ಕಾರಕಸ್: ದೀರ್ಘಕಾಲದ ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್-19ರ ಪರಿಣಾಮಗಳಿಂದ ಬಳಲುತ್ತಿರುವ ವೆನುಜುವೆಲಾ ದೇಶಕ್ಕೆ ಅದೃಷ್ಟ ಒಲಿದಿದೆ. ಸಮುದ್ರ ತೀರದಲ್ಲಿ ಮೀನುಗಳನ್ನು ಅರಸಿ ಹೋದವರಿಗೆ ಸಿಕ್ಕಿದ್ದು ನಿಗೂಢ ಚಿನ್ನ.
25ರ ಹರೆಯದ ಯೋಹನ್ ಲಾರೆಸ್ ಸೆಪ್ಟೆಂಬರ್ನಲ್ಲಿ ಗುವಕಾದ ಕಡಲ ತೀರದಲ್ಲಿ ಮೀನು ಹಿಡಿಯಲು ಹೋದಾಗ ಏನೋ ಹೊಳೆಯುವ ಹಾಗೆ ಕಂಡಿದೆ. ಏನಿರಬಹುದು ಎಂಬ ಕುತೂಹಲದಿಂದ ಆತ ಹತ್ತಿರ ಹೋದಾಗ ಅವನ ಕಣ್ಣಿಗೆ ಚಿನ್ನದ ಪದಕ ಮತ್ತು ವರ್ಜಿನ್ ಮೇರಿಯ ಚಿತ್ರಗಳು ಕಂಡಿದೆ.
ಈ ಆವಿಷ್ಕಾರದ ಬಗ್ಗೆ ಮೊದಲು ತನ್ನ ಮಾವನಲ್ಲಿ ಲಾರೆಸ್ ಹೇಳಿಕೊಂಡಿದ್ದು. ಆ ಮೂಲಕ ಅಲ್ಲಿನ ಸುಮಾರು 2000 ಗ್ರಾಮಸ್ಥರಿಗೆ ಈ ವಿಷಯ ತಲುಪಿದೆ. ವಿಷಯ ತಿಳಿದ ದಿನದಿಂದ ಜನರು ನಿರಂತರವಾಗಿ ನಿಧಿಯ ಹುಡುಕಾಟದಲ್ಲಿದ್ದು, ಚಿನ್ನದ ಉಂಗುರಗಳನ್ನು ಹುಡುಕಿ ತೆಗೆಯುತ್ತಿದ್ದಾರೆ.
ಈ ಚಿನ್ನವನ್ನು ಗ್ರಾಮಸ್ಥರು ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಲು ಬಳಸುತ್ತಿದ್ದಾರೆ. ಸಿಕ್ಕ ಚಿನ್ನದ ತುಣುಕುಗಳನ್ನು 1500 ಡಾಲರ್ಗಳಿಗೆ ಮಾರಾಟ ಮಾಡಿ ಆಹಾರ ಖರೀದಿಸುತ್ತಿದ್ದಾರೆ.
ಈ ಚಿನ್ನ ಎಲ್ಲಿಂದ ಬರುತ್ತಿದೆ ಎಂಬ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಕಡಲುಗಳ್ಳರ ಮುಳುಗಿದ ಹಡಗುಗಳಿಂದ ಈ ರೀತಿಯ ಚಿನ್ನಗಳು ಸಿಗುತ್ತಲಿದೆ ಎಂದು ಕೆಲವರು ಊಹಿಸಿದ್ದಾರೆ. ಆದರೆ ತಜ್ಞರು ಮಾತ್ರ, ಈ ಆಭರಣಗಳು ಅಷ್ಟು ಹಳೆಯವಲ್ಲ. ಯೂರೋಪ್ ಮೂಲದ ಈ ಚಿನ್ನ ಈಚಿನ ದಿನಗಳದ್ದು ಎಂದು ಹೇಳಿದ್ದಾರೆ.
ಮಣ್ಣಿನಲ್ಲಿ ಹೂತು ಹೋಗಿದ್ದ ಮಡಿಕೆಯಲ್ಲಿತ್ತು ಗತಕಾಲದ ನೂರಾರು ಚಿನ್ನದ ನಾಣ್ಯಗಳು