Zero Wasting Wedding: ಕಬ್ಬಿನ ಜಲ್ಲೆಯ ಮಂಟಪ, ತೆಂಗಿನ ಗರಿಯ ಚಪ್ಪರ; ಹೀಗೊಂದು ಪರಿಸರ ಸ್ನೇಹಿ ಮದುವೆ
ಇತ್ತೀಚಿನ ದಿನಗಳಲ್ಲಂತೂ ಮದುವೆಗಳನ್ನು ಆಡಂಬರದಿಂದ ಮಾಡಿದ್ರೇನೇ ವಿಶೇಷ ಎಂದುಕೊಂಡವರಿದ್ದಾರೆ. ಇಂತಹ ದುಂದುವೆಚ್ಚದ ಮದುವೆಗಳ ನಡುವೆ ಇಲ್ಲೊಂದು ಮದುವೆ ಸರಳವಾಗಿ ನಡೆದು ವಿಶೇಷ ಎನಿಸಿಕೊಂಡಿದೆ. ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ ಕಡಿಮೆ ಖರ್ಚಿನಲ್ಲಿ ನಡೆದ ಈ ಮದುವೆಗೆ ನೆಟ್ಟಿಗರು ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಈಗಿನ ಕಾಲದಲ್ಲಂತೂ ಜನರು ಮದುವೆಗೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಕೆಲವರು ಡೆಸ್ಟಿನೇಷನ್ ವೆಡ್ಡಿಂಗ್ ಅಂತ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೆ, ಇನ್ನೂ ಕೆಲವರು ಅದ್ಧೂರಿ ಮದುವೆಯ ನೆಪದಲ್ಲಿ ಹಣವನ್ನೆಲ್ಲಾ ಪೋಲು ಮಾಡುತ್ತಾರೆ. ಇಂತಹವರ ಮಧ್ಯೆ ಇಲ್ಲೊಂದು ಜೋಡಿ ಸರಳವಾಗಿ ವಿವಾಹವಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಈ ಮದುವೆ ಕಾರ್ಯಕ್ರಮದಲ್ಲಿ ಅಲಂಕಾರದಿಂದ ಹಿಡಿದು ಆಹಾರ ಪಾನೀಯಗಳವರೆಗೆ ನೈಸರ್ಗಿಕ ವಸ್ತುಗಳನ್ನೇ ಬಳಸಲಾಗಿದೆ. ಇಲ್ಲಿ ಕಬ್ಬಿನ ಜಲ್ಲೆ ಮತ್ತು ಎಲೆಗಳನ್ನು ಬಳಸಿ ಮದುವೆ ಮಂಟಪವನ್ನು ನಿರ್ಮಿಸಿದ್ದಾರೆ. ನಂತರ ಈ ಕಬ್ಬನ್ನು ದನಗಳಿಗೆ ಮೇವು ಹಾಕಲಾಗಿದೆ. ಅದೇ ರೀತಿ ಚಪ್ಪರವನ್ನು ತೆಂಗಿನ ಗರಿಗಳನ್ನು ಬಳಸಿ ನಿರ್ಮಿಸಲಾಗಿದೆ. ಊಟಕ್ಕೆ ಬಾಳೆ ಎಲೆಗಳನ್ನು ಬಳಸಿದ್ದಾರೆ. ಹಾಗೂ ಅತಿಥಿಗಳಿಗೆ ರಿಟರ್ನ್ ಗಿಫ್ಟ್ ಆಗಿ ಸೆಣಬಿನ ಚೀಲವನ್ನು ನೀಡಿದ್ದಾರೆ. ಆಡಂಬರದ ಮದುವೆಗಳ ನಡುವೆ ಈ ಝೀರೋ ವೇಸ್ಟಿಂಗ್ ವೆಡ್ಡಿಂಗ್ ನೆಟ್ಟಿಗರ ಹೃದಯ ಗೆದ್ದಿದೆ.
View this post on Instagram
ಈ ವಿಡಿಯೋವನ್ನು ಡಾ. ಪೂರ್ವಿ ಭಟ್ ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ತಜ್ಞರು ಇದನ್ನು ಝೀರೋ ವೇಸ್ಟಿಂಗ್ ಮದುವೆ ಎಂದು ಪರಿಗಣಿಸುತ್ತಾರೆಯೇ ಅಥವಾ ಇಲ್ಲವೇ ಎಂದು ನನಗೆ ತಿಳಿದಿಲ್ಲ, ಆದರೆ ಈ ಕಾರ್ಯಕ್ರಮದಲ್ಲಿ ನಾವು ಯಾವುದೇ ಪ್ಲಾಸ್ಟಿಕ್ ಉತ್ಪನ್ನವನ್ನು ಬಳಸಿಲ್ಲ ಜೊತೆಗೆ ಪರಿಸರ ಹಾನಿಯನ್ನು ಕಡಿಮೆ ಮಾಡುವ ಎಲ್ಲಾ ಪ್ರಯತ್ನವನ್ನು ಮಾಡಿದ್ದೇವೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಿಗ್ನಲ್ ಜಂಪ್; 4 ಪಲ್ಟಿ ಹೊಡೆದ ಕಾರು, ಭೀಕರ ಅಪಘಾತದ ವಿಡಿಯೋ ವೈರಲ್
ಒಂದು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 8.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಆಡಂಬರದ ಮದುವೆಗಳ ನಡುವೆ ಈ ಝೀರೋ ವೇಸ್ಟಿಂಗ್ ವೆಡ್ಡಿಂಗ್ ನೆಟ್ಟಿಗರ ಹೃದಯ ಗೆದ್ದಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ