Viral News: ವಿಚ್ಛೇದನದ ವೇಳೆ ಕಿಡ್ನಿ ವಾಪಸ್ ಕೇಳಿದ ಪತಿ

2001 ರಲ್ಲಿ, ತನ್ನ ಪತ್ನಿಯ ಜೀವ ಉಳಿಸಲು ಪತಿ ಮುಂದಾಗಿದ್ದು, ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾನೆ. ಆದರೆ ಇದಾದ ಕೆಲವೇ ವರ್ಷಗಳ ಬಳಿಕ ಪತ್ನಿ ಡೊನ್ನೆಲ್ ವಿಚ್ಛೇದನ ಪಡೆಯಲು ಕೋರ್ಟ್​​​​ಗೆ ಅರ್ಜಿ ಸಲ್ಲಿಸಿದ್ದಳು.ಇದರಿಂದ ಕೋಪಗೊಂಡ ಪತಿ ಕಿಡ್ನಿ ವಾಪಸ್ ಕೇಳಿದ್ದಾನೆ.

Viral News: ವಿಚ್ಛೇದನದ ವೇಳೆ ಕಿಡ್ನಿ ವಾಪಸ್ ಕೇಳಿದ ಪತಿ
ವಿಚ್ಛೇದನದ ವೇಳೆ ಕಿಡ್ನಿ ವಾಪಸ್ ಕೇಳಿದ ಪತಿ Image Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Feb 21, 2024 | 12:18 PM

ವಿಚ್ಛೇದನದ ವೇಳೆ ‘ನನ್ನ ಕಿಡ್ನಿಯನ್ನು ನನಗೆ ಮರಳಿಸು’ ಎಂದು ಪತಿಯೊಬ್ಬ ಪತ್ನಿಗೆ ಕೋರ್ಟ್​​ನಲ್ಲಿ ಬೇಡಿಕೆ ಇಟ್ಟಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಇದಲ್ಲದೆ ಕಿಡ್ನಿ ವಾಪಸ್​​ ಕೊಡಲು ಆಗದ್ದಿದ್ದಲ್ಲಿ 1.2 ಮಿಲಿಯನ್ ಪೌಂಡ್(12.56ಕೋಟಿ ರೂ.) ಹಣ ನೀಡಬೇಕಾಗಿ ಬೇಡಿಕೆಯಿಟ್ಟಿದ್ದಾನೆ. ಪತ್ನಿಯ ಎರಡು ಕಿಡ್ನಿಯೂ ವಿಫಲವಾದ್ದುದನ್ನು ತಿಳಿದು ಆಕೆಯನ್ನು ಬದುಕುಳಿಸುವ ಸಲುವಾಗಿ 2001 ರಲ್ಲಿ ಪತಿ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದ. ಆದರೆ ವರ್ಷಗಳ ನಂತರ ಇಬರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದ ಕಾರಣ ವಿಚ್ಛೇದನ ಪಡೆದುಕೊಳ್ಳಲು ಪತ್ನಿ ಕೋರ್ಟ್​​​​ ಮೆಟ್ಟಿಲೇರಿದ್ದಾಳೆ. ಇದರಿಂದ ಕೋಪಗೊಂಡ ಪತಿ ಕಿಡ್ನಿ ವಾಪಸ್ ಕೇಳಿದ್ದಾನೆ.

ಡೈಲಿ ಸ್ಟಾರ್ ವರದಿಯ ಪ್ರಕಾರ, 1990ರಲ್ಲಿ ರಿಚರ್ಡ್ ಬಟಿಸ್ಟಾ(ಪತಿ) ಮತ್ತು ಡೊನ್ನೆಲ್ (ಪತ್ನಿ) ವಿವಾಹವಾಗಿದ್ದರು. ಇವರಿಗೆ ಮೂರು ಮಕ್ಕಳಿದ್ದಾರೆ. ಆದರೆ 2001 ರಲ್ಲಿ, ಡೊನ್ನೆಲ್​​ಗೆ ತೀವ್ರ ಅನಾರೋಗ್ಯ ಕಾಡಿದೆ. ಕಡೆಗೆ ಆಕೆಯ ಎರಡು ಕಿಡ್ನಿಯೂ ವಿಫಲವಾಗಿದೆ ಎಂದು ವೈದ್ಯರು ಘೋಷಿಸಿದ್ದರು. ಈ ವೇಳೆ ತನ್ನ ಪತ್ನಿಯ ಜೀವ ಉಳಿಸಲು ಬಟಿಸ್ಟಾ ಮುಂದಾಗಿದ್ದು, ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾನೆ. ಆದರೆ ಇದಾದ ಕೆಲವೇ ವರ್ಷಗಳ ಬಳಿಕ ಪತ್ನಿ ಡೊನ್ನೆಲ್ ವಿಚ್ಛೇದನ ಪಡೆಯಲು ಕೋರ್ಟ್​​​​ಗೆ ಅರ್ಜಿ ಸಲ್ಲಿಸಿದ್ದಳು. ಇದರಿಂದ ಸಾಕಷ್ಟು ನೋವುಂಡ ಪತಿ ನನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದಾನೆ. ಅಲ್ಲದೆ ಕಿಡ್ನಿ ವಾಪಸ್ ಇಲ್ಲವೇ ಹಣ ಕೊಡಿ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಮಡದಿಗೂ ಸಮಾನ ಗೌರವ, ವಧುವಿನ ಪಾದ ಸ್ಪರ್ಶಿಸಿದ ವರ, ನಾಚಿ ನೀರಾದ ವಧು

ಆದರೆ ರಿಚರ್ಡ್ ಗೆ ನ್ಯಾಯ ಸಿಗಲಿಲ್ಲ. ಕಿಡ್ನಿಯನ್ನು ವಾಪಸ್ ನೀಡಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕಿಡ್ನಿ ವಾಪಸ್ ಕೊಡಲು ಸಾಧ್ಯವಿಲ್ಲ . ಡೊನ್ನೆಲ್ ತನ್ನ ಮೂತ್ರಪಿಂಡವನ್ನು ಹಿಂದಿರುಗಿಸಲು ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇದರಿಂದ ಅವರ ಪ್ರಾಣಕ್ಕೂ ಅಪಾಯವಿದೆ. ಆದ್ದರಿಂದ ಮೂತ್ರಪಿಂಡವನ್ನು ಮರಳಿ ನೀಡಲು ಸಾಧ್ಯವಿಲ್ಲ ಎಂದು ತಜ್ಞರ ಹೇಳಿಯನ್ನು ಆಧರಿಸಿ ಕೋರ್ಟ್​ ತೀರ್ಪು ನೀಡಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್