ಇಸ್ರೇಲಿ ದಾಳಿ ವೇಳೆ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ ಸಾವು, ಒಪ್ಪಿಕೊಂಡ ಹಮಾಸ್
ಹಮಾಸ್ ತನ್ನ ಸೇನಾ ಕಮಾಂಡರ್ ಮೊಹಮ್ಮದ್ ಡೀಫ್ ಸಾವನ್ನು ದೃಢಪಡಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಇಸ್ರೇಲ್ ಮೊಹಮ್ಮದ್ ಡೀಫ್‌ನನ್ನು ಕೊಂದಿರುವುದಾಗಿ ಹೇಳಿಕೊಂಡಿತ್ತು, ಆದರೆ ಹಮಾಸ್ ಅದನ್ನು ಇನ್ನೂ ಖಚಿತಪಡಿಸಿರಲಿಲ್ಲ. ಹಮಾಸ್ ಡೆಪ್ಯೂಟಿ ಮಿಲಿಟರಿ ಕಮಾಂಡರ್ ಮರ್ವಾನ್ ಇಸ್ಸಾ ಅವರ ಮರಣವನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ಘೋಷಿಸಲಾಗಿತ್ತು.

ಇತ್ತೀಚೆಗೆ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ ಸಾವನ್ನಪ್ಪಿರುವುದನ್ನು ಹಮಾಸ್ ಒಪ್ಪಿಕೊಂಡಿದೆ. ಡೀಫ್ ಸಾವಿನ ಬಗ್ಗೆ ಇಸ್ರೇಲಿ ಮಿಲಿಟರಿ ಆಗಸ್ಟ್‌ನಲ್ಲಿ ಎಕ್ಸ್ನಲ್ಲಿ ಪೋಸ್ಟ್ ಮಾಡಿತ್ತು. ಜುಲೈ 13ರಂದು ಐಡಿಎಫ್ ಯುದ್ಧ ವಿಮಾನಗಳು ಖಾನ್ ಯುನಿಸ್ ಪ್ರದೇಶದ ಮೇಲೆ ದಾಳಿ ಮಾಡಿದೆ.
ದಾಳಿಯಲ್ಲಿ ಮೊಹಮ್ಮದ್ ಡೀಫ್ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿತ್ತು. ಡೀಫ್ ಚಿಕ್ಕವಯಸ್ಸಿನಲ್ಲಿಯೇ ಹಮಾಸ್ಗೆ ಸೇರಿದ್ದ.2002ರಲ್ಲಿ ಹಮಾಸ್‌ನ ಮಿಲಿಟರಿ ವಿಭಾಗವಾದ ಕಸ್ಸಾಮ್ ಬ್ರಿಗೇಡ್ಸ್‌ನ ನಾಯಕನಾಗಿದ್ದ. 1996 ರಲ್ಲಿ ಸರಣಿ ಆತ್ಮಹತ್ಯಾ ಬಾಂಬ್ ದಾಳಿ ಸೇರಿದಂತೆ ಇಸ್ರೇಲ್ ಮೇಲೆ ಹಲವಾರು ದಾಳಿಗಳನ್ನು ನಡೆಸಿದ್ದ.
ಜುಲೈನಲ್ಲಿ, ಇಸ್ರೇಲಿ ಪಡೆಗಳು ಡೀಫ್ ಅನ್ನು ಕೊಲ್ಲುವ ಪ್ರಯತ್ನದಲ್ಲಿ ಗಾಜಾದ ಜನನಿಬಿಡ ಕರಾವಳಿ ಪ್ರದೇಶದ ಮೇಲೆ ಭಾರಿ ಬಾಂಬ್ ದಾಳಿ ನಡೆಸಿತು. ದಾಳಿಯಲ್ಲಿ ಗಾಜಾದ ಅನೇಕ ಜನರು ಸತ್ತರು. ದಾಳಿಯಲ್ಲಿ ಡೀಫ್‌ನನ್ನು ಕೊಂದಿರುವುದಾಗಿ ಇಸ್ರೇಲಿ ಮಿಲಿಟರಿ ನಂತರ ಹೇಳಿತ್ತು. ಹಮಾಸ್ ಅವರ ಸಾವನ್ನು ದೃಢಪಡಿಸಲಿಲ್ಲ ಅಥವಾ ನಿರಾಕರಿಸಲಿಲ್ಲ. ಇಸ್ರೇಲಿ ಗುಪ್ತಚರ ಪ್ರಕಾರ, ಅವರು ದಶಕಗಳಿಂದ ಇಸ್ರೇಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ.
ಮತ್ತಷ್ಟು ಓದಿ: Mohammed Deif Death: ಇಸ್ರೇಲ್ ಮೇಲಿನ ದಾಳಿಯ ಮಾಸ್ಟರ್ಮೈಂಡ್ ಮೊಹಮ್ಮದ್ ಡೀಫ್ ಹತ್ಯೆ
ಇದಕ್ಕೂ ಮುನ್ನ ಆತನ ಮೇಲೆ ಎಂಟು ಮಾರಣಾಂತಿಕ ದಾಳಿಗಳು ನಡೆದಿದ್ದವು. 2014 ರಲ್ಲಿ, ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಅವರ ಒಬ್ಬ ಹೆಂಡತಿ ಮತ್ತು ಅವನ ಪುಟ್ಟ ಮಗ ಕೊಲ್ಲಲ್ಪಟ್ಟಿದ್ದರು.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯ ಮಾಸ್ಟರ್ ಮೈಂಡ್ ಮೊಹಮ್ಮದ್ ಡೀಫ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇಸ್ರೇಲಿ ಸೇನೆಯ ದಾಳಿಯಿಂದ ತಪ್ಪಿಸಿಕೊಂಡು ಮೊಹಮ್ಮದ್ ಡೀಫ್ ಇದುವರೆಗೆ 7 ಬಾರಿ ಸಾವನ್ನು ಸೋಲಿಸಿದ್ದರು.
ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯಾ ಹತ್ಯೆಯ ನಂತರ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಬೆದರಿಕೆ ಹಾಕಿದೆ. ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಇರಾನ್‌ನ ಸುಪ್ರೀಂ ನಾಯಕ ಅಲಿ ಖಮೇನಿ ನೀಡಿದ ಹೇಳಿಕೆಯ ನಂತರ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಐಡಿಎಫ್ ತನ್ನನ್ನು ತಾನು ಸಿದ್ಧಪಡಿಸಿಕೊಂಡಿದೆ ಎಂದು ಇಸ್ರೇಲ್ ರಕ್ಷಣಾ ಸಚಿವರ ಕಚೇರಿಯ ಮೂಲಗಳು ತಿಳಿಸಿದ್ದವು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:34 am, Fri, 31 January 25