ಪ್ಯಾರಿಸ್, ನವೆಂಬರ್ 6: ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ (Paris Airport) ಮುಸ್ಲಿಂ ಪ್ರಯಾಣಿಕರು (Muslim travellers) ಸಾಮೂಹಿಕವಾಗಿ ನಮಾಜ್ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವಿವಾದಕ್ಕೆ ಗುರಿಯಾಗಿದೆ. ಚಿತ್ರವು ವಿವಾದಕ್ಕೀಡಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಪ್ಯಾರಿಸ್ ವಿಮಾನ ನಿಲ್ದಾಣ ಆಡಳಿತವು, ಈ ರೀತಿಯ ವಿದ್ಯಮಾನವು ವಿಷಾದನೀಯ ಎಂದು ಹೇಳಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿರುವ ಚಿತ್ರದಲ್ಲಿ, ಪ್ಯಾರಿಸ್ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದ ನಿರ್ಗಮನ ಹಾಲ್ನಲ್ಲಿ ಹತ್ತಾರು ಮಂದಿ ಸಾಮೂಹಿಕವಾಗಿ ನಮಾಜ್ ಮಾಡುವ ಚಿತ್ರವಿದೆ. ಅವರೆಲ್ಲ ಜೋರ್ಡಾನ್ಗೆ ತೆರಳುವ ವಿಮಾನಕ್ಕೆ ಕಾಯುತ್ತಿದ್ದವರು ಎನ್ನಲಾಗಿದೆ. ಹಮಾಸ್ ಮತ್ತು ಇಸ್ರೇಲ್ ನಡುವಣ ಸಂಘರ್ಷದ ಸಂದರ್ಭದಲ್ಲೇ ವಿಮಾ ನಿಲ್ದಾಣದಲ್ಲಿನ ನಮಾಜ್ ಚಿತ್ರ ವೈರಲ್ ಆಗಿರುವುದು ಫ್ರಾನ್ಸ್ನಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ.
ಈ ಮಧ್ಯೆ, ಫ್ರಾನ್ಸ್ನ ಸಾರಿಗೆ ಸಚಿವ ಕ್ಲೆಮೆಂಟ್ ಬ್ಯೂನ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳು ನಿಯಮಗಳ ಪಾಲನೆಗೆ ಸಂಪೂರ್ಣವಾಗಿ ಬದ್ಧರಾಗಿದ್ದಾರೆ ಮತ್ತು ಆ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಫ್ರಾನ್ಸ್ನ ಅತಿದೊಡ್ಡ ವಿಮಾನ ನಿಲ್ದಾಣದ ಟರ್ಮಿನಲ್ 2ಬಿಯಲ್ಲಿ ನಮಾಜ್ ಮಾಡಲಾಗಿತ್ತು. ಸುಮಾರು 30 ಮಂದಿ ಪ್ರಯಾಣಿಕರು ನಮಾಜ್ನಲ್ಲಿ ಭಾಗವಹಿಸಿದ್ದರು. ಸುಮಾರು 10 ನಿಮಿಷಗಳ ಕಾಲ ನಮಾಜ್ ಮಾಡಲಾಗಿತ್ತು ಎಂದು ‘ಎಎಫ್ಪಿ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ದಯನೀಯ ಸ್ಥಿತಿಯಲ್ಲಿ ಆಫ್ಘನ್ ನಿರಾಶ್ರಿತರು: ಪಾಕಿಸ್ತಾನ ತೊರೆಯುತ್ತಿರುವವರಿಗೆ ಕುಡಿಯಲು ನೀರು, ಆಹಾರಕ್ಕೆ ತತ್ವಾರ
ಸಾಮಾನ್ಯವಾಗಿ ಎಲ್ಲಾ ಧರ್ಮಗಳ ಜನರು ಖಾಸಗಿಯಾಗಿ ಪ್ರಾರ್ಥನೆ ಸಲ್ಲಿಸಲು ವಿಮಾನ ನಿಲ್ದಾಣಗಳಲ್ಲಿ ವಿಶೇಷ ಕೊಠಡಿಗಳನ್ನು ಮೀಸಲಿಟ್ಟಿರಲಾಗುತ್ತದೆ. ಆದರೆ ಫ್ರಾನ್ಸ್ ಸರ್ಕಾರವು ಶಾಲೆಗಳು, ವಿಮಾನ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ನಂಬಿಕೆಯ ಪ್ರದರ್ಶನಕ್ಕೆ ಮಿತಿ ಹೇರಿದೆ.
#ADP #Islam Photo du 5/11/23 à #RoissyCharlesdeGaulle. Que fait le PDG de #Aeroports de #Paris quand son aéroport se transforme en #mosquée? Le changement d’affectation est-il officiel ???? 🇫🇷🇪🇺 pic.twitter.com/IbJNE8M7fd
— noelle lenoir (@noellelenoir) November 5, 2023
‘ಇದು ವಿಷಾದನೀಯ’ ಎಂದು ಪ್ಯಾರಿಸ್ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಸ್ಟಿನ್ ಡಿ ರೊಮಾನೆಟ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಉಲ್ಲೇಖಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ