Video Viral: ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದು ಗಳಗಳನೆ ಅತ್ತ ಮಹಿಳಾ ಅಧಿಕಾರಿ
ಗುತ್ತಿಗೆದಾರರಿಂದ ಅಧಿಕಾರಿ ಕೆ.ಜಗಜ್ಯೋತಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಲಂಚ ತೆಗೆದುಕೊಂಡಿರುವ ಹಣವನ್ನು ಟೇಬಲ್ ಮೇಲಿಟ್ಟುಕೊಂಡು ಗಳಗಳನೆ ಅಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅನಗತ್ಯ ಲಾಭ ಪಡೆಯಲು ತನ್ನ ಕರ್ತವ್ಯದಲ್ಲಿ ಅಪ್ರಾಮಾಣಿಕತೆ ತೋರಿರುವುದರಿಂದ ಆಕೆಯನ್ನು ಬಂಧಿಸಲಾಗಿದ್ದು, ಹೈದರಾಬಾದ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತೆಲಂಗಾಣದ ಬುಡಕಟ್ಟು ಕಲ್ಯಾಣ ಇಂಜಿನಿಯರಿಂಗ್ ಇಲಾಖೆಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಸುಮಾರು 84,000 ರೂಪಾಯಿ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಲಂಚ ತೆಗೆದುಕೊಂಡಿರುವ ಹಣವನ್ನು ಟೇಬಲ್ ಮೇಲಿಟ್ಟುಕೊಂಡು ಗಳಗಳನೆ ಅಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ದೂರು ಸ್ವೀಕರಿಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಂಚದ ರೂಪದಲ್ಲಿ ಹಣ ಸ್ವೀಕರಿಸುತ್ತಿದ್ದ ಅಧಿಕಾರಿ ಕೆ.ಜಗಜ್ಯೋತಿಯವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹೈದರಾಬಾದ್‌ನ ಮಸಾಬ್ ಟ್ಯಾಂಕ್ ಪ್ರದೇಶದ ಬೋಡುಕರ್ ಗಂಗಣ್ಣ ಎಂಬ ಗುತ್ತಿಗೆದಾರರಿಂದ ಅಧಿಕಾರಿ ಕೆ.ಜಗಜ್ಯೋತಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಅನಗತ್ಯ ಲಾಭ ಪಡೆಯಲು ಜ್ಯೋತಿ ತನ್ನ ಕರ್ತವ್ಯದಲ್ಲಿ ಅಪ್ರಾಮಾಣಿಕತೆ ತೋರಿರುವುದರಿಂದ ಆಕೆಯನ್ನು ಬಂಧಿಸಲಾಗಿದ್ದು, ಹೈದರಾಬಾದ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ: ನಿಮ್ಮ ನೆಚ್ಚಿನ ಡೋರೆಮಾನ್ ಕಾರ್ಟೂನ್ ಪಾತ್ರಗಳ ಹಿನ್ನೆಲೆ ಧ್ವನಿ ಈ ಸುಂದರಿಯದ್ದು
ವಿಡಿಯೋ ಇಲ್ಲಿದೆ ನೋಡಿ:
#ACB Arrests Executive Engineer for Bribery
Executive Engineer Jagat Jyoti was apprehended by Telangana ACB for accepting a bribe at the Tribal Administration Building. ACB officers caught Jyoti red-handed, receiving a bribe of ₹84,000 at the tribal welfare office in Masab Tank pic.twitter.com/NrToqnOGr4
— Informed Alerts (@InformedAlerts) February 19, 2024
@InformedAlerts ಎಂಬ ಟ್ವಿಟರ್ ಖಾತೆಯಲ್ಲಿ ಮಹಿಳಾ ಅಧಿಕಾರಿ ಲಂಚ ಸ್ವೀಕರಿಸಿ ಸಿಕ್ಕಿ ಬಿದ್ದಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ತಾನು ಸಿಕ್ಕಿ ಬೀಳುತ್ತಿದ್ದಂತೆ ಗಳಗಳನೆ ಅಳುತ್ತಿರುವ ಮಹಿಳಾ ಅಧಿಕಾರಿಯನ್ನು ಕಾಣಬಹುದು.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ