Viral News: ಬ್ರೈನ್ ಸ್ಟ್ರೋಕ್‌ನಿಂದ ಸಾವನ್ನಪ್ಪಿದ ಪತಿ; ಮಕ್ಕಳೊಂದಿಗೆ ಪಾರ್ಟಿ ಮಾಡಿ ಸಂಭ್ರಮಿಸಿದ ಪತ್ನಿ
ಪತಿಯನ್ನು ಕಳೆದುಕೊಂಡಾಗ ಪತ್ನಿ ನೋವಿನಿಂದ ಮರುಗುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಪತಿಯ ಸಾವಿನ ಬಳಿಕ ಅದ್ಧೂರಿಯಾಗಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾಳೆ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಪತಿಯ ಸಾವಿಗೆ ಈಕೆ ಪಾರ್ಟಿ ಮಾಡಲು ಬಲವಾದ ಕಾರಣವಿದೆ.
ಮಹಿಳೆಯೊಬ್ಬಳು ತನ್ನ ಪತಿಯ ಮರಣದ ನಂತರ ಅದ್ಧೂರಿಯಾಗಿ ಪಾರ್ಟಿ ಮಾಡಿ ಸಂಭ್ರಮಿಸಿರುವ ಘಟನೆ ಅಮೆರಿಕದ ಅರಿಜೋನಾದಲ್ಲಿ ನಡೆದಿದೆ. ಸುಮಾರು 500 ಅತಿಥಿಗಳನ್ನೊಳಗೊಂಡ ಪಾರ್ಟಿ ಆಯೋಜಿಸಿದ್ದು, ಈ ಮೂಲಕ ತನ್ನ ಪತಿಗೆ ಸಂತೋಷದಿಂದ ವಿದಾಯ ಹೇಳಿದ್ದಾಳೆ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಪತಿಯ ಸಾವಿಗೆ ಪಾರ್ಟಿ ಮಾಡಲು ಬಲವಾದ ಕಾರಣವಿದೆ.
ಪತ್ನಿ ಈ ರೀತಿ ಮಾಡಲು ಹೇಗೆ ಸಾಧ್ಯ ಎಂದು ನೀವು ಆಶ್ಚರ್ಯ ಪಡುತ್ತಿರಬೇಕು. ಆದರೆ ನೀವು ಯೋಚಿಸುತ್ತಿರುವಂತೆ ಯಾವುದೂ ಇಲ್ಲ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, 40 ವರ್ಷದ ಕೇಟಿ ಯಂಗ್ ಎಂಬ ಮಹಿಳೆಯ ಪತಿ ಬ್ರೈನ್ ಸ್ಟ್ರೋಕ್‌ನಿಂದ ಸಾವನ್ನಪ್ಪಿದ್ದಾರೆ. ಆಕೆಗೆ 12 ರಿಂದ ಎಂಟು ವರ್ಷದ ಮೂರು ಚಿಕ್ಕ ಮಕ್ಕಳಿದ್ದಾರೆ. ವಾಸ್ತವವಾಗಿ, ಕೇಟಿ ತಮ್ಮ ಪತಿಯ ಸಾವಿನ ಸುದ್ದಿಯಿಂದ ಮಕ್ಕಳು ಆಘಾತಕ್ಕೊಳಗಾಗಬಾರದೆಂದು ಆಕೆ ದು:ಖದ ನಡುವೆಯೂ ಅದ್ಧೂರಿ ಪಾರ್ಟಿ ಆಯೋಜಿಸಿದ್ದಾಳೆ.
ಇದನ್ನೂ ಓದಿ: ಸಿಗ್ನಲ್ ಜಂಪ್; 4 ಪಲ್ಟಿ ಹೊಡೆದ ಕಾರು, ಭೀಕರ ಅಪಘಾತದ ವಿಡಿಯೋ ವೈರಲ್
‘ಮಕ್ಕಳು ತಮ್ಮ ತಂದೆಯೊಂದಿಗೆ ಕಳೆದ ಒಳ್ಳೆಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ಮುಂದುವರಿಯಬೇಕೆಂದು ನಾನು ಬಯಸುತ್ತೇನೆ. ಹಾಗಾಗಿ ದುಃಖದ ಬದಲು, ನಾನು ನನ್ನ ಪತಿಯೊಂದಿಗೆ ಕಳೆದ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳುವ ಪಾರ್ಟಿಯನ್ನು ಆಯೋಜಿಸಿದೆ ಎಂದು ಕೇಟಿ ಹೇಳಿಕೊಂಡಿರುವುದು ವರದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ