ಮ್ಯಾನ್ಮಾರ್​ಗೆ ಅಪ್ಪಳಿಸಿದ ಕೊರೊನಾ 2ನೇ ಅಲೆ.. ಸೋಂಕು ನಿಯಂತ್ರಣಕ್ಕೆ ತಾವೇ ಮುಂದಾದ ಸ್ಥಳೀಯರು

| Updated By: KUSHAL V

Updated on: Sep 13, 2020 | 3:38 PM

ವಿಶ್ವದೆಲ್ಲೆಡೆ ಕೊರೊನಾ ಮಹಾಮಾರಿ ತನ್ನ ಕರಿಛಾಯೆಯನ್ನು ಬೀರಿದೆ. ಕೊರೊನಾ ರೌದ್ರನರ್ತನಕ್ಕೆ ತತ್ತರಿಸಿ ಹೋಗಿರುವ ಮ್ಯಾನ್ಮಾರ್‌ ಇದೀಗ ಅದರ ಹರಡುವಿಕೆಯನ್ನು ತಡೆಯಲು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಮ್ಯಾನ್ಮಾರ್‌ನಲ್ಲಿ ಕೆಲ ನಿವಾಸಿಗಳು ತಮ್ಮ ನೆರೆಹೊರೆಯ ಸುತ್ತಲೂ ಮರದ ತುಂಡುಗಳನ್ನು ಮತ್ತು ಕಬ್ಬಿಣದ ಸಲಾಕೆಗಳನ್ನು ಬಳಸಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದಾರೆ. ದೇಶಕ್ಕೆ ಕೊರೊನಾ ಮಹಾಮಾರಿಯ ಎರಡನೇ ಅಲೆ ಅಪ್ಪಳಿಸಿದ್ದು ಸೋಂಕಿತರ ಸಂಖ್ಯೆ ದಿನಿದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ, ಈ ರೀತಿ ಬ್ಯಾರಿಕೇಡ್‌ ನಿರ್ಮಿಸಿ ಸೋಂಕನ್ನು ದೂರವಿಡಲು ಅಲ್ಲಿನ ನಿವಾಸಿಗಳು ಮುಂದಾಗಿದ್ದಾರೆ. ಮ್ಯಾನ್ಮಾರ್​ನಲ್ಲಿ […]

ಮ್ಯಾನ್ಮಾರ್​ಗೆ ಅಪ್ಪಳಿಸಿದ ಕೊರೊನಾ 2ನೇ ಅಲೆ.. ಸೋಂಕು ನಿಯಂತ್ರಣಕ್ಕೆ ತಾವೇ ಮುಂದಾದ ಸ್ಥಳೀಯರು
Follow us on

ವಿಶ್ವದೆಲ್ಲೆಡೆ ಕೊರೊನಾ ಮಹಾಮಾರಿ ತನ್ನ ಕರಿಛಾಯೆಯನ್ನು ಬೀರಿದೆ. ಕೊರೊನಾ ರೌದ್ರನರ್ತನಕ್ಕೆ ತತ್ತರಿಸಿ ಹೋಗಿರುವ ಮ್ಯಾನ್ಮಾರ್‌ ಇದೀಗ ಅದರ ಹರಡುವಿಕೆಯನ್ನು ತಡೆಯಲು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಮ್ಯಾನ್ಮಾರ್‌ನಲ್ಲಿ ಕೆಲ ನಿವಾಸಿಗಳು ತಮ್ಮ ನೆರೆಹೊರೆಯ ಸುತ್ತಲೂ ಮರದ ತುಂಡುಗಳನ್ನು ಮತ್ತು ಕಬ್ಬಿಣದ ಸಲಾಕೆಗಳನ್ನು ಬಳಸಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದಾರೆ.

ದೇಶಕ್ಕೆ ಕೊರೊನಾ ಮಹಾಮಾರಿಯ ಎರಡನೇ ಅಲೆ ಅಪ್ಪಳಿಸಿದ್ದು ಸೋಂಕಿತರ ಸಂಖ್ಯೆ ದಿನಿದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ, ಈ ರೀತಿ ಬ್ಯಾರಿಕೇಡ್‌ ನಿರ್ಮಿಸಿ ಸೋಂಕನ್ನು ದೂರವಿಡಲು ಅಲ್ಲಿನ ನಿವಾಸಿಗಳು ಮುಂದಾಗಿದ್ದಾರೆ.

ಮ್ಯಾನ್ಮಾರ್​ನಲ್ಲಿ 2,625 ಕೊರೊನಾ ಪ್ರಕರಣಗಳು ದಾಖಲಾಗಿವೆ. 15 ಸಾವು ಸಂಭವಿಸಿರುವುದರ ಬಗ್ಗೆ ಸಹ ವರದಿಯಾಗಿದೆ. ಆಗಸ್ಟ್ ಮಧ್ಯಭಾಗದಿಂದ ಸೋಂಕಿನ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ದೇಶದ ಪಶ್ಚಿಮ ರಾಜ್ಯವಾದ ರಖೈನ್‌ನಲ್ಲಿ ವಾರಗಳ ನಂತರ ಸೋಂಕು ಮತ್ತೆ ಕಾಣಿಸಿಕೊಂಡಿದೆ.

ಇತ್ತೀಚೆಗೆ ದಾಖಲಾಗುತ್ತಿರುವ ಅನೇಕ ಪ್ರಕರಣಗಳು ದೇಶದ ವಾಣಿಜ್ಯ ರಾಜಧಾನಿ ಯಾಂಗೊನ್‌ನಲ್ಲೇ ಕಂಡು ಬರುತ್ತಿವೆ.  ಹಾಗಾಗಿ, ಜನರು ತಮ್ಮ ಜಿಲ್ಲೆಗಳಿಗೆ ಮುಕ್ತವಾಗಿ ಓಡಾಡುವುದನ್ನು ತಡೆಯಲು ಸ್ಥಳೀಯರು ತಾತ್ಕಾಲಿಕ ರಸ್ತೆತಡೆಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ.