ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

|

Updated on: Dec 03, 2019 | 9:32 AM

ವಾಷಿಂಗ್ಟನ್: ಇಸ್ರೋದ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ, ಅವಶೇಷಗಳನ್ನು ನಾಸಾ ಪತ್ತೆ ಹಚ್ಚಿದೆ. ಚಂದ್ರನ ಮೇಲೆ ಲ್ಯಾಂಡ್ ಆಗುವ ಕೊನೆ ಕ್ಷಣದಲ್ಲಿ ಲ್ಯಾಂಡರ್ ಪತನವಾಗಿತ್ತು. ಇದೀಗ ವಿಕ್ರಮ್ ಲ್ಯಾಂಡರ್​ ಪತನವಾದ ಸ್ಥಳವನ್ನು ನಾಸಾದ ಲೂನಾರ್​ ಆರ್ಬಿಟರ್ ಪತ್ತೆಹಚ್ಚಿದೆ. ಅಲ್ಲದೆ ವಿಕ್ರಮ್ ಲ್ಯಾಂಡಿಂಗ್​ಗೂ ಮೊದಲು ಚಂದ್ರನ ಮೇಲ್ಮೈ ಹೇಗಿತ್ತು, ಲ್ಯಾಂಡಿಂಗ್​​ ಬಳಿಕ ಚಂದ್ರನ ಮೇಲ್ಮೈ ಹೇಗಿದೆ ಎಂಬ ಚಿತ್ರ ಸೆರೆ ಹಿಡಿದು ಬಿಡುಗಡೆ ಮಾಡಿದೆ. ಜುಲೈ 22ರಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 2 […]

ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ
Follow us on

ವಾಷಿಂಗ್ಟನ್: ಇಸ್ರೋದ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ, ಅವಶೇಷಗಳನ್ನು ನಾಸಾ ಪತ್ತೆ ಹಚ್ಚಿದೆ. ಚಂದ್ರನ ಮೇಲೆ ಲ್ಯಾಂಡ್ ಆಗುವ ಕೊನೆ ಕ್ಷಣದಲ್ಲಿ ಲ್ಯಾಂಡರ್ ಪತನವಾಗಿತ್ತು. ಇದೀಗ ವಿಕ್ರಮ್ ಲ್ಯಾಂಡರ್​ ಪತನವಾದ ಸ್ಥಳವನ್ನು ನಾಸಾದ ಲೂನಾರ್​ ಆರ್ಬಿಟರ್ ಪತ್ತೆಹಚ್ಚಿದೆ. ಅಲ್ಲದೆ ವಿಕ್ರಮ್ ಲ್ಯಾಂಡಿಂಗ್​ಗೂ ಮೊದಲು ಚಂದ್ರನ ಮೇಲ್ಮೈ ಹೇಗಿತ್ತು, ಲ್ಯಾಂಡಿಂಗ್​​ ಬಳಿಕ ಚಂದ್ರನ ಮೇಲ್ಮೈ ಹೇಗಿದೆ ಎಂಬ ಚಿತ್ರ ಸೆರೆ ಹಿಡಿದು ಬಿಡುಗಡೆ ಮಾಡಿದೆ.

ಜುಲೈ 22ರಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 2 ನಭಕ್ಕೆ ಜಿಗಿದಿತ್ತು. ಸುಮಾರು 47 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಚಂದ್ರನ ಕಡೆ ಹೊರಟಿದ್ದ ವಿಕ್ರಮ್, ಸೆಪ್ಟಂಬರ್ 7ರಂದು ಚಂದ್ರನ ಮೇಲೆ​ ಇಳಿಯಬೇಕಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್​ ವಿಜ್ಞಾನಿಗಳ ಸಂಪರ್ಕಕ್ಕೆ ಸಿಗಲಿಲ್ಲ.

Published On - 7:14 am, Tue, 3 December 19