Viral: ತೂಕ ಇಳಿಸಿಕೊಳ್ಳಿ ಭರ್ಜರಿ ಬೋನಸ್ ಪಡೆಯಿರಿ, ಉದ್ಯೋಗಿಗಳ ಆರೋಗ್ಯಕ್ಕೆ ಹೊಸ ಕ್ರಮ ತಂದ ಟೆಕ್ ಕಂಪೆನಿ

ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು, ಹಾಗೂ ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ  ವಿಶಿಷ್ಟವಾದ ಪ್ರೋತ್ಸಾಹಕ ಕಾರ್ಯಕ್ರಮವನ್ನು ಪರಿಚಯಿಸಿದ್ದು, ಐಟಿ ಕಂಪೆನಿಯೊಂದು ಹೆಚ್ಚುವರಿ ತೂಕ ಕಳೆದುಕೊಳ್ಳುವ ತನ್ನ ಉದ್ಯೋಗಿಗಳಿಗೆ 10,000 ಯುವಾನ್ ಬೋನಸ್ ನೀಡುವುದಾಗಿ ಭರ್ಜರಿ ಆಫರ್ ನೀಡಿದೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗಿದೆ.

Viral: ತೂಕ ಇಳಿಸಿಕೊಳ್ಳಿ ಭರ್ಜರಿ ಬೋನಸ್ ಪಡೆಯಿರಿ, ಉದ್ಯೋಗಿಗಳ ಆರೋಗ್ಯಕ್ಕೆ ಹೊಸ ಕ್ರಮ ತಂದ ಟೆಕ್ ಕಂಪೆನಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 10, 2024 | 1:52 PM

ಇಂದಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡದಿಂದಾಗಿ ಅನೇಕರು ವ್ಯಾಯಾಮ ಇತ್ಯಾದಿ ದೈಹಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹೀಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಿದ್ದರೆ ದೇಹದ ಬೊಜ್ಜು ಹೆಚ್ಚಾಗುವುದರ ಜೊತೆಗೆ ಹಲವಾರು ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಈ ನಿಟ್ಟಿನಲ್ಲಿ ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ವಿಶಿಷ್ಟವಾದ ಪ್ರೋತ್ಸಾಹಕ ಕಾರ್ಯಕ್ರಮವೊಂದನ್ನು ಪರಿಚಯಿಸಿದ್ದು, ಐಟಿ ಕಂಪೆನಿಯೊಂದು ಹೆಚ್ಚುವರಿ ತೂಕ ಕಳೆದುಕೊಳ್ಳುವ ಉದ್ಯೋಗಿಗಳಿಗೆ 10,000 ಯುವಾನ್ ಬೋನಸ್ ನೀಡುವುದಾಗಿ ಭರ್ಜರಿ ಆಫರ್ ನೀಡಿದೆ.

ಚೀನಾದ ಗುವಾಂಗ್‌ಡಾಂಗ್‌ ಪ್ರಾಂತ್ಯದ ಶೆನ್‌ಜೆನ್‌ನಲ್ಲಿರುವ Insta360 ಎಂಬ ಐಟಿ ಕಂಪೆನಿಯು ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ ಈ ಉಪಕ್ರಮವನ್ನು ಪರಿಚಯಿಸಿದೆ. ನಿರ್ದಿಷ್ಟ ತೂಕವನ್ನು ಇಳಿಸಕೊಳ್ಳುವ  ಉದ್ಯೋಗಿಗಳಿಗೆ ವರ್ಷಕ್ಕೆ 10,000 ಯುವಾನ್‌ (1,440ಯುಸ್‌ ಡಾಲರ್)‌ ವರೆಗಿನ ಉದಾರ ಬೋನಸ್‌ ಅನ್ನು ನೀಡುತ್ತಿದೆ. ಇದು ತನ್ನ ಉದ್ಯೋಗಿಗಳ ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಕಳೆದ ವರ್ಷದ ಆರಂಭದಲ್ಲಿ ಈ ಸ್ಮಿಮ್ಮಿಂಗ್‌ ಉಪಕ್ರಮವನ್ನು ಆರಂಭಿಸಿದ್ದು,  ಅಂದಿನಿಂದ ಇಂದಿನವರೆಗೆ 150 ಉದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಟ್ಟು 800 ಕೆ.ಜಿ ತೂಕವನ್ನು ಕಳೆದುಕೊಂಡು ಮತ್ತು ಸುಮಾರು 100,000 ಯು.ಎಸ್‌ ಡಾಲರ್‌ ಬೋನಸ್‌ ಪಡೆದಿದ್ದಾರೆ.

ಇದನ್ನೂ ಓದಿ: ಅರರೇ ಏನಿದು ಆಶ್ಚರ್ಯ…. ಮಳೆ ಬಂದ ಖುಷಿಯಲ್ಲಿ ಕುಣಿದಾಡಿದ ಇಲಿ

ಈ ಸ್ಮಿಮ್ಮಿಂಗ್‌  ಕ್ಯಾಂಪ್‌ ಮೂರು ತಿಂಗಳವರೆಗೆ ಇದ್ದು, ಪ್ರತಿ ಸೆಷನ್‌ ನಲ್ಲಿ 30 ಉದ್ಯೋಗಿಗಳಿಗೆ ಭಾಗವಹಿಸುವ ಅವಕಾಶವಿದೆ. ಹೆಚ್ಚಿನ ಬೊಜ್ಜು ಹೊಂದಿರುವವರಿಗೆ ಮೊದಲ ಆದ್ಯತೆಯನ್ನು ಇಲ್ಲಿ ನೀಡಲಾಗುತ್ತದೆ  ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: