AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nostradamus Predictions 2024: ಚೀನಾ ನೌಕಾ ಯುದ್ಧ,  ಹವಾಮಾನ ವೈಪರಿತ್ಯ, 2024ರಲ್ಲಿ ಸಂಭವಿಸಲಿದೆ ಭಯಾನಕ  ಘಟನೆ: ನಾಸ್ಟ್ರಾಡಾಮಸ್ ಭವಿಷ್ಯವಾಣಿ

ನಾಸ್ಟ್ರಾಡಾಮಸ್ ಎಂಬ ಫ್ರೆಂಚ್ ತತ್ವಜ್ಞಾನಿ ನುಡಿದ ಹಲವು ಭವಿಷ್ಯವಾಣಿಗಳು ನಿಜವಾಗಿದೆ. ಅವರು ಮುಂಬರುವ ವರ್ಷವಾದ 2024 ರಲ್ಲಿ ನಡೆಯಬಹುದಾದ  ಕೆಲವೊಂದು  ಘಟನೆಗಳ ಬಗ್ಗೆಯೂ  ಭವಿಷ್ಯವಾಣಿ  ನುಡಿದಿದ್ದು, ಆ ಘಟನೆಗಳು ಯಾವುದೆಂಬುದನ್ನು ನೋಡೋಣ.

Nostradamus Predictions 2024: ಚೀನಾ ನೌಕಾ ಯುದ್ಧ,  ಹವಾಮಾನ ವೈಪರಿತ್ಯ, 2024ರಲ್ಲಿ ಸಂಭವಿಸಲಿದೆ ಭಯಾನಕ  ಘಟನೆ: ನಾಸ್ಟ್ರಾಡಾಮಸ್ ಭವಿಷ್ಯವಾಣಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Nov 07, 2023 | 12:55 PM

Share

ಪ್ರಸಿದ್ಧ ಫ್ರೆಂಚ್ ತತ್ವಜ್ಞಾನಿ ನಾಸ್ಟ್ರಾಡಾಮಸ್ (Nostradamus) ನುಡಿದಿರುವ ಅನೇಕ ಭವಿಷ್ಯವಾಣಿಗಳು ಇಲ್ಲಿಯವೆರೆಗೆ ನಿಜವೆಂದು ಸಾಬಿತಾಗಿದೆ. ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳನ್ನು ಸತ್ಯವೆಂದು ನಂಬುವ  ಅನೇಕ ಜನರಿದ್ದಾರೆ. 1566 ರ ಇಸವಿಯ ಮುಂಚೆಯೇ, ನಾಸ್ಟ್ರಾಡಾಮಸ್ 6 ಸಾವಿರಕ್ಕೂ ಹೆಚ್ಚು ಭವಿಷ್ಯವಾಣಿಗಳನ್ನು ನುಡಿದಿದ್ದರು. ಅಲ್ಲದೆ ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಮತ್ತು ಅದರ ಕಾರಣ ಏನಾಗಿರಬಹುದು ಎಂಬುದರ ಬಗ್ಗೆಯೂ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಎರಡನೇ ಮಹಾಯುದ್ದ, ಹಿಟ್ಲರ್ನ ಉದಯ, ಇಂದಿರಾ ಗಾಂಧಿ ಹತ್ಯೆ ಮತ್ತು ಅಮೇರಿಕಾದಲ್ಲಿನ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಭಯೋತ್ಪಾದಕ  ದಾಳಿ ಹೀಗೆ ಇವೆಲ್ಲದರ ಬಗ್ಗೆ  1566 ರ ಮುಂಚೆಯೇ ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳನ್ನು ನುಡಿದಿದ್ದರು. ಈ ಭವಿಷ್ಯವಾಣಿಗಳನ್ನು ನಾಸ್ಟ್ರಾಡಾಮಸ್ ಅವರ ಪುಸ್ತಕ ʼಲೆಸ್ ಪ್ರೊಫೆಟೀಸ್ʼನಲ್ಲಿ ಬರೆದಿದ್ದಾರೆ.  ಅವರು 2024ರಲ್ಲಿ ನಡೆಯಬಹುದಾದ ಘಟನೆಯಗಳ ಬಗ್ಗೆಯೂ ತಮ್ಮ ಪುಸ್ತಕದಲ್ಲಿ ಬರೆದಿದ್ದು, ಆ ಘಟನೆಗಳು ಯಾವುದೆಂಬುದನ್ನು ತಿಳಿಯೋಣ.

2024 ರಲ್ಲಿ ಸಂಭವಿಸಬಹುದಾದ ಕೆಲವು ಘಟನೆಗಳ ಕುರಿತ ನಾಸ್ಟ್ರಾಡಾಮಸ್ ಭವಿಷ್ಯವಾಣಿ:

ಅಮೇರಿಕಾದಲ್ಲಿ ಅಂತರ್ಯುದ್ಧ:

ನಾಸ್ಟ್ರಾಡಾಮಸ್ ತಮ್ಮ ಪುಸ್ತಕ ʼಲೆಸ್ ಪ್ರೊಫೆಟೀಸ್ʼನಲ್ಲಿ  2024 ರಲ್ಲಿ ಅಮೇರಿಕಾದಲ್ಲಿ ಅಂತರ್ ಯುದ್ಧ ಸಂಭವಿಸಬಹುದು ಎಂಬ ಭವಿಷ್ಯವಾಣಿಯನ್ನು ಬರೆದಿದ್ದಾರೆ. ಅವರ ಭವಿಷ್ಯವಾಣಿ  ಪ್ರಕಾರ, 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೇರಿಕಾದಲ್ಲಿ ಅಸ್ಥಿರತೆ ಉಂಟಾಗಬಹುದು. ಮತ್ತು ಇದರಿಂದ ಈ ದೇಶದಲ್ಲಿ ಅಂತರ್ ಯುದ್ಧದ ಪರಿಸ್ಥಿತಿಗಳು ಉದ್ಭವಿಸುವ ಸಾಧ್ಯತೆಯಿದೆ.

ಚೀನಾದ ನೌಕಾ ಯುದ್ಧ:

2024 ರ ವೇಳೆಯಲ್ಲಿ ಚೀನಾ ತನ್ನ ನೌಕಾ ಶಕ್ತಿಯನ್ನು ಬಳಸಿಕೊಂಡು ಯುದ್ಧವನ್ನು ಮಾಡುತ್ತದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ಚೀನಾ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ದೇಶ ಇಡೀ ಜಗತ್ತಿನಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿದೆ.  ಅಲ್ಲದೆ ದಕ್ಷಿಣ ಚೀನಾ ಸಮುದ್ರ ಮತ್ತು ತೈವಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೀನಾ ತನ್ನ ಮಿಲಿಟರಿ ಪ್ರಾಬಲ್ಯವನ್ನು ಸ್ಥಾಪಿಸಿದೆ. ಹೀಗೆ ಚೀನಾ ಪ್ರಾಬಲ್ಯವನ್ನು ಸಾಧಿಸಲು  ತನ್ನ ನೆರೆಹೊರೆಯ ದೇಶಗಳೊಂದಿಗೆ ಸಂಘರ್ಷಕ್ಕೆ ಇಳಿಯಬಹುದು ಹಾಗೂ ಚೀನಾ ತನ್ನ ನೌಕಾ ಶಕ್ತಿಯನ್ನು ಬಳಸಿಕೊಂಡು ಅಮೇರಿಕಾವನ್ನು ಬೆದರಿಸಲು ಪ್ರಯತ್ನಿಸುತ್ತದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ.

ತೀವ್ರ ಹವಾಮಾನ ಬದಲಾವಣೆ:

2024 ರಲ್ಲಿ ಜಗತ್ತು ಹವಾಮಾನ ವೈಪರಿತ್ಯಕ್ಕೆ ಸಾಕ್ಷಿಯಾಗಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ಭೂಮಿಯು ಒಣಗಬಹುದು  ಅಲ್ಲದೆ ಜಗತ್ತಿನಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದ್ದಾರೆ. ಜೊತೆಗೆ  2024 ರಲ್ಲಿ ಭೂಮಿಯು ತಾಪಮಾನ ಹೆಚ್ಚಾಗಿ ಭೂಮಿ ಇನ್ನಷ್ಟು ಬಿಸಿಯಾಗಲಿದೆ  ಎಂದು ನಾಸ್ಟ್ರಾಡಾಮಸ್  ʼಲೆಸ್ ಪ್ರೊಫೆಟೀಸ್ʼ ಪುಸ್ತಕದಲ್ಲಿ ಭವಿಷ್ಯವಾಣಿ ಬರೆದಿದ್ದಾರೆ.

ಪರಮಾಣು ಸ್ಪೋಟ:

ನಾಸ್ಟ್ರಾಡಾಮಸ್ ತನ್ನ ಪುಸ್ತಕದಲ್ಲಿ 2024 ರಲ್ಲಿ ಪರಮಾಣು ಸ್ಫೋಟ ಸಂಭವಿಸಲಿದೆ ಎಂದು ಭವಿಷ್ಯ ಬರೆದಿದ್ದಾರೆ, ಈ ಘಟನೆ ಕೂಡ ಹವಾಮಾನದ ಮೇಲೆ ಆಳವಾದ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ರಷ್ಯಾದ ಅಧ್ಯಕ್ಷರ ಹತ್ಯೆ, 2024ರಲ್ಲಿ ನಡೆಯುತ್ತೆ ಭಯಾನಕ ಘಟನೆ: ಬಾಬಾ ವಂಗಾ ಭವಿಷ್ಯವಾಣಿ 

ಹೊಸ ಪಾದ್ರಿ:

ನಾಸ್ಟ್ರಾಡಾಮಸ್ ತನ್ನ ಭವಿಷ್ಯವಾಣಿಯಲ್ಲಿ ಫ್ರಾನ್ಸ್ ದೇಶಕ್ಕೆ ಯುವ ಪೋಪ್ (ಪಾದ್ರಿ) ಆಗಮನವಾಗಲಿದೆ ಎಂದು ಹೇಳಿದ್ದಾರೆ. ಫ್ರಾನ್ಸಿನ ಈಗಿನ ಪೋಪ್ಗೆ ಪ್ರಸ್ತುತ 86 ವರ್ಷ ವಯಸ್ಸು. ಇತ್ತೀಚಿನ ದಿನಗಳಲ್ಲಿ ಅವರು ಅನಾರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದಾರೆ. ಹಾಗಾಗಿ 2024 ರ ವೇಳೆಯಲ್ಲಿ ಹೊಸ ಪೋಪ್ನ ಆಗಮನವಾಗಬಹುದು. ಆದರೆ ಆತ  ದುರ್ಬಲ ಪೋಪ್ ಎಂದು ಹೇಳಿದ್ದಾರೆ. ಅದು ಯಾವ ಅರ್ಥದಲ್ಲಿ ದುರ್ಬಲವೆಂದು ಕಾಲವೇ ಉತ್ತರಿಸಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:55 pm, Tue, 7 November 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ