ವಾಷಿಂಗ್ಟನ್ ಬಳಿ ಸೇನಾ ಹೆಲಿಕಾಪ್ಟರ್‌ಗೆ ಅಮೆರಿಕದ ವಿಮಾನ ಡಿಕ್ಕಿ; ಎಲ್ಲ 67 ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ
ವಾಷಿಂಗ್ಟನ್ ಬಳಿ ಅಮೆರಿಕನ್ ಏರ್‌ಲೈನ್ಸ್ ಜೆಟ್ ಮತ್ತು ಅಮೆರಿಕದ ಸೇನಾ ಹೆಲಿಕಾಪ್ಟರ್ ನಡುವೆ ಆಕಾಶದಲ್ಲಿ ಡಿಕ್ಕಿ ಸಂಭವಿಸಿ ಎರಡೂ ವಿಮಾನಗಳಲ್ಲಿದ್ದ 67 ಮಂದಿ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚಾಗಿದೆ. ನದಿಯಲ್ಲಿ ಬಿದ್ದ ಹೆಲಿಕಾಪ್ಟರ್ ಸಂಪೂರ್ಣ ಛಿದ್ರವಾಗಿದೆ. ಇಲ್ಲಿಯವರೆಗೆ 28 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ವಾಷಿಂಗ್ಟನ್ ಡಿಸಿಯ ಹೊರಗಿನ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕನ್ ಏರ್‌ಲೈನ್ಸ್ ವಿಮಾನ ಮತ್ತು ಯುಎಸ್ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಮಿಡ್ಏರ್ ಅಪಘಾತದಲ್ಲಿ ಎಲ್ಲಾ 67 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ಡಿಸಿ ಬಳಿ ಡಿಕ್ಕಿ ಹೊಡೆದ ಅಮೆರಿಕನ್ ಏರ್‌ಲೈನ್ಸ್ ವಿಮಾನ ಮತ್ತು ಸೇನಾ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾ 67 ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹಿರಿಯ ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಡಿಕ್ಕಿಯ ನಂತರ ಎರಡೂ ವಿಮಾನಗಳು ಪತನವಾದ ಪೊಟೊಮ್ಯಾಕ್ ನದಿಯಿಂದ ಇಲ್ಲಿಯವರೆಗೆ ಕನಿಷ್ಠ 28 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಭೀಕರವಾದ ಘಟನೆಗಳಲ್ಲಿ ಇದೂ ಒಂದು ಎನ್ನಲಾಗಿದೆ. ಈ ಘಟನೆಯಲ್ಲಿ ಕಮರ್ಷಿಯಲ್ ಜೆಟ್ ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸಿದಾಗ, ಅಮೆರಿಕ ಸೇನೆಯ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಚಾಪರ್‌ನಲ್ಲಿ ಮೂವರು ಸೇನಾ ಸಿಬ್ಬಂದಿ ಇದ್ದರು.
🚨 #BREAKING: A plane has crashed into a helicopter while landing at Reagan National Airport near Washington, DC
Fatalities have been reported, a MASSIVE search & rescue operation is happening in the Potomac River
Witnesses reported seeing a “massive crash” and hearing a loud… pic.twitter.com/GtSiWjUWn0
— Nick Sortor (@nicksortor) January 30, 2025
“ನಾವು ಈಗ ರಕ್ಷಣಾ ಕಾರ್ಯಾಚರಣೆಯಿಂದ ಚೇತರಿಕೆ ಕಾರ್ಯಾಚರಣೆಗೆ ಬದಲಾಯಿಸುವ ಹಂತದಲ್ಲಿದ್ದೇವೆ. ಈ ಹಂತದಲ್ಲಿ ಈ ಅಪಘಾತದಿಂದ ಯಾರೂ ಬದುಕುಳಿದ ಸಾಧ್ಯತೆಯಿಲ್ಲ. ವಿಮಾನ ಸಂಪೂರ್ಣ ಛಿದ್ರವಾಗಿ ನದಿಯೊಳಗೆ ಬಿದ್ದಿದೆ” ಎಂದು ವಾಷಿಂಗ್ಟನ್‌ನ ಅಗ್ನಿಶಾಮಕ ಮುಖ್ಯಸ್ಥ ಜಾನ್ ಡೊನ್ನೆಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Video: ವೈಟ್ಹೌಸ್ ಬಳಿ ಇರುವ ನದಿಗೆ ಅಪ್ಪಳಿಸಿದ 60 ಪ್ರಯಾಣಿಕರಿದ್ದ ವಿಮಾನ
ಪ್ರಯಾಣಿಕರಿದ್ದ ವಿಮಾನ ನದಿ ನೀರಿನಲ್ಲಿ ಮೂರು ಕಡೆಗಳಲ್ಲಿ ತಲೆಕೆಳಗಾಗಿ ಪತ್ತೆಯಾಗಿದೆ. ಹೆಲಿಕಾಪ್ಟರ್‌ನ ಅವಶೇಷಗಳು ಸಹ ಪತ್ತೆಯಾಗಿವೆ. ಇನ್ನೂ ಶವಗಳಿಗಾಗಿ ಹುಡುಕಾಟ ನಡೆದಿದೆ.
A Blackhawk flying over the Potomac River casually running into American Airlines flight 5342 at the Reagan National Airport with an inbound flight from Wichita.American Airlines plane vs. Blackhawk crash in DC #planecrash #potomacriver #WashingtonDC #flightcrash #Washington pic.twitter.com/oRmTL7Ri70
— Veeresh Kumar (@VeereshKum9526) January 30, 2025
ಡಿಕ್ಕಿಯ ಹಿಂದಿನ ಕಾರಣವನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ಮತ್ತು ಫೆಡರಲ್ ವಿಮಾನಯಾನ ಆಡಳಿತ (ಎಫ್‌ಎಎ)ದ ತನಿಖಾಧಿಕಾರಿಗಳು ಅಪಘಾತದ ಸ್ಥಳದಲ್ಲಿದ್ದಾರೆ.
ಇದನ್ನೂ ಓದಿ: ಕುಂಭಮೇಳ: ಪ್ರಯಾಗ್ರಾಜ್ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ಕರ್ನಾಟಕದ ಯುವಕರು ಅಪಘಾತದಲ್ಲಿ ಸಾವು
ಕಾನ್ಸಾಸ್‌ನ ವಿಚಿಟಾದಿಂದ ಹೊರಟ ಪ್ರಯಾಣಿಕರ ವಿಮಾನ ಮತ್ತು ತರಬೇತಿಯಲ್ಲಿ ತೊಡಗಿದ್ದ ಮಿಲಿಟರಿ ಹೆಲಿಕಾಪ್ಟರ್ ನಿನ್ನೆ ರಾತ್ರಿ 9 ಗಂಟೆಯ ನಂತರ ಡಿಕ್ಕಿ ಸಂಭವಿಸಿದೆ ಎಂದು ಫೆಡರಲ್ ವಿಮಾನಯಾನ ಆಡಳಿತ ತಿಳಿಸಿದೆ. ಶ್ವೇತಭವನ ಮತ್ತು ಕ್ಯಾಪಿಟಲ್‌ನಿಂದ ಕೇವಲ 3 ಮೈಲುಗಳಷ್ಟು ದೂರದಲ್ಲಿ ವಿಮಾನ ನಿಲ್ದಾಣದ ರನ್‌ವೇಗೆ ಜೆಟ್ ಸಮೀಪಿಸುವಾಗ ಅಪಘಾತ ಸಂಭವಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ