Viral Video: ಅರರೇ ಏನಿದು ಆಶ್ಚರ್ಯ…. ಮಳೆ ಬಂದ ಖುಷಿಯಲ್ಲಿ ಕುಣಿದಾಡಿದ ಇಲಿ

ಸಾಮಾನ್ಯವಾಗಿ ಇಲಿಗಳು ರಾತ್ರಿ  ಹೊತ್ತಿನಲ್ಲಿ  ಮನೆಯಲ್ಲಿರುವ ಇತರೆ ವಸ್ತುಗಳಾಗಿರಲಿ  ಅಥವಾ ಮನೆಯಲ್ಲಿರುವ ತರಕಾರಿಗಳನ್ನೆಲ್ಲಾ ತಿಂದು ಅಥವಾ ಕದ್ದೊಯ್ದು ಮೆಲ್ಲಗೆ ಎಸ್ಕೇಪ್‌ ಆಗುತ್ತವೆ. ಆದರೆ ಇಲ್ಲೊಂದು ಅಚ್ಚರಿಯ ಸಂಗತಿ ನಡೆದಿದ್ದು, ಮಳೆ ಬಂದ ಖುಷಿಯಲ್ಲಿ ಇಲಿಯೊಂದು ನಡು ರಸ್ತೆಯಲ್ಲಿಯೇ ಕುಣಿದು ಕುಪ್ಪಳಿಸುತ್ತಾ, ಮಳೆ ನೀರಿನಲ್ಲಿ ಆಟವಾಡಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗಿದೆ. 

Viral Video: ಅರರೇ ಏನಿದು ಆಶ್ಚರ್ಯ.... ಮಳೆ ಬಂದ ಖುಷಿಯಲ್ಲಿ ಕುಣಿದಾಡಿದ ಇಲಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 10, 2024 | 10:16 AM

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಸಾಮ್ರಾಜ್ಯಗಳಿಗೆ ಸಂಬಂಧಿಸಿದ ವಿಸ್ಮಯಕಾರಿ ವಿಡಿಯೋಗಳು ಕೆಲವೊಮ್ಮೆ ಹರಿದಾಡುತ್ತಿರುತ್ತವೆ. ಇಂತಹ ದೃಶ್ಯಗಳನ್ನು ನೋಡಿದಾಗ ಅರರೇ ಏನಿದು ವಿಸ್ಮಯ, ಹೀಗೆಲ್ಲಾ ನಡೆಯೋಕೇ ಸಾಧ್ಯಾನ  ಅಂತಾ ನಮಗೆ ಭಾಸವಾಗುತ್ತದೆ. ಸದ್ಯ ಅಂತಹದೇ ಅಚ್ಚರಿಯ ಹಾಗೇನೇ ತಮಾಷೆಯ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಪುಟಾಣಿ ಇಲಿಯೊಂದು ಮಳೆರಾಯ ಧರೆಗಿಳಿದ ಖುಷಿಯಲ್ಲಿ ಮಳೆ ನೀರಿನಲ್ಲಿ ಒದ್ದೆಯಾಗುತ್ತಾ  ಕುಣಿದು ಕುಪ್ಪಳಿಸುತ್ತಾ ಆಟವಾಡಿದೆ.  ಈ ಮುದ್ದಾದ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಉರಿ ಬಿಸಿಲಿನಲ್ಲಿ ಬಸವಳಿದಾಗ ದಿಢೀರ್‌ ಮಳೆ ಬಂದೆರೆ ಅದರ ಮಜಾವೇ ಬೇರೆ. ಹೀಗೆ ಮಳೆ ಬರುವ ಸಂದರ್ಭದಲ್ಲಿ ಹೆಚ್ಚಿನವರು ಮಳೆ ನೀರಿನಲ್ಲಿ ಆಟವಾಡುತ್ತಾರೆ, ಕುಣಿದು ಕುಪ್ಪಳಿಸುತ್ತಾರೆ. ಮನುಷ್ಯರಷ್ಟೇ ಅಲ್ಲ ಪ್ರಾಣಿಗಳು ಸಹ ಮಳೆಯಲ್ಲಿ ಆಟವಾಡುತ್ತವೆ ಎಂಬುದನ್ನು ಇಲ್ಲೊಂದು ಇಲಿ ತೋರಿಸಿಕೊಟ್ಟಿದೆ.

ಈ ವಿಶೇಷ ವಿಡಿಯೋವನ್ನು AMAZINGNATURE ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ವೈರಲ್‌ ವಿಡಿಯೋದಲ್ಲಿ ಇಲಿಯೊಂದು ಮಳೆ ನೀರಿನಲ್ಲಿ ನೆನೆಯುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ಜೋರಾಗಿ ಮಳೆ ಬರುವಂತಹ ಸಂದರ್ಭದಲ್ಲಿ ನಡು ರಸ್ತೆಯಲ್ಲಿದ್ದ ಇಲಿಯೊಂದು ದೇವ್ರೇ ಇಗಲಾದರೂ ಮಳೆ ಬಂತಲ್ವಾ ಎನ್ನುತ್ತಾ ಆಕಾಶದ ಕಡೆ ಮುಖ ಮಾಡಿ ಖುಷಿಯಲ್ಲಿ ಕುಣಿದಿದೆ. ಜೊತೆಗೆ ಜಿಗಿ ಜಿಗಿದು ಮಳೆ ನೀರಿನಲ್ಲಿ ಆಟವಾಡಿದೆ.

ಇದನ್ನೂ ಓದಿ: ಸಾವಿರಾರೂ ರೂ. ಪಾವತಿಸಿ ಐಷಾರಾಮಿ ಹೋಟೆಲ್‌ ರೂಮ್​​​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200ರಕ್ಕೂ ಹೆಚ್ಚು ತಿಗಣೆ ಕಡಿತ

ಜೂನ್‌ 05 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಅಯ್ಯಯ್ಯೋ ಈ ದೃಶ್ಯವಂತೂ ತುಂಬಾನೇ ಮುದ್ದಾಗಿದೆ ಎಂದು ಇಲಿಯ ಖುಷಿಯ ಕುಣಿತಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ