ಸಾವಿರಾರೂ ರೂ. ಪಾವತಿಸಿ ಐಷಾರಾಮಿ ಹೋಟೆಲ್‌ ರೂಮ್​​​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200ರಕ್ಕೂ ಹೆಚ್ಚು ತಿಗಣೆ ಕಡಿತ

ಆದರೆ ಒಂದೇ ರಾತ್ರಿಯಲ್ಲಿ ಭಯಾನಕ ಅನುಭವವಾಗಿದ್ದು, ದುಡ್ಡಿಗಿಂತಲೂ ಆರೋಗ್ಯ ಮುಖ್ಯ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಅಷ್ಟಕ್ಕೂ ಆ ಮಹಿಳೆಗೆ ಯಾವುದೋ ದೈವ,ಭೂತ ಅಥವಾ ಮನುಷ್ಯರ ಕಾಟವಲ್ಲ, ಇದಕ್ಕಿಂತಲೂ ಮಿಗಿಲಾಗಿ ಒಂದೇ ರಾತ್ರಿಯಲ್ಲಿ 200ರಕ್ಕೂ ಹೆಚ್ಚು ತಿಗಣೆಗಳು ಮಹಿಳೆಯ ರಕ್ತ ಹೀರಿದೆ.

ಸಾವಿರಾರೂ ರೂ. ಪಾವತಿಸಿ ಐಷಾರಾಮಿ ಹೋಟೆಲ್‌ ರೂಮ್​​​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200ರಕ್ಕೂ ಹೆಚ್ಚು ತಿಗಣೆ ಕಡಿತ
Follow us
|

Updated on: Jun 09, 2024 | 4:00 PM

ದೂರ ಪ್ರಯಾಣ ಮಾಡುವಾಗ ಉಳಿದುಕೊಳ್ಳಲು ಒಂದು ಒಳ್ಳೆ ರೂಮ್​​​ ಬೇಕು, ಜಾಗ ಬದಲಾದರೂ ಕೂಡ ನಿದ್ದೆ ಚೆನ್ನಾಗಿ ಬರಬೇಕು ಎಂಬುದು ಪ್ರಯಾಣ ಬೆಳೆಸುವ ಮುನ್ನವೇ ಯೋಚನೆ ಮಾಡುವುದು ಸಹಜ. ಅದರಂತೆಯೇ ಎಂದೆರಡು ದಿನಕ್ಕೆ ಬಾಡಿಗೆ ಜಾಸ್ತಿ ಕೇಳಿದರೂ ಕೂಡ ಯೋಚನೆ ಮಾಡದೇ ಹಣ ಪಾವತಿ ಮಾಡಿ ಬಿಡುತ್ತೇವೆ. ಐಷಾರಾಮಿ ಹೋಟೆಲ್​ ಎಂದರೆ ಸೌಲಭ್ಯಗಳಿಗೆ ಏನೂ ಕೊರತೆ ಇರಲ್ಲ ಬಿಡಿ. ಅಂದರಂತೆಯೇ ಇಲ್ಲೊಬ್ಬರು ಮಹಿಳೆ ಹೋಟೆಲ್‌ ರೂಮ್​​ ಒಂದರಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಲು ಬರೋಬ್ಬರಿ 17000 ರೂ. ಪಾವತಿ ಮಾಡಿದ್ದಾರೆ. ಆದರೆ ಒಂದೇ ರಾತ್ರಿಯಲ್ಲಿ ಭಯಾನಕ ಅನುಭವವಾಗಿದ್ದು, ದುಡ್ಡಿಗಿಂತಲೂ ಆರೋಗ್ಯ ಮುಖ್ಯ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಅಷ್ಟಕ್ಕೂ ಆ ಮಹಿಳೆಗೆ ಯಾವುದೋ ದೈವ,ಭೂತ ಅಥವಾ ಮನುಷ್ಯರ ಕಾಟವಲ್ಲ, ಇದಕ್ಕಿಂತಲೂ ಮಿಗಿಲಾಗಿ ಒಂದೇ ರಾತ್ರಿಯಲ್ಲಿ 200ರಕ್ಕೂ ಹೆಚ್ಚು ತಿಗಣೆಗಳು ಮಹಿಳೆಯ ರಕ್ತ ಹೀರಿದೆ.

ಯುನೈಟೆಡ್ ಕಿಂಗ್‌ಡಂನ ಬ್ಲ್ಯಾಕ್‌ಪೂಲ್‌ನಲ್ಲಿರುವ ಕ್ಯಾಲಿಪ್ಸೊ ಎಂಬ ಹೋಟೆಲ್​​​ನಲ್ಲಿ ಶರೋನ್ ಹಸ್ಲಾಮ್(65) ತನ್ನ ಸ್ನೇಹಿತೆ ಮರಿಯನ್ ಪಿಯರ್ಸನ್ ಅವರ ಬರ್ತ್​ ಡೇ ಪಾರ್ಟಿಯ ಸಲುವಾಗಿ ಹೋಟೆಲ್‌ನಲ್ಲಿ ಕೊಠಡಿಯನ್ನು ಎರಡು ದಿನಕ್ಕೆ 17,000 ರೂ ಕೊಟ್ಟು ಕಾಯ್ದಿರಿಸಿದ್ದರು. ಕೋಣೆಗೆ ಪ್ರವೇಶಿಸಿದಾಗ ಹಾಸಿಗೆಯು ಸ್ವಚ್ಛವಾಗಿತ್ತು ಮತ್ತು ಎಲ್ಲಾ ಸೌಲಭ್ಯಗಳು ಚೆನ್ನಾಗಿಯೇ ಇತ್ತು ಎಂದು ಹಸ್ಲಾಮ್ ಹೇಳಿದ್ದಾರೆ.

ಇದನ್ನೂ ಓದಿ: 5 ಕೋಟಿ ರೂ ಬೆಲೆಯ ವಿಶ್ವದ ಅತ್ಯಂತ ದುಬಾರಿ ಹಾಸಿಗೆ; ಇದರ ವಿಶೇಷತೆ ಏನು ಗೊತ್ತಾ?

ಹಸ್ಲಾಮ್ಗೆ ಪಾರ್ಟಿ ಮಾಡಿ ಸಾಕಷ್ಟು ಸುಸ್ತಾಗಿದ್ದರಿಂದ ಒಳ್ಳೆ ನಿದ್ದೆ ಬಂದಿದೆ. ಆದರೆ ಬೆಳಗ್ಗೆ ಏಳುವ ಹೊತ್ತಿಗೆ ಮೈಯೆಲ್ಲಾ ತುರಿಕೆ ಮತ್ತು ದದ್ದು ಕಾಣಿಸಿಕೊಂಡಿದೆ. ಇದಲ್ಲದೇ ಹಾಸಿಗೆಯ ಮೇಲೆ ಅಲ್ಲಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದೆ. ಆದರೆ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಹಸ್ಲಾಮ್ ಹತ್ತು ನಿಮಿಷ ತೆಗೆದುಕೊಂಡಿದ್ದಾರೆ. ತೆವಳುತ್ತಿರುವ ಜೀವಂತ ತಿಗಣೆಯನ್ನು ಹಾಸಿಗೆ ಮೇಲೆ ನೋಡಿದ್ದಾರೆ. ಬಳಿಕ ಹೋಟೆಲ್​​ ಅವರ ನಿರ್ಲಕ್ಷ್ಯದ ವಿರುದ್ದ ದೂರು ನೀಡಿದ್ದು, ಸಂಪೂರ್ಣ ಹಣವನ್ನು ಹೋಟೆಲ್​​​​​ ಮರುಪಾವತಿ ಮಾಡುವುದರ ಜೊತೆಗೆ 8,787 ರೂ ಹಣವನ್ನು ಪರಿಹಾರದ ರೂಪದಲ್ಲಿ ನೀಡಿದೆ ಎಂದು ವೇಲ್ಸನ್‌ಲೈನ್ ವರದಿಯಿಂದ ತಿಳಿದುಬಂದಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
ದರ್ಶನ್​ ಕೇಸ್: ಮಾಧ್ಯಮದ ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ ಚಿಕ್ಕಣ್ಣ
ದರ್ಶನ್​ ಕೇಸ್: ಮಾಧ್ಯಮದ ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ ಚಿಕ್ಕಣ್ಣ
ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹೆಚ್​ಡಿ ಕುಮಾರಸ್ವಾಮಿ
ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹೆಚ್​ಡಿ ಕುಮಾರಸ್ವಾಮಿ
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ