಾನ ಪ್ರಾಧಿಕಾರದ ಇಬ್ಬರು ಉದ್ಯೋಗಿಗಳನ್ನು ಹೊತ್ತೊಯ್ಯುತ್ತಿದ್ದು ನಾರ್ಶಾಂಗ್ ಮಠದ ಬಳಿಯ ನದಿಯ ದಡದಲ್ಲಿ ಪತನವಾಗಿರುವ ಸಾಧ್ಯತೆ ಇದೆ ಎಂದು ಮೈ ರಿಪಬ್ಲಿಕಾ ಪತ್ರಿಕೆಯನ್ನು ಉಲ್ಲೇಖಿಸಿ ಈ ಹಿಂದೆ ಪಿಟಿಐ ವರದಿ ಮಾಡಿತ್ತು.

ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅವರಲ್ಲಿ ನಾಲ್ವರನ್ನು ಭಾರತೀಯರು ಎಂದು ಗುರುತಿಸಲಾಗಿದೆ. ಇಬ್ಬರು ಜರ್ಮನರು, 13 ನೇಪಾಳಿ ಪ್ರಯಾಣಿಕರು ಮತ್ತು ನೇಪಾಳದ ಮೂವರು ಸಿಬ್ಬಂದಿ ಇದ್ದಾರೆ ಎಂದು ಹೇಳಲಾಗಿದೆ.

ವಿಮಾನವು ಪಶ್ಚಿಮ ಪರ್ವತ ಪ್ರದೇಶದ ಜೋಮ್ಸಮ್ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10:15 ಕ್ಕೆ ಇಳಿಯಬೇಕಿತ್ತು. ಪೋಖರಾ-ಜೋಮ್ಸೋಮ್ ವಾಯು ಮಾರ್ಗದಲ್ಲಿ ಘೋರೆಪಾನಿಯಾಗಿ ಹಾರುತ್ತಿದ್ದಾಗ ಕಂಟ್ರೋಲ್ ಟವರ್​​ನಿಂದ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ವಿಮಾನವು ಮುಸ್ತಾಂಗ್‌ನಲ್ಲಿನ ಜೋಮ್ಸಮ್‌ನ ಆಕಾಶದ ಮೇಲೆ ಕಾಣಿಸಿಕೊಂಡಿತು. ನಂತರ ಮೌಂಟ್ ಧೌಲಗಿರಿಗೆ ತಿರುಗಿತು. ನಂತರ ಅದು ಸಂಪರ್ಕಕ್ಕೆ ಬರಲಿಲ್ಲ” ಎಂದು ಮುಖ್ಯ ಜಿಲ್ಲಾ ಅಧಿಕಾರಿ ನೇತ್ರಾ ಪ್ರಸಾದ್ ಶರ್ಮಾ ಎಎನ್ಐಗೆ ಫೋನ್ ಮೂಲಕ ಹೇಳಿದ್ದಾರೆ.

ಇದನ್ನೂ ಓದಿ

ಪೊಲೀಸ್ ಅಧಿಕಾರಿಗಳ ಪ್ರಕಾರ, ವಿಮಾನವು ಮುಸ್ತಾಂಗ್ ಜಿಲ್ಲೆಯ ಲೆಟೆಯ “ಟಿಐಟಿಐ” ಪ್ರದೇಶದಲ್ಲಿ ಪತನಗೊಂಡಿದೆ ಎಂದು ಶಂಕಿಸಲಾಗಿದೆ.” ಟಿಐಟಿಐ ಯಿಂದ ಸ್ಥಳೀಯರು ಕರೆ ಮಾಡಿ ನಮಗೆ ಮಾಹಿತಿ ನೀಡಿದ್ದಾರೆ, ಏನೋ ಸದ್ದು ಕೇಳಿಸಿದೆ ಎಂದು ಅವರು ಹೇಳಿದ್ದಾರೆ,ನಾವು ಶೋಧ ಕಾರ್ಯಾಚರಣೆಗಾಗಿ ಪ್ರದೇಶಕ್ಕೆ ಹೆಲಿಕಾಪ್ಟರ್ ಅನ್ನು ನಿಯೋಜಿಸುತ್ತಿದ್ದೇವೆ” ಎಂದು ಮುಸ್ತಾಂಗ್‌ನ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್ಪಿ ರಾಮ್ ಕುಮಾರ್ ದಾನಿ ಎಎನ್‌ಐಗೆ ತಿಳಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada