Viral Video : ಮಡದಿಗೂ ಸಮಾನ ಗೌರವ, ವಧುವಿನ ಪಾದ ಸ್ಪರ್ಶಿಸಿದ ವರ, ನಾಚಿ ನೀರಾದ ವಧು
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಸಂಭ್ರಮದ ಕ್ಷಣ. ಈ ಘಳಿಗೆಯನ್ನು ಪ್ರತಿಯೊಬ್ಬರು ಎಂಜಾಯ್ ಮಾಡುತ್ತಾರೆ. ಇತ್ತೀಚೆಗಿನ ದಿನಗಳಲ್ಲ ವಧು, ವರ ಒಟ್ಟಿಗೆ ನೃತ್ಯ ಮಾಡುವುದು, ಸಂಬಂಧಿಕರು ಡಾನ್ಸ್ ಮೂಲಕ ವಧುವರನನ್ನು ಮದುವೆ ಮಂಟಪಕ್ಕೆ ಕರೆತರುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ವರ, ವಧುವಿನ ಕಾಲಿಗೆ ಬಿದ್ದಿದ್ದಾನೆ. ವರನು ಕಾಲಿಗೆ ಬೀಳುತ್ತಿದ್ದಂತೆ ವಧುವು ನಾಚಿ ನೀರಾಗಿದ್ದಾಳೆ. ಇತ್ತ ಸಂಬಂಧಿಕರು ಚಪ್ಪಾಳೆ ತಟ್ಟಿ ಆ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ.
ಮದುವೆ ಒಂದು ಪವಿತ್ರ ಬಂಧ. ಮದುವೆ ಎರಡು ಮನಸ್ಸುಗಳ ಬೆಸುಗೆ, ಕುಟುಂಬಗಳ ಕೂಡುವಿಕೆ. ವಿಭಿನ್ನ ವ್ಯಕ್ತಿಗಳು ಕಷ್ಟ ಸುಖ ಏನೇ ಇರಲಿ, ಜೀವನ ಪರ್ಯಂತ ಜೊತೆಯಾಗಿ ಬದುಕಬೇಕು. ತನ್ನದೇ ನಂಬಿ ಬಂದ ಮಡದಿಗೆ ಗೌರವ ನೀಡುವುದು ಮುಖ್ಯವಾಗುತ್ತದೆ. ಕೆಲವೊಮ್ಮೆ ಮದುವೆಯ ಮಂಟಪದಲ್ಲಿಯೇ ವಧು ವರರರ ನಡುವಿನ ಬಾಂಧವ್ಯವನ್ನು ಸಾರುವ ವಿಡಿಯೋಗಳು ವೈರಲ್ ಆಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ವರನು ವಧುವಿನ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾನೆ.
ಹೌದು , ವಿವಾಹ ಕಾರ್ಯಕ್ರಮವೊಂದರಲ್ಲಿ ವಧು ವರನ ಕಾಲಿಗೆ ಬೀಳುವುದನ್ನು ನೋಡಿರಬಹುದು. ಆದರೆ ಈ ವಿಡಿಯೋದಲ್ಲಿ ವರನೊಬ್ಬ ವಧುವಿನ ಪಾದಗಳನ್ನು ಸ್ಪರ್ಶಿಸುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅಸ್ಸಾಂನ ಗುವಾಹಟಿಯ ಕಲ್ಲೋಲ್ ದಾಸ್ ಅವರು ತಮ್ಮ ಮದುವೆಯ “ಪೀಕ್ ಕ್ಷಣ” ದ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆರೆ.
ಈ ವಿಡಿಯೋದ ಜೊತೆಗೆ “ಸಮಾಜದಿಂದ” ನನಗೆ ಸಾಕಷ್ಟು ಟೀಕೆಗಳು ಬಂದಿದ್ದರೂ, ನಾನು ಯಾರ ಅಭಿಪ್ರಾಯಗಳನ್ನು ಅಥವಾ ಆಚರಣೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ. ನಾನು ಏನು ಮಾಡಿದರೂ ಅದು ನನ್ನ ಹೆಂಡತಿಯ ಗೌರವಕ್ಕಾಗಿ” ಎಂದು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವೀಡಿಯೊದಲ್ಲಿ, ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದು, ವಧು ವರನ ಪಾದಗಳನ್ನು ಸ್ಪರ್ಶಿಸುತ್ತಿರುವುದನ್ನು ಕಾಣಬಹುದು. ಅನಂತರದಲ್ಲಿ ವರನು, ಮಡದಿಯ ಪಾದಗಳನ್ನು ಸ್ಪರ್ಶಿಸಿದ್ದು, ಅಲ್ಲಿಂದವರು ಜೋರಾಗಿ ಕಿರುಚುತ್ತಾ, ಚಪ್ಪಾಳೆ ತಟ್ಟಿದ್ದಾರೆ. ಇತ್ತ ವರನು ಕಾಲಿಗೆ ಬೀಳುತ್ತಿದ್ದಂತೆ ವಧುವು ನಾಚಿ ನೀರಾಗಿದ್ದಾಳೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಎರಡು ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದ್ದು, ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ನೆಚ್ಚಿನ ಡೋರೆಮಾನ್ ಕಾರ್ಟೂನ್ ಪಾತ್ರಗಳ ಹಿನ್ನೆಲೆ ಧ್ವನಿ ಈ ಸುಂದರಿಯದ್ದು
ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು, “ಯಾರೂ ಕೂಡ ಅವನನ್ನು ನಿಲ್ಲಿಸಲಿಲ್ಲ, ಬದಲಾಗಿ ವರನನ್ನು ಹೇಗೆ ಹುರಿದುಂಬಿಸಿದರು ಎಂಬುದನ್ನು ಗಮನಿಸಿ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ಪ್ರತಿ ಮದುವೆಯೂ ಹೀಗೆಯೇ ಇರಬೇಕು. ಸಮಾನ ಗೌರವ ನೀಡುವುದು ಮೌಲ್ಯಯುತವಾಗಿದೆ. ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ