ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಬಂದು 11 ದಿನಗಳೇ ಕಳೆದಿವೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಾಕಿಸ್ತಾನದಲ್ಲಿ ಹೊಸ ಸಮ್ಮಿಶ್ರ ಸರ್ಕಾರ ರಚನೆಗೆ ಹಲವು ದಿನಗಳ ಮಾತುಕತೆಗಳ ಬಳಿಕ ಅಂತಿಮವಾಗಿ ಒಪ್ಪಂದಕ್ಕೆ ಬಂದಿವೆ. ಪಕ್ಷದ ಮುಖಂಡರು ಮಾಹಿತಿ ಹಂಚಿಕೊಂಡಿದ್ದಾರೆ. ಶೆಹಬಾಜ್ ಷರೀಫ್ ದೇಶದ ಮುಂದಿನ ಪ್ರಧಾನಿಯಾಗಲಿದ್ದಾರೆ. ಈ ಹಿಂದೆ ಫೆಬ್ರವರಿ 8 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ.
ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಮಂಗಳವಾರ ತಡರಾತ್ರಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಮತ್ತೆ ಪ್ರಧಾನಿಯಾಗಲಿದದ್ದಾರೆ ಎಂದು ಘೋಷಿಸಿದರು, ಆದರೆ ಪಿಪಿಪಿ ಸಹ ಅಧ್ಯಕ್ಷ ಆಸಿಫ್ ಜರ್ದಾರಿ ದೇಶದ ಮುಂದಿನ ಅಧ್ಯಕ್ಷರಾಗಲಿದ್ದಾರೆ.
ಈ ಹಿಂದೆ ನವಾಜ್ ಷರೀಫ್ ಮತ್ತು ಜೈಲು ಪಾಲಾಗಿರುವ ಇಮ್ರಾನ್ ಖಾನ್ ತಮ್ಮದೇ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದ್ದರು. ಈಗ ಇಬ್ಬರೂ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಉತ್ಸುಕರಾಗಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ ಎಂದು ಹೇಳೋಣ, ಇದರಿಂದಾಗಿ ಅಧಿಕಾರಕ್ಕೆ ಬರಲು ಪಿಎಂಎಲ್-ಎನ್ ಮತ್ತು ಪಿಪಿಪಿ ಮೈತ್ರಿ ಮಾಡಿಕೊಳ್ಳಬೇಕಾಯಿತು. ಎರಡು ಪಕ್ಷಗಳ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದವು, ನಂತರ ಒಪ್ಪಂದಕ್ಕೆ ಬರಲಾಯಿತು. ಚುನಾವಣೆಯಲ್ಲಿ, ಪಿಟಿಐ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಗರಿಷ್ಠ 92 ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳನ್ನು ಗೆದ್ದರೆ, ಪಿಎಂಎಲ್-ಎನ್ 79 ಮತ್ತು ಪಿಪಿಪಿ 54 ಸ್ಥಾನಗಳನ್ನು ಗೆದ್ದರು.
ಮತ್ತಷ್ಟು ಓದಿ: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ, ಇಡೀ ದೇಶಾದ್ಯಂತ ಮೊಬೈಲ್ ಸೇವೆ ಸ್ಥಗಿತ
ಪಾಕಿಸ್ತಾನದಲ್ಲಿ ಯಾರು ಎಷ್ಟು ಸೀಟುಗಳನ್ನು ಪಡೆದಿದ್ದಾರೆ?
ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು 93 ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳನ್ನು ಗೆದ್ದಿದ್ದಾರೆ. ಈ ಬಹುತೇಕ ಸ್ವತಂತ್ರರು ಪಿಟಿಐ ಬೆಂಬಲಿತರಾಗಿದ್ದಾರೆ. ಪಿಎಂಎಲ್-ಎನ್ 75 ಸ್ಥಾನಗಳನ್ನು ಗೆದ್ದರೆ, ಪಿಪಿಪಿ 54 ಸ್ಥಾನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮುತ್ತಹಿದಾ ಕ್ವಾಮಿ ಮೂವ್ಮೆಂಟ್ ಪಾಕಿಸ್ತಾನ (MQM-P) ಸಹ ತನ್ನ 17 ಸ್ಥಾನಗಳೊಂದಿಗೆ ಅವರನ್ನು ಬೆಂಬಲಿಸಲು ಒಪ್ಪಿಕೊಂಡಿದೆ.
ಸರ್ಕಾರವನ್ನು ರಚಿಸಲು, 266 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿ ಅಥವಾ ಸಂಸತ್ತಿನ ಕೆಳಮನೆಯಲ್ಲಿ ಸ್ಪರ್ಧಿಸಿದ 265 ಸ್ಥಾನಗಳಲ್ಲಿ ಪಕ್ಷವು 133 ಅನ್ನು ಗೆಲ್ಲಬೇಕು.
2022 ರಿಂದ 2023 ರವರೆಗೆ ಪ್ರಧಾನಿಯಾಗಿದ್ದ ಶೆಹಬಾಜ್ ಷರೀಫ್, ಹೊಸ ಸರ್ಕಾರದ ಮುಂದಿನ ಪ್ರಯಾಣವು ಸುಲಭವಲ್ಲ ಆದರೆ ಅನೇಕ ತೊಂದರೆಗಳು ಮತ್ತು ಅಡೆತಡೆಗಳಿಂದ ಕೂಡಿದೆ ಎಂದು ಹೇಳಿದರು. ಸಮ್ಮಿಶ್ರ ಮೈತ್ರಿಯು ಒಟ್ಟಾಗಿ ಅವುಗಳನ್ನು ನಿಭಾಯಿಸಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಇಮ್ರಾನ್ ಖಾನ್ ಹೇಳಿದ್ದೇನು?
ಇಮ್ರಾನ್ ಖಾನ್ ಅವರು ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಿರುವುದನ್ನು ಬಲವಾಗಿ ಖಂಡಿಸಿದ್ದಾರೆ, ನೈಜ ಫಲಿತಾಂಶಗಳನ್ನು ಮರೆಮಾಡಲು ಬಳಸಲಾಗಿದೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ