Abu Dhabi: ಇಂದು ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಬುಧಾಬಿಯಲ್ಲಿ BAPS ಸ್ವಾಮಿನಾರಾಯಣ ಮಂದಿರವನ್ನು ಉದ್ಘಾಟಿಸಲಿದ್ದಾರೆ. BAPS ವೇದಗಳಲ್ಲಿ ಬೇರೂರಿರುವ ಸಾಮಾಜಿಕ-ಆಧ್ಯಾತ್ಮಿಕ ಹಿಂದೂ ನಂಬಿಕೆಯನ್ನು ಪ್ರತಿನಿಧಿಸುತ್ತದೆ.

Abu Dhabi: ಇಂದು ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಸ್ವಾಮಿನಾರಾಯಣ ದೇವಸ್ಥಾನImage Credit source: Mint
Follow us
|

Updated on: Feb 14, 2024 | 9:00 AM

ಅಬುಧಾಬಿ(Abu Dhabi)ಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಮೊದಲ ಹಿಂದೂ ದೇವಾಲಯ(Hindu Temple)ದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ರಾಜಸ್ಥಾನದ ಗುಲಾಬಿ ಮರಳುಗಲ್ಲಿನಿಂದ ನಿರ್ಮಿಸಲಾದ ಅಬುಧಾಬಿಯ ಮೊದಲ ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಲಿದ್ದಾರೆ. ಬೋಚಸನ್​ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ(BAPS) ಸ್ವಾಮಿನಾರಾಯಣ ದೇವಾಲಯವನ್ನು ನಿರ್ಮಿಸಿದೆ.

ಈ ದೇವಾಲಯವು ತನ್ನ ವೈಭವದಿಂದ ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುತ್ತಿದೆ. 27 ಎಕರೆ ಪ್ರದೇಶದಲ್ಲಿ 108 ಅಡಿ ಎತ್ತರದ ಈ ದೇವಾಲಯವನ್ನು ವಾಸ್ತುಶಿಲ್ಪದ ಅದ್ಭುತವೆಂದು ಪರಿಗಣಿಸಲಾಗಿದೆ. ದೇವಾಲಯದ ಆಡಳಿತದ ಪ್ರಕಾರ, ಗಂಗಾ ಮತ್ತು ಯಮುನಾ ನದಿಗಳ ಪವಿತ್ರ ನೀರು ದೇವಾಲಯದ ಎರಡೂ ಬದಿಗಳಲ್ಲಿ ಹರಿಯುತ್ತದೆ, ಇದನ್ನು ಭಾರತದಿಂದ ಬೃಹತ್ ಪಾತ್ರೆಗಳಲ್ಲಿ ತರಲಾಯಿತು.

ದೇವಾಲಯದ ವಿಶೇಷತೆ ಏನು? ದೇವಸ್ಥಾನದ ಮುಖ್ಯಸ್ಥ ಸ್ವಾಮಿ ಬ್ರಹ್ಮವಿಹಾರಿದಾಸ್ ಮಾತನಾಡಿ, ಈ ದೇವಾಲಯದ ಮೂಲೆ ಮೂಲೆಯಲ್ಲಿ ಭಾರತದ ವೈಭವವಿದೆ. ಇಲ್ಲಿ ವಾರಾಣಸಿಯನ್ನು ಕೂಡ ನೋಡಬಹುದು. ಅಬುಧಾಬಿಯಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯವು 108 ಅಡಿಗಳು. ಇದರಲ್ಲಿ 40,000 ಘನ ಅಡಿ ಅಮೃತಶಿಲೆ, 1,80,000 ಘನ ಅಡಿ ಮರಳುಗಲ್ಲು, 18,00,000 ಇಟ್ಟಿಗೆಗಳನ್ನು ಬಳಸಲಾಗಿದೆ. ದೇವಸ್ಥಾನದಲ್ಲಿ 300 ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ.

ಮತ್ತಷ್ಟು ಓದಿ: ಅಬುಧಾಬಿಯಲ್ಲಿ ಮೋದಿ ಕನ್ನಡ ಮಾತು: ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ತರುವುದೇ ನನ್ನ ಗ್ಯಾರಂಟಿ ಎಂದ ನಮೋ

ಪ್ರಧಾನಿ ಮೋದಿ ಮಾತು ನಾನು ಇಲ್ಲಿಗೆ 7ನೇ ಬಾರಿಗೆ ಭೇಟಿ ನೀಡುತ್ತಿದ್ದೇನೆ, ಯಾವಾಗ ಯುಎಇಗೆ ಬಂದರೂ ನನ್ನ ಕುಟುಂಬದವರೊಂದಿಗೆ ಇದ್ದೇನೆ ಎಂದು ಅನಿಸುತ್ತದೆ. ಒಂದು ಬಾರಿ ಮನವಿ ಮಾಡಿದ್ದಷ್ಟೇ 27 ಎಕರೆ ಪ್ರದೇಶವನ್ನು ದೇವಸ್ಥಾನಕ್ಕಾಗಿ ಬಿಟ್ಟುಕೊಟ್ಟರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಯುಎಇಯಲ್ಲಿ ಹಿಂದೂ ದೇವಾಲಯವನ್ನು ಎಲ್ಲಿ ನಿರ್ಮಿಸಲಾಗಿದೆ? ಯುಎಇಯ ರಾಜಧಾನಿ ಅಬುಧಾಬಿಯಲ್ಲಿರುವ ‘ಅಲ್ ವಕ್ಬಾ’ ಎಂಬ ಸ್ಥಳದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ಧಾರ್ಮಿಕ ಸ್ಥಳವು 20,000 ಚದರ ಮೀಟರ್ ಪ್ರದೇಶದಲ್ಲಿ ಹರಡಿದೆ. ಹೆದ್ದಾರಿಯ ಪಕ್ಕದಲ್ಲಿರುವ ಅಲ್ ವಕ್ಬಾ ಎಂಬ ಸ್ಥಳವು ಅಬುಧಾಬಿಯಿಂದ ಸುಮಾರು 30 ನಿಮಿಷಗಳ ದೂರದಲ್ಲಿದೆ.

ಇಲ್ಲಿನ ಪ್ರಾರ್ಥನಾ ಮಂದಿರದಲ್ಲಿ 3 ಸಾವಿರ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿದೆ, ಒಂದು ಸಮುದಾಯ ಕೇಂದ್ರ, ಒಂದು ಗ್ರಂಥಾಲಯ ಮತ್ತು ಮಕ್ಕಳ ಉದ್ಯಾನ ಒಳಗೊಂಡಿದೆ. ದೇವಾಲಯದ ಮುಂಭಾಗ ಅಮೃತಶಿಲೆಯ ಕೆತ್ತನೆಯನ್ನು ಹೊಂದಿದ್ದು, ರಾಜಸ್ಥಾನ ಮತ್ತು ಗುಜರಾತ್​ನ ನುರಿತ ಕುಶಲಕರ್ಮಿಗಳಿಂದ ಕೆತ್ತನೆ ಕಾರ್ಯ ನಡೆದಿದ್ದು ಇದಕ್ಕಾಗಿ 25,000 ಕಲ್ಲುಗಳನ್ನು ಬಳಸಲಾಗಿದೆ. ಅಯೋಧ್ಯೆಯ ರಾಮ ಮಂದಿರ ರೀತಿಯಲ್ಲೇ ಇಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ