Modi UAE Visit: ಅಬುಧಾಬಿಗೆ ಪ್ರಧಾನಿ ಮೋದಿ ಭೇಟಿ, ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕಂಗೊಳಿಸಿದ ಬುರ್ಜ್​ ಖಲೀಫಾ

|

Updated on: Feb 14, 2024 | 9:43 AM

ಅಬುಧಾಬಿಯಲ್ಲಿ ಇಂದು ನಡೆಯಲಿರುವ ವಿಶ್ವ ಸರ್ಕಾರಿ ಶೃಂಗಸಭೆಗೂ ಮುನ್ನ ಬುರ್ಜ್​ ಖಲೀಫಾ ತ್ರಿವರ್ಣಗಳಿಂದ ಕಂಗೊಳಿದ್ದು ಭಾರತಕ್ಕೆ ಗೌರವ ಸೂಚಿಸಿದೆ. ಯುಎಇ ಕ್ರೌನ್ ಪ್ರಿನ್ಸ್​ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮುಕ್ತೌಮ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ದುಬೈನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಗೌರವ ಅಥಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

Modi UAE Visit: ಅಬುಧಾಬಿಗೆ ಪ್ರಧಾನಿ ಮೋದಿ ಭೇಟಿ, ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕಂಗೊಳಿಸಿದ ಬುರ್ಜ್​ ಖಲೀಫಾ
ಬುರ್ಜ್​ ಖಲೀಫಾ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi) ಅಬುಧಾಬಿ( Abu Dhabi) ಪ್ರವಾಸದಲ್ಲಿದ್ದಾರೆ.  ಮೋದಿ ಭಾಷಣಕ್ಕೂ ಮುನ್ನ ಬುರ್ಜ್​ ಖಲೀಫಾ ತ್ರಿವರ್ಣಗಳಿಂದ ಕಂಗೊಳಿಸಿದೆ. ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಪ್ರಧಾನಿ ಮೋದಿಯವರಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಬಲವಾದ ಬಾಂಧವ್ಯ ಅಂತಾರಾಷ್ಟ್ರೀಯ ಸಹಕಾರಕ್ಕೆ ಮಾದರಿಯಾಗಿದೆ.

ಯುಎಇ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಆಹ್ವಾನದ ಮೇರೆಗೆ, ಪ್ರಧಾನಿ ಮೋದಿ ಅವರು ಗೌರವ ಅತಿಥಿಯಾಗಿ ದುಬೈನಲ್ಲಿ ನಡೆಯಲಿರುವ ವಿಶ್ವ ಸರ್ಕಾರಿ ಶೃಂಗಸಭೆ 2024 ರಲ್ಲಿ ಭಾಗವಹಿಸಲಿದ್ದಾರೆ ಮತ್ತು ಶೃಂಗಸಭೆಯಲ್ಲಿ ವಿಶೇಷ ಭಾಷಣವನ್ನು ನೀಡಲಿದ್ದಾರೆ. ಈ ಶೃಂಗಸಭೆಗೂ ಮುನ್ನ ದುಬೈನಲ್ಲಿರುವ ಬುರ್ಜ್ ಖಲೀಫಾವನ್ನು ಸುಂದರವಾಗಿ ಅಲಂಕರಿಸಲಾಗಿದೆ.

ಮೊದಲ ದಿನ, ಪ್ರಧಾನಿ ಮೋದಿ ಅವರು ಜಾಯೆದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಅಹ್ಲಾನ್ ಮೋದಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇಂದು (ಫೆಬ್ರವರಿ 14) ಅಬುಧಾಬಿಯಲ್ಲಿ ನಿರ್ಮಿಸಲಾದ BAPS ದೇವಾಲಯವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಬುರ್ಜ್ ಖಲೀಫಾ ಮೇಲ್ ಗೆಸ್ಟ್​ ಆಫ್ ಆನರ್-ರಿಪಬ್ಲಿಕ್ ಆಫ್ ಇಂಡಿಯಾ ಎಂದು ಬರೆಯಲಾಗಿತ್ತು.

ಮತ್ತಷ್ಟು ಓದಿ: Abu Dhabi: ಇಂದು ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ಪ್ರವಾಸದ ವೇಳೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ನಿಮ್ಮ ಬೆಂಬಲವಿಲ್ಲದೇ ಇದ್ದಿದ್ದರೆ ಇಲ್ಲಿ ದೇವಾಲಯದ ನಿರ್ಮಾಣವು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಇಲ್ಲಿಗೆ ಬಂದಾಗಲೆಲ್ಲ ನಾನು ನನ್ನ ಕುಟುಂಬವನ್ನು ಭೇಟಿಯಾಗಲು ಬಂದಿದ್ದೇನೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ ಎಂದಿದ್ದಾರೆ.

ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಅಬುಧಾಬಿ(Abu Dhabi)ಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಮೊದಲ ಹಿಂದೂ ದೇವಾಲಯ(Hindu Temple)ದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ರಾಜಸ್ಥಾನದ ಗುಲಾಬಿ ಮರಳುಗಲ್ಲಿನಿಂದ ನಿರ್ಮಿಸಲಾದ ಅಬುಧಾಬಿಯ ಮೊದಲ ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಲಿದ್ದಾರೆ. ಬೋಚಸನ್​ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ(BAPS) ಸ್ವಾಮಿನಾರಾಯಣ ದೇವಾಲಯವನ್ನು ನಿರ್ಮಿಸಿದೆ.

ಈ ದೇವಾಲಯವು ತನ್ನ ವೈಭವದಿಂದ ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುತ್ತಿದೆ. 27 ಎಕರೆ ಪ್ರದೇಶದಲ್ಲಿ 108 ಅಡಿ ಎತ್ತರದ ಈ ದೇವಾಲಯವನ್ನು ವಾಸ್ತುಶಿಲ್ಪದ ಅದ್ಭುತವೆಂದು ಪರಿಗಣಿಸಲಾಗಿದೆ. ದೇವಾಲಯದ ಆಡಳಿತದ ಪ್ರಕಾರ, ಗಂಗಾ ಮತ್ತು ಯಮುನಾ ನದಿಗಳ ಪವಿತ್ರ ನೀರು ದೇವಾಲಯದ ಎರಡೂ ಬದಿಗಳಲ್ಲಿ ಹರಿಯುತ್ತದೆ, ಇದನ್ನು ಭಾರತದಿಂದ ಬೃಹತ್ ಪಾತ್ರೆಗಳಲ್ಲಿ ತರಲಾಯಿತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ