Video: ಮೊಟ್ಟೆ ಗಾತ್ರದ 102 ಕ್ಯಾರಟ್​ ವಜ್ರ ಹರಾಜಿಗೆ! ಅಂದಾಜು ಬೆಲೆ ಎಷ್ಟು?

Video: ಮೊಟ್ಟೆ ಗಾತ್ರದ 102 ಕ್ಯಾರಟ್​ ವಜ್ರ ಹರಾಜಿಗೆ! ಅಂದಾಜು ಬೆಲೆ ಎಷ್ಟು?

ದೂರದ ಕೆನಡಾ ದೇಶದ ಆಂಟೆರಿಯೋ ಪ್ರಾಂತ್ಯದಲ್ಲಿ 2018ರಲ್ಲಿ ದೊರೆತಿದ್ದ ಒಂದು ವಜ್ರ ಇದೀಗ ಹರಾಜಿಗೆ ಬಂದಿದೆ. ಸರಿಸುಮಾರು 271 ಕ್ಯಾರಟ್​ನ ಗಡುಸಾದ ವಜ್ರವನ್ನು ಕಡೆದು 102 ಕ್ಯಾರಟ್​ನ ಹರಳಾಗಿ ಪರಿವರ್ತಿಸಲಾಗಿದೆ. ಈ ವಜ್ರವು ಒಂದು ಮೊಟ್ಟೆಯ ಗಾತ್ರದಷ್ಟು ಇದೆ.

ಈ ವಜ್ರವನ್ನು ವಿಶ್ವದ ಪ್ರತಿಷ್ಠಿತ ಹರಾಜು ಸಂಸ್ಥೆಗಳಲ್ಲಿ ಒಂದಾದ ಸೋಥೆಬೀಸ್​ನಲ್ಲಿ ಮುಂದಿನ ತಿಂಗಳು ಹರಾಜು ಮಾಡಲಾಗುವುದು ಎಂದು ತಿಳಿದುಬಂದಿದೆ. ಅಂದ ಹಾಗೆ, ಹರಾಜು ಪ್ರಕ್ರಿಯೆಯಲ್ಲಿ ಈ ವಜ್ರದ ಹರಳು ಏನಿಲ್ಲಾ ಅಂದ್ರೂ 220 ಕೋಟಿ ರೂಪಾಯಿಗೆ ಮಾರಾಟವಾಗುವ ಸಂಭವವಿದೆ.

Click on your DTH Provider to Add TV9 Kannada